ಕೊರಟಗೆರೆ ;- ತಂದೆ-ತಾಯಿಗಳ ಅಸ್ತಿಗೆ ಮಾತ್ರ ವಾರಸುದಾರರಾಗುವುದು ಸಾಕಾಗುವುದಿಲ್ಲ ಅವರ ಬದುಕಿನಲ್ಲಿ ಅನುಸಿರಿಸಿದ ಆದರ್ಶಗಳು ಮೌಲ್ಯಗಳು ಹಾಗೂ ಸಮಾಜಮುಖಿ ಚಿಂತನೆಗಳನ್ನು ಮುಂದುವರೆಸಿಕೊಂಡು ಹೋಗುವುದು ಮಕ್ಕಳ ಪ್ರಮುಖ ಕರ್ತವ್ಯ ಎಂದು ಸಿದ್ದರಬೆಟ್ಟ ಬಾಳೆಹೊನ್ನೂರು ಖಾಸಾ ಶಾಖಾ ಮಠದ ಪೀಠಾದ್ಯಕ್ಷ ಶ್ರೀ ವೀರಭದ್ರ ಶಿವಾಚಾರ್ಯಸ್ಸಾಮೀಜಿ ತಿಳಿಸಿದರು.
ಅವರು ಕೊರಟಗೆರೆ ಪಟ್ಟಣದ ಕಾಮಧೇನು ಕನ್ವನ್ಷನ್ ಹಾಲ್ನಲ್ಲಿ ಪ್ರೇಂಡ್ಸ್ ಗ್ರೂಪ್ ಸೇವಾ ಸಮಿತಿ ಮತ್ತು ಜಗ್ಗೇಶ್ ಅಭಿಮಾನಿಗಳ ಸಂಘ ವತಿಯಿಂದ ಆಯೋಜಿಸಿದ್ದ ಸಾಧಕರಿಗೆ ಅಭಿನಂದನಾ ಸಮಾರಂಭ ಹಾಗೂ ಕನ್ನಡ ನಿತ್ತೋತ್ಸವ ಕಾರ್ಯಕ್ರಮದಲ್ಲಿ ದಿವ್ಯ ಸಾನಿದ್ಯ ವಹಿಸಿ ಮಾತನಾಡಿ ಪೋಷಕರು ನಡೆಸಿದ ಆದರ್ಶ ಜೀವನವನ್ನು ಮಕ್ಕಳು ತಮ್ಮ ಜೀವನದಲ್ಲಿ ಆಳವಡಿಸಿಕೊಂಡು ಸಮಾಜಮುಖಿ ಯಾಗಿ ಬದುಕು ನಡೆಸಿದಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ ಎಂದು ತಿಳಿಸಿದ ಶ್ರೀಗಳು ಸಾಧನೆ ಎಂಬುದು ಒಬ್ಬ ವ್ಯಕ್ತಿಯ ಪ್ರಯತ್ನ ಮಾತ್ರವಲ್ಲ ಅನೇಕ ಮಂದಿಯ ಸಹಕಾರದ ಫಲ ನಾನೊಬ್ಬನೇ ಸಾಧಿಸಿದ್ದೇನೆ ಎನ್ನುವುದಕ್ಕಿಂದ ಎಲ್ಲರ ಸಹಕಾರದಿಂದ ಈ ಸಾಧನೆ ಸಾಧ್ಯವಾಯಿತು ಎನ್ನುವ ಮನೋಭಾವವೇ ನಿಜವಾದ ಮಹತ್ವದ್ದು ಎಂದು ಅಭಿಪ್ರಾಯಪಟ್ಟು ಒಳ್ಳೆಯ ಕೆಲಸ ಮಾಡಿದವರನ್ನು ಗುರುತಿಸಿ ಗೌರವಿಸಿದರೆ ಅವರ ಸಾಧನೆ ಇತರರಿಗೆ ಪ್ರೇರಣೆ ಹಾಗೂ ಆದರ್ಶವಾಗುತ್ತದೆ ಎಂದು ಸಲಹೆ ನೀಡಿದರು.
ತಹಶೀಲ್ದಾರ್ ಮಂಜುನಾಥ್ ಮಾತನಾಡಿ ಸಮಾಜದಲ್ಲಿ ಸದಾ ಸಮಾಜಮುಖಿ ಕಾರ್ಯಕ್ರಮಗಳು ನಡೆಯುತ್ತಿರ ಬೇಕು ಸಂಘ ಸಂಸ್ಥೆಗಳು ಇತಂಹ ಕಾರ್ಯಗಳಿಗೆ ಪೊರಕವಾಗಿ ಕೆಲಸ ಮಾಡಿದರೆ ಸಮಾಜದ ಅಭಿವೃದ್ದಿ ಸಾಧ್ಯ ಎಂದು ಹೇಳಿದರು, ಅಲ್ಲದೆ ಪಟ್ಟಣದ ಇತಿಹಾಸ ಪ್ರಸಿದ್ದ ಗಂಗಾಧರೇಶ್ವರ ದೇವಾಲಯದ ಜೀರ್ಣೋದ್ದಾರಕ್ಕೆ ತಾಲೂಕು ಆಡಳಿತದಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡದರು.
ರಾಷ್ಟ್ರಪ್ರಶಸ್ಥಿ ಪುರಸ್ಕೃತ ಕೊರಟಗೆರೆ ಪೊಲೀಸ್ ಠಾಣೆಯ ಅರಕ್ಷಕ ವೃತ್ತ ನಿರೀಕ್ಷಕ ಅನಿಲ್ ಮಾತನಾಡಿ ಗ್ರಾಮಾಂತರ ಪ್ರದೇಶಗಳಲ್ಲಿ ಅನಾವಶ್ಯಕ ವ್ಯಾಜ್ಯಗಳು ಹೆಚ್ಚಾಗುತ್ತಿರುವುದು ಅಂತಕಕಾರಿ ವಿಷಯವಾಗಿದ್ದು ಸಮಾಜಮುಖಿ ಸಂಘಟನೆಗಳು ಹಾಗೂ ಧಾರ್ಮಿಕ ಗುರುಗಳು ಜನರಲ್ಲಿ ಮನಪರಿವರ್ತನೆ ಮಾಡಿ ವ್ಯಾಜ್ಯಮುಕ್ತ ಗ್ರಾಮಗಳ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿ ಪತ್ರಕರ್ತರು ಪತ್ರಿಕಾ ವೃತ್ತಿಯಲ್ಲಿ ಸಮಾಜಮುಖಿಯಾಗಿ ಕೆಲಸ ಮಾಡಿದ್ದಾಗ ಮಾತ್ರ ಸಮಾಜ ಗೌರವ ನೀಡುತ್ತದೆ, ವೃತ್ತಿ ಬದ್ದತೆಯೊಂದಿಗೆ ಸರಿದಾರಿಗೆ ತರುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಗತಿಪರ ರೈತ ಹಾಗೂ ಪತ್ರಕರ್ತ ತೋವಿನಕೆರೆ ಪದ್ಮರಾಜ್, ಧಾರ್ಮಿಕ ಮುಖಂಡ ಎಂ.ಜಿ.ಸುಧೀರ್, ಕೆ.ಎನ್.ರಘು, ಪತ್ರಕರ್ತರಾದ ರಂಗಧಾಮಯ್ಯ, ಯಶಸ್ಸ್ ಕೆ.ಪದ್ಮನಾಭ್, ಕೆ.ವಿ.ಪುರುಷೊತ್ತಮ್, ಅಭಿನಂದನಾ ಗೌರವಸ್ವೀಕರಿಸಿ ನಂತರ ಮಾತನಾಡಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು, ಕಾರ್ಯಕ್ರಮದಲ್ಲಿ ಪಿಎಸೈ ತೀಥೇಶ್, ಪ್ರೇಂಡ್ಸ್ ಗ್ರೂಪ್ ಸೇವಾ ಸಮಿತಿ ಆಧ್ಯಕ್ಷ ಕೆ.ಎನ್.ರವಿಕುಮಾರ್, ಜಗ್ಗೇಶ್ ಅನಿಮಾನಿ ಸಂಘದ ಅಧ್ಯಕ್ಷ ಡಿ.ಎಲ್.ಮಲ್ಲಣ್ಣ, ಹಂಚಿಹಳ್ಳಿ ಗ್ರಾ.ಪಂ.ಅಧ್ಯಕ್ಷ ಬೀಮರಾಜು, ಪ.ಪಂ.ಮಾಜಿ ಸದಸ್ಯ ಕೆ.ವಿ.ಮಂಜುನಾಥ್, ಪಿಡಿಓ ರಾಘವೆಂದ್ರ, ಮುಖಂಡರುಗಳಾದ ಕಾರ್ ಮಹೇಶ್, ಶಂಕರ್, ಸೋಮ, ಪ್ರದೀಪ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಕೊರಟಗೆರೆ

[…] ಇದನ್ನು ಓದಿ: ಕೊರಟಗೆರೆ ಫ್ರೇಂಡ್ಸ್ ಗ್ರೂಪ್ ಸೇವಾ ಸಂಸ್ಥ… […]