ಕೆ.ಆರ್.ಪೇಟೆ,ಜ.24: ತಾಲ್ಲೂಕಿನ ಕಸಬಾ ಹೋಬಳಿಯ ಮತ್ತಿಘಟ್ಟ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಎಲ್ಲಾ 9ಸ್ಥಾನಗಳಲ್ಲಿಯೂ ಮನ್ ಮುಲ್ ನಿರ್ದೇಶಕರಾದ ಡಾಲು ರವಿ, ಎಂ.ಹರೀಶ್ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ.
ಸಂಘದ ನೂತನ ಆಡಳಿತ ಮಂಡಳಿಯ 9ಸ್ಥಾನಗಳ ಪೈಕಿ ಎರಡು ಸ್ಥಾನಗಳು ಅವಿರೋಧ ಆಯ್ಕೆ ನಡೆದಿತ್ತು. ಉಳಿದ 7ಸ್ಥಾನಗಳಿಗೆ ಇಂದು ಚುನಾವಣೆ ನಡೆಯಿತು.
ಗೆಲುವು ಸಾಧಿಸಿದ ನೂತನ ನಿರ್ದೇಶಕರ ವಿವರ: ಕುಮಾರ್, ಮಂಗಳಾಯೋಗೇಶ್, ಎಂ.ಎಸ್.ರಾಜು, ಸುತಕೀರ್ತಿ, ಎಂ.ಎಸ್.ನಾಗೇಂದ್ರ, ಲಲಿತಮ್ಮಗೋವಿಂದೇಗೌಡ, ಸಾಕಮ್ಮಗೋಪಾಲಗೌಡ, ಜವರಮ್ಮಬೋರಯ್ಯ(ಅವಿರೋಧ ಆಯ್ಕೆ), ಎಂ.ಟಿ.ಸತೀಶ್(ಅವಿರೋಧ ಆಯ್ಕೆ) ಅವರು ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಯು.ಕೆ.ಪಾರ್ವತಮ್ಮ ತಿಳಿಸಿದ್ದಾರೆ. ಸದಹ ಚುನಾವಣಾಧಿಕಾರಿಗಳಾಗಿ ಸಂಘದ ಕಾರ್ಯದರ್ಶಿ ಸಾವಿತ್ರಿ ಕಾರ್ಯನಿರ್ವಹಣೆ ಮಾಡಿದರು.
ನೂತನ ನಿರ್ದೇಶಕರನ್ನು ಮನ್ಮುಲ್ ನಿರ್ದೇಶಕರಾದ ಡಾಲು ರವಿ, ಎಂ.ಬಿ,ಹರೀಶ್, ಮುಖಂಡರಾದ ಯೋಗಣ್ಣ, ಸ್ವತಂತ್ರಪ್ಪ, ಜಯಕುಮಾರ್(ಕಾಶಿ), ನಾಗೇಗೌಡ, ನಾಗರಾಜೇಗೌಡ, ಗೋಪಾಲಗೌಡ, ಶಿವಬಸಪ್ಪ, ಮರಿಯಪ್ಪ, ಗ್ರಾಮ ಪಂಚಾಯಿತಿ ನೌಕರ ಸಂಘದ ಜಿಲ್ಲಾ ಉಪಾಧ್ಯಕ್ಷ ವಾಟರ್ ಮ್ಯಾನ್ ಎಂ.ಕೆ.ಕುಮಾರ್, ಜಯರಾಮೇಗೌಡ, ಎಂ.ಎಸ್.ವಿಶ್ವನಾಥ್, ಮಂಜುನಾಥ್, ಶಿವಕುಮಾರ್, ಸಣ್ಣರಾಜೇಗೌಡ, ನಾರಾಯಣಗೌಡ, ಭೈರಯ್ಯ, ರಾಜೇಗೌಡ ಸೇರಿದಂತೆ ಮತ್ತಿಘಟ್ಟ ಗ್ರಾಮದ ಯಜಮಾನರು, ಯುವಕರು, ಹಾಲು ಉತ್ಪಾದಕರು ಅಭಿನಂದಿಸಿದ್ದಾರೆ.
- ಶ್ರೀನಿವಾಸ್ ಆರ್.
