ಕೊರಟಗೆರೆ ;- ಪ್ರಾರ್ಥಮಿಕ ಹಂತದ ಶಾಲೆಗಳಲ್ಲಿ ಮಕ್ಕಳಿಗೆ ತಂದೆ-ತಾಯಿ ಹಾಗೂ ಗುರು ಹಿರಿಯರಲ್ಲಿ ಗೌರವ ನೀಡುವ ಸಂಸ್ಕೃರದೊಂದಿಗೆ ನಾಡಿನ ಸಂಸ್ಕೃತಿಯನ್ನು ಶಿಕ್ಷಕರು ಕಲಿಸ ಬೇಕು ಎಂದು ಕೊರಟಗೆರೆ ಪೊಲೀಸ್ ಠಾಣಾ ಪಿಎಸೈ ತಿಥೇಶ್ ತಿಳಿಸಿದರು.
ಅವರು ಕೊರಟಗೆರೆ ಪಟ್ಟಣದಲ್ಲಿ ಲಂಡನ್ ಕಿಡ್ಸ್ ಶಾಲೆಯ ಏರ್ಪಡಿಸಿದ್ದ ವಿಶೃತ ಉತ್ಸವ 2026 ಪ್ರಥಮ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮಕ್ಕಳಲ್ಲಿ ದಿನೇ ದಿನೇ ಮೊಬೈಲ್ ಬಳಕೆ ಹೆಚ್ಚಾಗುತ್ತಿರುವುದರಿಂದ ಮಕ್ಕಳ ಮನಸ್ಸಿನಲ್ಲಿ ಬೇಡವಾದ ವಿಷಯಗಳನ್ನು ನೋಡುವುದು ಮಾತನಾಡುವುದರಿಂದ ನಕರಾತ್ಮಕ ಚಿಂತನೆಗಳು ಹೆಚ್ಚಾಗುತಿದ್ದು ಶಾಲೆಯಲ್ಲಿ ಶಿಕ್ಷಕರು ಸಕರಾತ್ಮಕ ಚಿಂತನೆಗಹಳನ್ನು ಮಕ್ಕಳಿಗೆ ಕಲಿಸುವುದು ಅಗತ್ಯವಾಗಿದೆ ಎಂದ ಅವರು ಶಾಲೆಯಲ್ಲಿನ ವಾತಾವರಣ ಮಕ್ಕಳ ಮೇಲೆ ಪ್ರಭಾವ ಬೀರುವುದರಿಂದ ಶಾಲೆಯನ್ನು ಸದಾ ಸ್ವಚ್ಚವಾಗಿ, ಸುವ್ಯವಸ್ಥಿತವಾಗಿ ಇರಿಸಬೇಕು ಜೊತೆಗೆ ಶಿಕ್ಷಣ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಆಧ್ಯತೆ ನೀಡಿ ಗುಣಮಟ್ಟದ ಕಲಿಕೆಗೆ ಒತ್ತು ನೀಡಬೇಕು ಎಂದು ತಿಳಿಸಿದರು.
ಲಂಡನ್ ಕಿಡ್ಸ್ ಶಾಲೆಯ ಸಂಸ್ಥಾಪಕ ವೆಂಕಟೇಶ್ ಕಾರ್ಯಕ್ರಮದಲ್ಲಿ ಮಾತನಾಡಿ ಕೊರಟಗೆರೆ ಪಟ್ಟಣದಲ್ಲಿ ಶಾಲೆ ಪ್ರಾರಂಭಿಸಿದ ಹಿನ್ನೆಲೆಯ ಬಗ್ಗೆ ಮಾಹಿತಿ ನೀಡಿ ಮುಂದಿನ ದಿನಗಳಲ್ಲಿ ಶಾಲೆಯಲ್ಲಿ ಉತ್ತಮ ಶಿಕ್ಷಕರ ನೇಮಕದೊಂದಿಗೆ ಮಕ್ಕಳ ಕಲಿಕೆಗೆ ಹೆಚ್ಚು ಅಧ್ಯತೆ ನೀಡುವುದರೊಂದಿಗೆ ಮಕ್ಕಳಲ್ಲಿ ಪರಿಸರಜಾಗೃತಿ, ಶಿಸ್ತು ಹಾಗೂ ತಂದೆ-ತಾಯಿ, ಗುರು ಹಿರಿಯರಲ್ಲಿ ಗೌರವದಿಂದ ನಡೆಯುವ ಬಗ್ಗೆ ಅರಿವು ಮೂಡಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲೆ ಶೃತಿ ಪ್ರಥಮ ವರ್ಷದ ಶಾಲಾ ವಾರ್ಷಿಕೋತ್ಸವ ವರದಿ ಹಾಗೂ ಮುಂದಿನ ಶೈಕ್ಷಣಿಕ ವರ್ಷದ ರೋಪುರೇಶಗಳ ಬಗ್ಗೆ ತಿಳಿಸಿದರು, ವೇದಿಕೆಯಲ್ಲಿ ಕ್ಷೇತ್ರಶಿಕ್ಷಣಾಧಿಕಾರಿ ಕಛೇರಿಯ ರವಿ, ಅಗ್ರಹಾರ ಸಿದ್ದಯ್ಯ, ಶಿಕ್ಷಕಿ ಶಾಹಿಜಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದು ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪೋಷಕರು ತಮ್ಮ ಮಕ್ಕಳೊಂದಿಗೆ ನೃತ್ಯ ಹಾಗೂ ಕಿಶೋರ್ ಜಾದು ಕಾರ್ಯಕ್ರಮ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
– ಶ್ರೀನಿವಾಸ್ ಕೊರಟಗೆರೆ.
