
ನವದೆಹಲಿ: ಭಾರತದ ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತನಾಗೇಶ್ವರನ್ ಅವರ ಅಧಿಕಾರಾವಧಿ ಇನ್ನೂ ಎರಡು ವರ್ಷ ವಿಸ್ತರಣೆ ಆಗಿದೆ.
2027ರ ಮಾರ್ಚ್ 31ರವರೆಗೂ ಅವರು ಭಾರತದ ಸಿಇಎ ಆಗಿ ಮುಂದುವರಿಯಲಿದ್ದಾರೆ. 2022ರಲ್ಲಿ ಅವರನ್ನು ಸರ್ಕಾರ ತನ್ನ ಮುಖ್ಯ ಆರ್ಥಿಕ ಸಲಹೆಗಾರರನ್ನಲಾಗಿ ಮೂರು ವರ್ಷಗಳಿಗೆ ನೇಮಕ ಮಾಡಿತ್ತು. 2022ರ ಜನವರಿ 28ರಂದು ಅವರು ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿ ಅಧಿಕಾರ ವಹಿಸಿಕೊಂಡಿದ್ದರು.
ಈ ವರ್ಷ ಮಾರ್ಚ್ 31ರವರೆಗೆ ಅವರ ಅಧಿಕಾರಾವಧಿ ಇತ್ತು. ನರೇಂದ್ರ ಮೋದಿ ನೇತೃತ್ವದ ಸಂಪುಟ ನೇಮಕಾತಿ ಸಮಿತಿ ವಿ ಅನಂತನಾಗೇಶ್ವನ್ ಅವರನ್ನು ಇನ್ನೂ ಎರಡು ವರ್ಷ ಸಿಇಎ ಆಗಿ ಮುಂದುವರಿಸುವ ನಿರ್ಧಾರ ಮಾಡಿದೆ.