ತುಮಕೂರು, ಜೂನ್ 6:ತುಮಕೂರು ವಿಶ್ವವಿದ್ಯಾನಿಲಯದ ಕಲಾ ಕಾಲೇಜಿನ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳಾದ ಪ್ರಶಾಂತ್ ಎನ್ ಐಕೂರ್, ಲಿಖಿತಾ ಆರ್ ಮತ್ತು ವರ್ಷಿತಾ ಕೆ.ಸಿ ಇವರ ಸಂಯೋಜನೆ ಮತ್ತು ಸಹಭಾಗಿತ್ವದಲ್ಲಿ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಮತ್ತು ಸಂಚಾರಿ ಆರೋಗ್ಯ ಘಟಕ, ತುಮಕೂರು ಇವರ ಸಹಯೋಗದೊಂದಿಗೆ ಕೇಸರಮಡು ಗ್ರಾಮದಲ್ಲಿ ಸಮುದಾಯ ಆರೋಗ್ಯ ಶಿಬಿರವನ್ನು ಯಶಸ್ವಿಯಾಗಿ ನಡೆಸಲಾಯಿತು.

ಈ ಶಿಬಿರದ ಮುಖ್ಯ ಉದ್ದೇಶ ಗ್ರಾಮೀಣ ಕಾರ್ಮಿಕರ ಆರೋಗ್ಯ ಮತ್ತು ಸಾಮಾಜಿಕ ಭದ್ರತೆ ಕುರಿತು ಜಾಗೃತಿ ಮೂಡಿಸುವುದು ಎಂಬುದಾಗಿದ್ದು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಾ. ಚೇತನ ಕುಮಾರ್ (MBBS) ಅವರು ಆರೋಗ್ಯ ತಪಾಸಣೆ ನೆರವೇರಿಸಿ, ಸೂಕ್ತ ವೈದ್ಯಕೀಯ ಸಲಹೆಗಳನ್ನು ನೀಡಿದ್ದಾರೆ.

ಇದಕ್ಕೂ ಜೊತೆಗೆ, ಗ್ರಾಮಸ್ಥರಿಗೆ ಈ-ಶ್ರಮ ಕಾರ್ಡ್ ಬಗ್ಗೆ ಮಾಹಿತಿ ನೀಡುವ ಜಾಗೃತಿ ಕಾರ್ಯಕ್ರಮವೂ ನಡೆದಿದ್ದು, ಕಾರ್ಮಿಕರು ಮತ್ತು ಸ್ಥಳೀಯ ನಾಗರಿಕರು ಶಿಬಿರದಲ್ಲಿ ಸಕ್ರಿಯವಾಗಿ ಭಾಗವಹಿಸಿ ಪ್ರಯೋಜನ ಪಡೆದುಕೊಂಡರು.

ಸಮಾಜದ ಮೂಲ ಹಂತದ ಆರೋಗ್ಯ ಹಾಗೂ ಕಾರ್ಮಿಕರ ಹಕ್ಕುಗಳ ಅರಿವು ವೃದ್ಧಿಸಲು ಈ ರೀತಿಯ ಶಿಬಿರಗಳು ಪ್ರಮುಖ ವೇದಿಕೆಯಾಗುತ್ತವೆ ಎಂಬ ಅಭಿಪ್ರಾಯ ಕಾರ್ಯಕ್ರಮದ ಆಯೋಜಕರಿಂದ ವ್ಯಕ್ತವಾಯಿತು.
