ಹಾಸನ ಮಹಾನಗರ ಪಾಲಿಕೆ ವ್ಯಾಪ್ತಿಯ ಸ್ವಚ್ಛತೆಯ ಬಗ್ಗೆ, ಮಾರುಕಟ್ಟೆ/ಸಂತೆ ನಿರ್ವಹಣೆಯ ಬಗ್ಗೆ ಹುಣಸಿನಕೆರೆ ನಿರ್ವಹಣೆಯ ಬಗ್ಗೆ, ಹಾಗೂ ಬೀದಿ ನಾಯಿಗಳ ನಿಯಂತ್ರಣದ ಬಗ್ಗೆ, ಸಾರ್ವಜನಿಕ ಹಿತದೃಷ್ಟಿಯಿಂದ ಪ್ರತಿ ಮಂಗಳವಾರ ನಗರ ಪರಿವೀಕ್ಷಣೆ ಮಾಡುತ್ತಿದ್ದು, ಈ ದಿನ ಅಂದರೆ ದಿನಾಂಕ 28-10-2025ರಂದು ಬೆಳಗ್ಗೆ 8.00ಗಂಟೆ ಸಮಯ ದಲ್ಲಿ ಹುಣಸಿನಕೆರೆ 80 ಅಡಿ ರಸ್ತೆಯ ಸ್ಥಳ ಪರಿವೀಕ್ಷಣೆಯ ಸಂದರ್ಭದಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯ ಹಲವಾರು ವಾರ್ಡ್ ಗಳಲ್ಲಿ ಸ್ವಚ್ಛತೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿರುವುದಿಲ್ಲ ಹಾಗೂ 80 ಅಡಿ ರಸ್ತೆಯ ಬದಿಗಳಲ್ಲಿ ಹಾಗೂ ಹುಣಸಿನಕೆರೆಯ ಸುತ್ತಮುತ್ತ ಕಸದ ರಾಶಿ ಕಂಡುಬಂದಿದ್ದು, ಕೂಡಲೇ ಕಸದ ರಾಶಿಯನ್ನು ಸ್ವಚ್ಛಗೊಳಿಸಿ ಸಾರ್ವಜನಿಕರು ತ್ಯಾಜ್ಯ ವಸ್ತುಗಳನ್ನು ರಸ್ತೆ ಬದಿಗಳಲ್ಲಿ ಎಸೆಯದಂತೆ ಕ್ರಮವಹಿಸುವಂತೆ ಆಯುಕ್ತರಿಗೆ ಸೂಚಿಸಲಾಗಿರುತ್ತದೆ.
ಆದರೆ, ಮಹಾನಗರಪಾಲಿಕೆಯಲ್ಲಿ ಸ್ವಚ್ಛತಾ ಕೆಲಸಕ್ಕೆ ಸಿಬ್ಬಂದಿಗಳ ಕೊರತೆಯಿದ್ದು, ಸ್ವಚ್ಛಗೊಳಿಸಲು ಸಾಧ್ಯವಾಗುವುದಿಲ್ಲ ಎಂಬುದಾಗಿ ಉಡಾಫೆಯಾಗಿ ಉತ್ತರಿಸಿ ಮೇಲಾಧಿಕಾರಿ ಗಳ ಆದೇಶವನ್ನು ಪಾಲಿಸದೇ ಸರ್ಕಾರಿ ನೌಕರರಿಗೆ ತರವಲ್ಲದ ರೀತಿಯಲ್ಲಿ ವರ್ತಿಸಿರು ವುದರಿಂದ ಈ ಕೂಡಲೇ ಶ್ರೀ ಆರ್. ಕೃಷ್ಣಮೂರ್ತಿ, ಆಯುಕ್ತರು, ಹಾಸನ ಮಹಾನಗರಪಾಲಿಕೆ, ಹಾಸನ ರವರನ್ನು ದಿನಾಂಕ 28-10-2025 ರಿಂದ ಜಾರಿಗೆ ಬರುವಂತೆ ಕಡ್ಡಾಯ ರಜೆ ಮೇಲೆ ತೆರಳಲು ಹಾಗೂ ಶ್ರೀ ಕೆ.ಎಂ.ರಮೇಶ್, ಆಯುಕ್ತರು, ನಗರಾಭಿವೃದ್ಧಿ ಪ್ರಾಧಿಕಾರ, ಹಾಸನ ಇವರನ್ನು ಮುಂದಿನ ಆದೇಶದವರೆಗೆ ಆಯುಕ್ತರು, ಮಹಾನಗರ ಪಾಲಿಕೆ, ಹಾಸನ ಹುದ್ದೆಯ ಹೆಚ್ಚಿನ ಪ್ರಭಾರದಲ್ಲಿರಿಸಿ ಎಂದು ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ಆದೇಶಿಸಿದ್ದಾರೆ.


[…] ಇದನ್ನು ಓದಿ: ಹಾಸನ ಮಹಾನಗರ ಪಾಲಿಕೆ ವ್ಯಾಪ್ತಿಯ ಹುಣಸಿನಕ… […]