ಕೆ.ಆರ್.ಪೇಟೆ:ತಾಲ್ಲೂಕು ಬೂಕನಕೆರೆ ಹೋಬಳಿಯ ಬಲ್ಲೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಆಡಳಿತ ಮಂಡಳಿಗೆ ಇಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 8 ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ. ಜೆಡಿಎಸ್ ಕೇವಲ ಒಂದು ಸ್ಥಾನ ಪಡೆದಿದೆ.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬಲ್ಲೇನಹಳ್ಳಿ ರಮೇಶ್, ಪ್ರಥಮ ದರ್ಜೆ (ವಿದ್ಯುತ್ ಹಾಗೂ ಸಿವಿಲ್) ಗುತ್ತಿಗೆದಾರ ಆಡುನಿಂಗಣ್ಣನ ಬಿ.ಎಸ್.ರಾಮು, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಕಬ್ಬಲಗೆರೆಪುರ ಪುಟ್ಟಸ್ವಾಮೀಗೌಡ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಚುನಾವಣೆ ಘೋಷಣೆ ಆಗುತ್ತಿದ್ದಂತೆಯೇ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಪಟಾಕಿ ಸಿಡಿಸಿ, ಸಿಹಿ ವಿತರಣೆ ಮಾಡಿ ವಿಜಯೋತ್ಸವ ಮಾಡಿದರು.
ಗೆಲುವು ಸಾಧಿಸಿ ಕಾಂಗ್ರೆಸ್ ಅಭ್ಯರ್ಥಿಗಳ ವಿವರ: ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಆಡುನಿಂಗಣ್ಣನ ಬಿ.ಆರ್.ಮಹೇಶ್, ಬಿ.ಸಿ.ಅಶೋಕ್, ನಿಂಗೇಗೌಡ, ಉಮಾಶಂಕರ್, ಬಿ.ಎಲ್.ಶಿಲ್ಪಪುಟ್ಟರಾಜು, ಸಾವಿತ್ರಮ್ಮಕೃಷ್ಣೇಗೌಡ, ಬಿ.ಎಸ್.ಪುಟ್ಟರಾಜು, ಹಾಗೂ ನರಸಿಂಹಶೆಟ್ಟಿ ಭರ್ಜರಿಗೆ ಗೆಲುವು ಸಾಧಿಸಿದ್ದಾರೆ. ಎಲ್ಲಾ ಸ್ಥಾನಗಳಿಗೆ ಸ್ಪರ್ಧಿಸಿದ್ದ ಜೆಡಿಎಸ್ ಅಭ್ಯರ್ಥಿಗಳ ಬಿ.ಎಸ್.ಪ್ರಸನ್ನಕುಮಾರ್ ಮಾತ್ರ ಜಯ ಸಾಧಿಸಿದ್ದಾರೆ.ಉಳಿದ ಅಭ್ಯರ್ಥಿಗಳು ಪರಾಜಯಗೊಂಡಿದ್ದಾರೆ.
ನೂತನವಾಗಿ ಆಯ್ಕೆಯಾದ ನಿರ್ದೇಶಕರನ್ನು ಅಭಿನಂದಿಸಿ ಕಾಂಗ್ರೆಸ್ ಮುಖಂಡರಾದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬಲ್ಲೇನಹಳ್ಳಿ ರಮೇಶ್, ಕಾಂಗ್ರೆಸ್ ಯುವ ಮುಖಂಡ ಪ್ರಥಮ ದರ್ಜೆ (ವಿದ್ಯುತ್ ಹಾಗೂ ಸಿವಿಲ್) ಗುತ್ತಿಗೆದಾರ ಬಿ.ಎಸ್.ರಾಮು ನಮ್ಮ ಕಾಂಗ್ರೆಸ್ ಅಭ್ಯರ್ಥಿ ಕಡಿಮೆ ಅಂತರದಲ್ಲಿ ಸೋತಿದ್ದು ಅವರಿಗೆ ಖಾಲಿ ಇರುವ ಸರ್ಕಾರಿ ನಾಮಿನಿ ಸದಸ್ಯ ಸ್ಥಾನಕ್ಕೆ ನೇಮಕ ಮಾಡಿಸುವ ಮೂಲಕ ಅವರಿಗೆ ನ್ಯಾಯ ಕೊಡಿಸುವ ಮುಖಂಡರಾದ ಬಲ್ಲೇನಹಳ್ಳಿ ರಮೇಶ್ ನೀಡಿದರು.
ಬಳಿಕ ಮಾತನಾಡಿದ ಪಿ.ಎಲ್.ಡಿ.ಬ್ಯಾಂಕ್ ನಿಕಟ ಪೂರ್ವ ಅಧ್ಯಕ್ಷ ಕಬ್ಬಲಗೆರೆಪುರ ಪುಟ್ಟಸ್ವಾಮೀಗೌಡ ಬಲ್ಲೇನಹಳ್ಳಿ ಡೈರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 9 ಮಂದಿಗಳ ಪೈಕಿ 8 ಜನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ, ನಮ್ಮ ನೂತನ ನಿರ್ದೇಶಕರ ಮನ್ ಮುಲ್ ನಿರ್ದೇಶಕರಾದ ಡಾಲು ರವಿ ಎಂ.ಬಿ ಹರೀಶ್,ಸಮಾಜ ಸೇವಕ ಆರ್.ಟಿ.ಓ,ಮಲ್ಲಿಕಾರ್ಜುನ್,ಬೂಕನಕೆರೆ ವಿಜಯ ರಾಮೇಗೌಡ,ಸೇರಿದಂತೆ ಹಲವು ಮುಖಂಡರು ಗೆಲುವಿಗೆ ಸಹಕಾರ ನೀಡಿದ್ದಾರೆ,ಸಂಘದ ಎಲ್ಲ ನೂತನ ನಿರ್ದೇಶಕರು ಗ್ರಾಮಸ್ಥರ ಉತ್ತಮ ಸಲಹೆ ಪಡೆದು ಹಾಲು ಉತ್ಪಾದಕರಿಗೆ ಅನುಕೂಲ ಕಲ್ಪಿಸಲಾಗುವುದು ಹಾಗೂ ಸಂಘದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮವಹಿಸಿಬೇಕು ಎಂದು ಸಲಹೆ ನೀಡಿದರು
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಪಟೇಲ್ ಸ್ವಾಮಿಗೌಡ, ಪಟೇಲ್ ಮಹದೇವ್, ಯೋಗಣ್ಣ, ಡೈರಿ ಕುಮಾರ್, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಶೀಳನೆರೆ ರಾಮೇಗೌಡ, ಅಣ್ಣೇಚಾಕನಹಳ್ಳಿ ನಾಗರಾಜು, ಹೊನ್ನೇನಹಳ್ಳಿ ಕೃಷ್ಣೇಗೌಡ, ಆರಾಧನ ಕಮಿಟಿ ಸದಸ್ಯ ಕಾಶಿಮುರುಕನಹಳ್ಳಿ ಪ್ರೀತಮ್, ಬಲ್ಲೇನಹಳ್ಳಿ ಪೆಪ್ಸಿ ದಯಾನಂದ್, ಬಿ.ಎನ್.ಮಹೇಶ್, ಜಯರಾಂ, ನಂಜಪ್ಪನ ಕುಮಾರ್, ಶಿವಣ್ಣ, ಸೊಸೈಟಿ ಅಧ್ಯಕ್ಷ ಕುಮಾರ್, ರಾಮಕೃಷ್ಣೇಗೌಡ, ಶ್ರೀನಿವಾಸ್, ಆಡುನಿಂಗಣ್ಣನ ಸ್ವಾಮಣ್ಣ, ಪುಟ್ಟರಾಜು, ದೇವರಸು, ಆನಂದೇಗೌಡ, ಸಿದ್ದಪ್ಪನ ಕೃಷ್ಣೇಗೌಡ, ಸುರೇಶ್ ಬಿ,ಹೇಮಂತ್, ರೇವಣ್ಣ, ಬಾರೆ ತಮ್ಮಣ್ಣ, ನಾಗರಾಜು, ಸೋಮು, ಕಾರ್ತೀಕ್, ಸಂತೋಷ್, ಮೋಹನ್, ಮಹೇಶ್, ರಾಮು, ಕುಮಾರ್, ನಾಗರಾಜು,ದಿನೇಶ್, ಬಸಂತ, ಮಾಜಿ ಅಧ್ಯಕ್ಷೆ ವಿನೋದಮ್ಮ, ನವೀನ್ ಕುಮಾರ್, ಪುಟ್ಟಪ್ಪ ಟೆಂಪೋ, ನ್ಯಾಯ ಬೆಲೆ ಅಂಗಡಿ ರಮೇಶ್, ಕುಮಾರ್, ಶಿವಲಿಂಗಣ್ಣ, ರಾಮಣ್ಣ, ಮಂಡಿ ಮಹದೇವ್, ಕೆ ಟಿ ಕುಮಾರ್, ಸುಬ್ಬಣ್ಣ ಸುಧಾಕರ್, ವಿಶ್ವನಾಥ್, ರೂಪೇಶ್, ಗಣೇಶ್, ಕಟ್ಟೇರಿ ಚಂದ್ರು, ಸತೀಶ್, ಶಾಂತ,ಕರುಣಾಕರ, ಹೇಮಂತ್ ಗೌಡ, ಸೇರಿದಂತೆ ಗ್ರಾಮದ ಹಿರಿಯ ಮುಖಂಡರು, ಯುವಕರು ಸೇರಿದಂತೆ ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
