ಕೆ.ಆರ್.ಪೇಟೆ: ತಾಲ್ಲೂಕಿನ ಬೂಕನಕೆರೆ ಹೋಬಳಿಯ ಚಿಕ್ಕಗಾಡಿಗನಹಳ್ಳಿ ಗ್ರಾಮದ ಹಿರಿಯ ಮುಖಂಡ ಸೋಮೇಗೌಡರನ್ನು ಅಖಂಡ ಕರ್ನಾಟಕ ರಕ್ಷಣಾ ಸೇವಾದಳದ ರಾಜ್ಯ ಅಧ್ಯಕ್ಷರಾದ ಡಾ: ಸಿಂಹ ಶಿವುಗೌಡ ಅವರು ಬೂಕನಕೆರೆ ಹೋಬಳಿಯ ನೂತನ ಅಧ್ಯಕ್ಷರಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ನೇಮಕ ಪತ್ರ ಸ್ವೀಕರಿಸಿ ಮಾತನಾಡಿದ ನೂತನ ಚಿಕ್ಕಗಾಡಿಗನಹಳ್ಳಿ ಸೋಮೇಗೌಡ ನನ್ನನು ಅಖಂಡ ಕರ್ನಾಟಕ ರಕ್ಷಣಾ ಸೇವಾ ದಳ ಸಂಘಟನಾ ಪರಿವಾರಕ್ಕೆ ಸ್ವಾಗತಿಸಿ ,ಬೂಕನಕೆರೆ ಹೋಬಳಿಯ ನೇಮಕ ಮಾಡಿದ್ದಾರೆ.ಸಂಘಟನೆಯ ಅಂತರಿಕ ಕಾನೂನಿನ ಧೇಯೋದ್ದೇಶಗಳಿಗೆ ಅನ್ವಯವಾಗಿ ವ್ಯಾಪ್ತಿಯಲ್ಲಿ ಸಕ್ರೀಯವಾಗಿ ಕಾರ್ಯನಿರ್ವಹಿಸಿತ್ತ ಸಂಘಟನೆ ಗೌರವ ಪೂರ್ವಕವಾಗಿ ವಹಿಸಿಕೊಟ್ಟಿರುವ ಅಧಿಕಾರವನ್ನು ಸೂಕ್ತ ರೀತಿಯಲ್ಲಿ ಸಂಘಟನೆಯ ಶ್ರೇಯೋಭಿವೃದ್ಧಿಗಾಗಿ ಬಳಸಿಕೊಂಡು ಬೂಕನಕೆರೆ ಹೋಬಳ್ಳಿ ವ್ಯಾಪ್ತಿಯಲ್ಲಿ ಇರುವ ಸಮಸ್ಯೆಗಳ ಮೂಲವನ್ನು ಹುಡುಕಿ ಅವುಗಳಿಗೆ ನಮ್ಮ ಸಂಘಟನೆಯ ಮೂಲಕ ಸೂಕ್ತ ಪರಿಹಾರಗಳನ್ನು ಕಲ್ಪಿಸಿ ಸಮಾಜಮುಖಿ ಕಾರ್ಯಗಳನ್ನು ಮಾಡಿ. ಅಕರಸೇದ (ರಿ.)ದ ಸಂಘಟನೆಯ ಮತ್ತಷ್ಟು ಗಟ್ಟಿಗೊಳಿಸಲು ಶ್ರಮ ವಹಿಸುತ್ತೇನೆ ಎಂದು ಭರವಸೆ ನೀಡಿದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
