ಕೆ.ಆರ್.ಪೇಟೆ.ತಾಲೂಕು ಗಂಗಾಪರಮೇಶ್ವರಿ ಮೀನು ಬೇಟೆಗಾರರ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಭಾನುವಾರ ಚುನಾವಣೆ ನಡೆಯಿತು.
ಪಟ್ಟಣದಲ್ಲಿರುವ ತಾಲೂಕು ಪಶು ಇಲಾಖೆ ಆವರಣದಲ್ಲಿ ನಡೆದ ಚುನಾವಣೆಯಲ್ಲಿ ಸತೀಶ್,ರಮೇಶ್, ಶ್ರೀಧರ್, ಶಿವಾನಂದ,ಜಗದೀಶ್,ನಾಗರಾಜು, ಜಯಮ್ಮ,ಮಂಜುಳಾ, ರವರು ಅತಿ ಹೆಚ್ಚು ಮತಗಳನ್ನು ಪಡೆದು ನಿರ್ದೇಶಕರ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ಘೋಷಣೆ ಮಾಡಿದರು.
ಚುನಾವಣೆ ಮೂಲಕ ಗೆಲುವು ಸಾಧಿಸಿದ ನೂತನ ನಿರ್ದೇಶಕರನ್ನು ಅಭಿನಂದಿಸಿ ಮಾತನಾಡಿದ ಶ್ರೀ ಕುವೆಂಪು ಗೆಳೆಯರ ಬಳಗದ ಅಧ್ಯಕ್ಷ ಕೆಬಿಸಿ ಮಂಜುನಾಥ್ ಇತ್ತೀಚೆಗೆ ಸಣ್ಣ ಸಣ್ಣ ಸಹಕಾರ ಸಂಘಗಳಲ್ಲೂ ರಾಜಕೀಯ ಹಾಗೂ ವೈಯಕ್ತಿಕ ದ್ವೇಷಕ್ಕಾಗಿ ಚುನಾವಣೆಗಳು ನಡೆಯುತ್ತಿವೆ ಇಂತಹ ಬೆಳವಣಿಗೆ ಸಹಕಾರ ಸಂಘಗಳಿಗೆ ಮಾರಕ, ಚುನಾವಣೆಯ ವೈಮನಸು ಬಿಟ್ಟು ಮುಂದಿನ ದಿನಗಳಲ್ಲಿ ಸಂಘದ ಶ್ರೇಯೋಭಿವೃದ್ಧಿಗೆ ಹಿರಿಯರು ಮಾರ್ಗದರ್ಶನ ಪಡೆದು ಸಂಘದ ಅಭಿವೃದ್ಧಿಗೆ ಶ್ರಮಿಸಿ ಎಂದು ನೂತನ ನಿರ್ದೇಶಕರಿಗೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಪುರಸಭಾ ಮಾಜಿ ಸದಸ್ಯ ರಾಜು,ಹಿರಿಯ ಮುಖಂಡರಾದ ನಂಜುಂಡಯ್ಯ, ಶೇಖರ್,ನಿಂಗಣ್ಣ,ಗಂಗಾಪರಮೇಶ್ವರಿ ಮೀನು ಬೇಟೆಗಾರರ ಸಹಕಾರ ಸಂಘದ ನೂತನ ನಿರ್ದೇಶಕರಾದ ಸತೀಶ್, ರಮೇಶ್, ಶ್ರೀಧರ್, ಶಿವಾನಂದ,ಜಗದೀಶ್,ನಾಗರಾಜು, ಜಯಮ್ಮ,ಮಂಜುಳಾ, ಸೇರಿದಂತೆ ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ.ಆರ್.ಪೇಟೆ
