ಹಾಸನ : ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗಂಧದಕೋಟಿ ಹಾಸನ ಇಲ್ಲಿ ಚುಟುಕು ಸಾಹಿತ್ಯ ಪರಿಷತ್ತು ವತಿಯಿಂದ ಮಾರ್ಚ್ 7 ನೇ ತಾರೀಕು ಹಾಸನ ತಾಲ್ಲೂಕು ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ, ಗಿರಿಜಾ ನಿರ್ವಾಣಿ ಯವರ ಸ್ವರಚಿತ ಕೃತಿ ಚುಟುಕುಯಾನ, ಸೀತಾ ಲಕ್ಷ್ಮಿ ವರ್ಮ ಸಂಪಾದಿತ ಅರಸು ಚುಟುಕು ಚಿತ್ತಾರಗಳು, ಕಿರಣ್ ಕುಮಾರ್ ಬಿ. ಸ್ವರಚಿತ ಕೃತಿ ಚುಟುಕಾಮೃತ ಲೋಕಾರ್ಪಣೆ, ಡಾ.ಎಂ ಅಕಬರ್ ಅಲಿಯವರ ಶತಮಾನೋತ್ಸವ ಕಾರ್ಯಕ್ರಮ, ಚುಟುಕು ಕೌಸ್ತುಭ ರಾಜ್ಯ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ ಎಂದು ಹಾಸನ ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಕುಮಾರ್ ಬಿ ಹೊನ್ನೇನಹಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಿವ್ಯ ಸಾನಿಧ್ಯ ಮತ್ತು ಆಶೀರ್ವಚನವನ್ನು ಡಾ ಶ್ರೀ ಶಿವಾನಂದ ಶಿವಾಚಾರ್ಯ ಮಹಾ ಸ್ವಾಮೀಜಿ ಅವರು ಸುಕ್ಷೇತ್ರ ಹಿರೇಮಠ ತಪೋವನ ತುಮಕೂರು ವಹಿಸುವರು. ಕಾರ್ಯಕ್ರಮದ ಉದ್ಘಾಟನೆಯನ್ನು ಹಾಸನ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಬಾ. ನಂ ಲೋಕೇಶ ನೆರವೇರಿಸುವರು. ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗಂಧದ ಕೋಟಿ ಹಾಸನ ಪ್ರಾಂಶುಪಾಲರಾದ ಪ್ರೊ. ಮಂಜಯ್ಯ ಡಿಕೆ ಅಧ್ಯಕ್ಷತೆ ವಹಿಸುವರು.
ಡಾ. ಎಂ ಅಕಬರ್ ಅಲಿ ಅವರ ಕುರಿತಾದ ಪ್ರಧಾನ ಭಾಷಣವನ್ನು ಚುಟುಕು ಯುಗಾಚಾರ್ಯ ಡಾ. ಎಂ ಜಿ ಆರ್ ಅರಸು ಸಂಸ್ಥಾಪಕರು ಕೇಂದ್ರ ಚುಟುಕು ಸಾಹಿತ್ಯ ಪರಿಷತ್ತು ಮೈಸೂರು ಮಾಡುವರು. ಪ್ರಸ್ತಾವಿಕ ನುಡಿಯನ್ನು ಹಾಸನ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಉಪಾಧ್ಯಕ್ಷರಾದ ಸೋಮ ನಾಯಕ್ ನುಡಿಯುವರು.ಹಲೋ ಹಾಸನ ದಿನಪತ್ರಿಕೆಯ ಸಂಪಾದಕರಾದ ರವಿ ನಾಕಲಗೋಡು ಪ್ರಶಸ್ತಿ ಪ್ರಧಾನ ಮಾಡುವರು. ಪ್ರೊ. ಎ ಪಿ ಸೌಮ್ಯಶ್ರೀ ಉಪನ್ಯಾಸಕರು ಬೆಂಗಳೂರು, ಡಾ. ಎಂ ಎಸ್ ಶಶಿಕಲಾ ಗೌಡ ಅನುವಾದಕರು ಹಾಗೂ ಮಾಜಿ ಸದಸ್ಯರು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಕರ್ನಾಟಕ ಸರ್ಕಾರ ಮೈಸೂರು, ಡಾ.ಆದರ್ಶ ಎಚ್ ಆರ್ ಪ್ರಾಂಶುಪಾಲರು ಆಚಾರ್ಯ ಕಾಮರ್ಸ್ ಕಾಲೇಜು ಹಾಸನ ಇವರು ಪುಸ್ತಕ ಲೋಕಾರ್ಪಣೆಗೊಳಿಸಿ ಕೃತಿಗಳನ್ನು ಪರಿಚಯಿಸುವರು.
ಹಾಸನದ ಗಂಧದಕೋಠಿ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಮಂಜಯ್ಯ ಡಿಕೆ ಹಾಗೂ ಲೇಖಕಿ ಸುಧ್ರಮಣಿ ಹಾಸನ ಇವರಿಗೆ ಚುಟುಕು ಕೌಸ್ತುಭ ರಾಜ್ಯ ಪ್ರಶಸ್ತಿ ಪ್ರಧಾನ ಮಾಡಲಾಗುವುದು. ಮೈಸೂರು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಚುಟುಕು ಸಿರಿ ರತ್ನ ಹಾಲಪ್ಪಗೌಡ ಪುಸ್ತಕ ತಾಬೂಲ ವಿತರಿಸುವರು.
ಮುಖ್ಯ ಅತಿಥಿಗಳಾಗಿ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐ ಕ್ಯೂ ಎ ಸಿ ಮೋಹನ್ ಕುಮಾರ್ ಜಿ ಆರ್, ಮಾನವ ಹಕ್ಕುಗಳ ಭಾರತೀಯ ಮಹಾಮೈತ್ರಿ ಅಧ್ಯಕ್ಷರಾದ ಎನ್ ವಿಶ್ವನಾಥ್, ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಟ್ರಸ್ಟ್ ರಿಜಿಸ್ಟರ್ ಕರ್ನಾಟಕ , ಹಾಸನ ಹೆಚ್ ಎಸ್ ಪ್ರತಿಮಾ, ವಿಶಿಷ್ಟ ತಿಲಕ್ ಸಮಾಜ ಸೇವಕರು ಹಾಸನ,ಕಿರಣ್ ಕುಮಾರ್ ಬಿ ಅಧ್ಯಕ್ಷರು ಬೇಲೂರು ತಾಲೂಕು, ಗಿರಿಜಾ ನಿರ್ವಾಣಿ ಅಧ್ಯಕ್ಷರು ಕದಳಿ ವೇದಿಕೆ ಹಾಸನ ತಾಲ್ಲೂಕು, ಪ್ರೇಮಾಮಂಜುನಾಥ್ ಅಧ್ಯಕ್ಷರು ಚುಸಾಪ ಹೊಳೆನರಸೀಪುರ, ಸುಂದರೇಶ್ ಅಧ್ಯಕ್ಷರು ಚುಸಾಪ ಅರಕಲಗೂಡು,ಶಂಕರಾಚಾರ್ಯ ಅಧ್ಯಕ್ಷರು ಚುಸಾಪ ಚನ್ನರಾಯಪಟ್ಟಣ, ಚುಸಾಪ ಕಾರ್ಯದರ್ಶಿ ಸೋಮಶೇಖರ್ ಉಪಸ್ಥಿತರಿರುವರು ಎಂದು ಚುಟುಕು ಸಾಹಿತ್ಯ ಪರಿಷತ್ ಹಾಸನ ತಾಲ್ಲೂಕು ಅಧ್ಯಕ್ಷರಾದ ಕುಮಾರ್ ಬಿ ಹೊನ್ನೇನಹಳ್ಳಿ ತಿಳಿಸಿದ್ದಾರೆ.
