ಬೆಂಗಳೂರು: ದೋಹಾ (ಕತಾರ್) ದಿಂದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ್ದ ಭಾರತ ಮೂಲದ ಪ್ರಯಾಣಿಕನ ಬಳಿ ಇದ್ದ 40 ಕೋಟಿ ರೂಪಾಯಿ ಮೌಲ್ಯದ ಕೊಕೇನ್ ಅನ್ನು ಡಿಆರ್ಐ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಪ್ರಯಾಣಿಕನ ಬ್ಯಾಗೇಜ್ ತಪಾಸಣೆ ವೇಳೆ ಎರಡು ಕಾಮಿಕ್ಸ್ ಪುಸ್ತಕ ಪತ್ತೆಯಾದವು. ಕಾಮಿಕ್ಸ್ ಪುಸ್ತಕಗಳ ಕವರ್ ಮೇಲೆ ಸೀಲ್ ಮಾಡಿದ ರೀತಿಯಲ್ಲಿದ್ದ 40 ಕೋಟಿ ರೂಪಾಯಿ ಮೌಲ್ಯದ 4 ಕೆಜಿ ಕೊಕೇನ್ ಅನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಪ್ರಕರಣ ಸಂಬಂಧ ಡಿಆರ್ಐ ಅಧಿಕಾರಿಗಳು ಎನ್ಡಿಪಿಎಸ್ ಕಾಯ್ದೆ ಅಡಿ ಪ್ರಯಾಣಿಕನನ್ನು ಬಂಧಿಸಿ ಕೋರ್ಟ್ಗೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಪ್ರಯಾಣಿಕನನ್ನು ನ್ಯಾಯಾಂಗ ಬಂಧನಕ್ಕೆ ನೀಡಿದೆ.
