ಕೆ ಆರ್ ಪೇಟೆ: ವಿಠಲಾಪುರ ಹಾಲಿನ ಡೇರಿ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ.
ತಾಲ್ಲೂಕು ಬೂಕನಕೆರೆ ಹೋಬಳಿ ವಿಠಲಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 3 ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಪ್ರಚಂಡ ಜಯಭೇರಿ ಬಾರಿಸಿದ್ದಾರೆ.
ನೂತನವಾಗಿ ಗೆಲುವು ಸಾಧಿಸಿದ ನೂತನ ನಿರ್ದೇಶಕರನ್ನು ಕಾಂಗ್ರೆಸ್ ಹಿರಿಯ ಮುಖಂಡ ವಿಠಲಾಪುರ ಸುಬ್ಬೇಗೌಡ ಅಭಿನಂದಿಸಿ ಮಾತನಾಡಿದರು.
ವಿಠಲಾಪುರ ಗ್ರಾಮದಲ್ಲಿರುವ ಸೊಸೈಟಿ ಹಾಗೂ ಹಾಲಿನ ಡೇರಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಹೀನಾಯ ಸೋಲು ಕಾಣುತ್ತಾರೆ ಮತ್ತು ಕಾಂಗ್ರೆಸ್ ಇಲ್ಲವೇ ಇಲ್ಲ ಕಾಂಗ್ರೆಸ್ ನೆಲೆಯೇ ಇಲ್ಲ ಎಂಬುದನ್ನು ಕನಸು ಕಾಣುತ್ತಿದ್ದ ಕೆಲವೇ ವ್ಯಕ್ತಿಗಳಿಗೆ ಡೇರಿ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಲು ಸಹಕಾರ ಮಾಡಿದ ಮತದಾರರಿಗೆ ಎಲ್ಲರ ಪರವಾಗಿ ಅನಂತ ಅನಂತ ಧನ್ಯವಾದಗಳನ್ನು ಅರ್ಪಿಸುತ್ತೇನೆ.ಚುನಾವಣೆ ಎಂದರೆ ಸೋಲು ಗೆಲುವು ಸಾಮಾನ್ಯವಾಗಿರುತ್ತದೆ. ನಮ್ಮೂರ ಹಾಲಿನ ಡೇರಿ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಇನ್ನ ಎರಡು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರೆ ಅಧಿಕಾರದ ಚುಕ್ಕಾಣಿ ಹಿಡಿಯಲಾಗುತ್ತಿತ್ತು.ಏಕೆಂದರೆ ಸರ್ಕಾರಿ ನಾಮಿನಿ ನಿರ್ದೇಶಕ ಹಾಗೂ ಸೂಪರ್ ವೈಜರ್ ನಮ್ಮ ಕಡೆ ಮತ ಚಲಾಯಿಸುತ್ತಿದ್ದರು.ಆದರೂ ಈಗಲೂ ಅಧಿಕಾರ ಚುಕ್ಕಾಣಿ ಹಿಡಿಯಲು ಅವಕಾಶ ಇದೆ.ಕಾಲ ಮಿಂಚಿಲ್ಲ.ರಾಜ್ಯದಲ್ಲಿ ನಮ್ಮದೇ ಆದ ಸರ್ಕಾರ ವಿರುವುದರಿಂದ ಸಂಘವನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲು ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲು ಸಹಕಾರ ನೀಡುವಂತೆ ನಿರ್ದೇಶಕರಲ್ಲಿ ಮನವಿ ಮಾಡಿಕೊಂಡರು. ಸಹಕಾರ ಸಂಘದ ಚುನಾವಣೆಯಲ್ಲಿ ಪಕ್ಷಗಳನ್ನು ಬದಿಗೊತ್ತಿ ಡೇರಿಯ ಅನುಕೂಲವಾಗುವಂತೆ ಆಡಳಿತ ಮಂಡಳಿಯನ್ನು ರಚನೆ ಮಾಡಿಕೊಂಡು ನಮ್ಮೂರಿನ ರೈತರು, ಮಹಿಳೆಯರು ಆರ್ಥಿಕ ಪ್ರಗತಿ ಸಾಧಿಸಲು ಅವಕಾಶ ಮಾಡಿಕೊಡಬೇಕೆಂದು ನೂತನ ನಿರ್ದೇಶಕರಲ್ಲಿ ಗ್ರಾಮದ ಹಿರಿಯ ಮುಖಂಡ ಸುಬ್ಬೇಗೌಡ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ನೂತನವಾಗಿ ಗೆಲುವು ಸಾಧಿಸಿದ ನಿರ್ದೇಶಕರಾದ ಮಂಜೇಗೌಡ,ಕಾಳಪ್ಪನ ಶಿವಣ್ಣ,ಸಣ್ಣಸಿದ್ದಣ್ಣನ ರಾಮೇಗೌಡ ಮಂಜುನಾಥ್ ವಿ ಆರ್,ರಾಜೇಗೌಡ ಮಗ ಮಂಜುನಾಥ್, ಸುಬ್ಬೇಗೌಡ, ಶಿವಣ್ಣ,ಹರೀಶ್, ಲಕ್ಕರಾಜೇಗೌಡ,ದೇವರಾಜು, ಜಗದೀಶ್, ಮೋಹನ್, ಮಹದೇವ, ಚಂದು,ಪ್ರಜ್ವಲ್,ಮಂಜು, ವಿಜಯ್, ಶೈಲೇಂದ್ರ, ಅರುಣ್ ಸೇರಿದಂತೆ ಇತರೆ ಗ್ರಾಮದ ಮುಖಂಡರು ಹಾಜರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
