ಚನ್ನರಾಯಪಟ್ಟಣ : ತಾಲೂಕಿನ ಶ್ರವಣಬೆಳಗೊಳ ಹೋಬಳಿ ಕೋರೆನಹಳ್ಳಿ ಗ್ರಾಮದ ಯುವ ಮುಖಂಡರುಗಳು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಯುವ ಮುಖಂಡರಾದ ದಿನೇಶ್, ರಂಗಸ್ವಾಮಿ, ಗಣೇಶ್, ವಿನೋದ್, ಪ್ರಸನ್ನ, ಗೋಪಾಲ, ಮಂಜು, ಮುರುಳಿ, ಅಭಿಷೇಕ್, ಯಶೋದ, ಕಾಂತಮ್ಮ ಸೇರಿದಂತೆ ಹಲವಾರು ಕಾರ್ಯಕರ್ತರು ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳನ್ನು ತೊರೆದು, ಬಿಜೆಪಿ ಮುಖಂಡ ಸಿ.ಆರ್. ಚಿದಾನಂದ ಅವರ ನೇತೃತ್ವದಲ್ಲಿ ಪಕ್ಷ ಪ್ರವೇಶ ಮಾಡಿದರು.
ಇದನ್ನು ಓದಿ: ಚನ್ನರಾಯಪಟ್ಟಣ : ಆನೆಕೆರೆ ಸರ್ಕಾರಿ ಶಾಲೆಯಲ್ಲಿ “ನಾವು ಮತ್ತು ಕೆರೆ” ಕಲಾ ಅಂತರ್ಗತ ಪ್ರಯೋಗ ಉದ್ಘಾಟನೆ
ಈ ಸಂದರ್ಭ ಸಿ.ಆರ್. ಚಿದಾನಂದ ಅವರು ಮಾತನಾಡಿ, “ಯುವಕರು ಬಿಜೆಪಿ ಪಕ್ಷದ ರಾಷ್ಟ್ರವಾದಿ ಧೋರಣೆಗೆ ಹಾಗೂ ಅಭಿವೃದ್ಧಿ ಅಭಿಯಾನಕ್ಕೆ ವಿಶ್ವಾಸ ತೋರಿದ್ದಾರೆ. ಇವರ ಸೇರ್ಪಡೆ ಪಕ್ಷಕ್ಕೆ ಹೊಸ ಉತ್ಸಾಹ ನೀಡುತ್ತದೆ,” ಎಂದು ಹೇಳಿದರು.
ಸೇರ್ಪಡೆ ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಹಾಜರಿದ್ದರು.
— ವರದಿ : ಮಂಜುನಾಥ್ ಐ.ಕೆ.
