ಕೆ.ಆರ್.ಪೇಟೆ: ತಾಲ್ಲೂಕಿನ ಸೋಮನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಅಂಬಿಗರಹಳ್ಳಿ ಎ.ಪಿ.ಮಧುಸೂಧನ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅದೇ ರೀತಿ ಸಂಘದ ಉಪಾಧ್ಯಕ್ಷರಾಗಿ ಪುರ ಪಿ.ಎಂ.ಶಿವಪ್ಪ ಅವರು ಆಯ್ಕೆಯಾಗಿದ್ದಾರೆ. ಸಂಘದ ಈ ಹಿಂದಿನ ಅಧ್ಯಕ್ಷರಾದ ಸೋಮನಹಳ್ಳಿ ಎಸ್.ಸಿ.ಬೋಜರಾಜು ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನ ಬಯಸಿ ಎ.ಪಿ.ಮಧುಸೂಧನ್ ಹೊರತುಪಡಿಸಿ ಉಳಿದ ಯಾವುದೇ ನಿರ್ದೇಶಕರು ನಾಮಪತ್ರ ಸಲ್ಲಿಸದೇ ಇರುವ ಕಾರಣ ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಸಂಘದ ಕಾರ್ಯನಿರ್ವಹಣಾಧಿಕಾರಿ ಎಸ್.ಹೆಚ್.ಮಂಜೇಗೌಡ ಅವರು ಸಂಘದ ನೂತನ ಅಧ್ಯಕ್ಷರಾಗಿ ಎ.ಪಿ ಮಧುಸೂಧನ್ ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಘೋಷಿಸಿದರು. ನೂತನ ಅಧ್ಯಕ್ಷರಾದ ಎ.ಪಿ. ಮಧುಸೂಧನ್ ಮಾತನಾಡಿ ಸಂಘದ ಅಧ್ಯಕ್ಷೆ ಸ್ಥಾನಕ್ಕೆ ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಿದ ಸಂಘದ ನಿರ್ದೇಶಕರುಗಳಿಗೆ ಹಾಗೂ ಸಂಘದ ವ್ಯಾಪ್ತಿಯ ಸೋಮನಹಳ್ಳಿ, ಅಂಬಿಗರಹಳ್ಳಿ, ಪುರ, ಸಂಗಾಪುರ ಗ್ರಾಮಗಳ ಮುಖಂಡರು ಹಾಗೂ ಯಜಮಾನರುಗಳಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನ ಎಂದರು.

ನನಗೆ ಸಿಕ್ಕಿರುವ ಅಧಿಕಾರದ ಅವಧಿಯಲ್ಲಿ ಎಲ್ಲಾ ನಿರ್ದೇಶಕರು ಹಾಗೂ ನೌಕರರ ಸಹಕಾರದಿಂದ ಸಂಘದಿಂದ ರೈತರು ಹಾಗೂ ಸಾರ್ವಜನಿಕರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ. ನನ್ನ ಮೇಲೆ ಸಹಕಾರಿ ಬಂಧುಗಳು ಇಟ್ಟಿರುವ ನಂಬಿಕೆಯನ್ನು ಹುಸಿಗೊಳಿಸದೇ ಉತ್ತಮ ಆಡಳಿತ ನೀಡುವ ಮೂಲಕ ಅವರ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆ ಘೋಷಣೆ ಆಗುತ್ತಿದ್ದಂತೆಯೇ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಂಘದ ಆವರಣದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಸಂಗಾಪುರ ಎಸ್.ಕೆ.ಸಿದ್ದೇಗೌಡ, ಸೋಮನಹಳ್ಳಿ ಎಸ್.ಪಿ.ಬಸವರಾಜು, ಈರೇಗೌಡ, ಅಂಬಿಗರಹಳ್ಳಿ ನಾರಾಯಣಗೌಡ, ಪುರ ಪಿ.ಪಿ.ಶಶಿಕುಮಾರ್, ಪುರ ರತ್ನಮ್ಮ, ಸೋಮನಹಳ್ಳಿ ಭಾಗ್ಯ, ಸುಮ, ಎಸ್.ಪಿ.ಮದನ್ಕುಮಾರ್, ಸಂಘದ ಮೇಲ್ವಿಚಾರಕ ಡಿಸಿಸಿ ಬ್ಯಾಂಕ್ ಅಧಿಕಾರಿ ಆರ್.ಜಲೇಂದ್ರ, ಸಂಘದ ಸಿಇಓ ಎಸ್.ಹೆಚ್.ಮಂಜೇಗೌಡ, ಮಾರಾಟ ಗುಮಾಸ್ತರಾದ ಜಿ.ಕುಮಾರ್, ಸಚಿನ್, ಶೇಷೇಗೌಡ, ಸೇರಿದಂತೆ ಸಂಘದ ವ್ಯಾಪ್ತಿಯ ಸೋಮನಹಳ್ಳಿ, ಅಂಬಿಗರಹಳ್ಳಿ, ಪುರ, ಸಂಗಾಪುರ ಗ್ರಾಮಗಳ ಯಜಮಾನರುಗಳು ಹಾಗೂ ಮುಖಂಡರು ಉಪಸ್ಥಿತರಿದ್ದು ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿದರು.
ಶ್ರೀನಿವಾಸ್ ಆರ್.
