ಟಿ.ನರಸೀಪುರ : ಭಾರತದ ಸಂವಿಧಾನವನ್ನು ಸಾವಿರ ವರ್ಷಗಳ ಹಿಂದೆಯೇ ಬರೆಯಲಾಗಿತ್ತೆಂದು ಕಾಂಗ್ರೆಸ್ ನ ರಾಹುಲ್ ಗಾಂಧಿಯವರು ಹೇಳುವ ಮೂಲಕ ಸಂವಿಧಾನ ಕರ್ತೃ ಬಾಬಾಸಾಹೇಬ್ ಅಂಬೇಡ್ಕರ್ ರವರಿಗೆ ಅಪಮಾನವೆಸಗಿ ಇಂದಿಗೂ ಕಾಂಗ್ರೆಸ್ ಅಂಬೇಡ್ಕರ್ ವಿರೋಧಿ ಎಂದು ನಿರೂಪಿಸಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.
ಪಟ್ಟಣದ ಮಹದೇಶ್ವರ ಕಲ್ಯಾಣ ಮಂಟಪದಲ್ಲಿ ಭಾರತೀಯ ಜನತಾ ಪಾರ್ಟಿ ಆಯೋಜಿಸಿದ್ದ ಕಾಂಗ್ರೆಸ್ ಒಂದು ಸುಡುವ ಮನೆ ಎಚ್ಚರ…ಬಾಬಾಸಾಹೇಬರು ಹೀಗೇಕೆ ಹೇಳಿದರು. ವಿಚಾರಯಾತ್ರೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ ರಾಹುಲ್ ಗಾಂಧಿಯವರ ಹೇಳಿರುವ ಹೇಳಿಕೆಗೆ ಏನಾದರು ಸಂಬಂಧವಿದೆಯೇ ಇದರ ಬಗ್ಗೆ ಮಲ್ಲಿಕಾರ್ಜುನ ಖರ್ಗೆಯವರಿಂದಿಡಿದು ಪ್ರಿಯಾಂಕ ಖರ್ಗೆ, ಡಾ.ಹೆಚ್.ಸಿ.ಮಹದೇವಪ್ಪ ಸೇರಿದಂತೆ ಇತರೆ ದಲಿತ ನಾಯಕರು ರಾಹುಲ್ ಗಾಂಧಿಯವರನ್ನ ಪ್ರಶ್ನೆ ಮಾಡಲು ತಾಕತ್ ಇಲ್ಲವೇ…ಎಂದು ವಾಗ್ದಾಳಿ ನಡೆಸಿ ಈ ರೀತಿ ಗುಲಾಮಗಿರಿ ಬದುಕು ಬದುಕುವುದಕ್ಕಿಂತ ಸ್ವಾಭಿಮಾನದಿಂದ ಬದುಕಿ ಎಂದು ಆಕ್ರೋಶ ಭರಿತವಾಗಿ ಮಾತನಾಡಿದರು.
ಅಂಬೇಡ್ಕರ್ ರವರಿಗೆ ಕಾಂಗ್ರೆಸ್ ಎಂದಿಗೂ ಸತ್ಕರಿಸಿ ಗೌರವ ನೀಡಲಿಲ್ಲ.ಅವರು ಸತ್ತ ನಂತರವೂ ಅವರಿಗೆ ಕೊಡಬೇಕಾದ ಗೌರವ ಕೊಡಲಿಲ್ಲ.ಭಾರತ ರತ್ನ ನೀಡಲು ಸಹ ಮನಸ್ಸು ಮಾಡಲಿಲ್ಲ.ಕೊನೆಗೆ ವಿ.ಪಿ.ಸಿಂಗ್ ಸರ್ಕಾರ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿತ್ತೆಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಗ್ಯಾರೆಂಟಿ ಯೋಜನೆಗಳ ಮೂಲಕ ರಾಜ್ಯದ ಬೊಕ್ಕಸ ಖಾಲಿಯಾಗಿದ್ದು,ವಿವಿಧ ಸಮುದಾಯಗಳ ಅಭಿವೃದ್ಧಿಗೆ ಮೀಸಲಿರಿಸಿದ ಹಣವನ್ನು ಅದರಲ್ಲೂ ಎಸ್ಸಿ,ಎಸ್ಟಿ ಸಮುದಾಯಗಳ ಹಣವನ್ನು ಸಮುದಾಯಗಳ ಏಳಿಗೆಗೆ ಉಪಯೋಗಿಸದೇ ಗ್ಯಾರೆಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಂಡು ಅಭಿವೃದ್ಧಿ ಕುಂಠಿತಗೊಳಿಸುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು.

ಕೇಂದ್ರ ಸರ್ಕಾರದ ಭದ್ರತಾ ವೈಫಲ್ಯವನ್ನು ಪ್ರಶ್ನೆ ಮಾಡುವ ಕಾಂಗ್ರೆಸಿಗರು ತಮ್ಮ ಅಧಿಕಾರವಧಿಯಲ್ಲಿ ಎಲ್ಲೆಲ್ಲಿ ಭದ್ರತಾ ವೈಪಲ್ಯಗಳು ಕಂಡು ಬಂದಿದ್ದವು ಅದರಿಂದ ಏನೇನು ಅನಾಹುತಗಳು ಆದವು ಎಂಬುದನ್ನು ಒಂದು ಭಾರಿ ತಿರುಗಿ ನೋಡಿಕೊಂಡು ನಮ್ಮನ್ನು ಪ್ರಶ್ನೆ ಮಾಡಬೇಕು.ಪಾಕಿಸ್ತಾನದೊಂದಿಗೆ ಯುದ್ಧ ಬೇಡವೆನ್ನುವ ಸಿದ್ದರಾಮಯ್ಯರವರ ಮನಸ್ಥಿತಿ ಏನು ಎಂಬುದನ್ನು ಅರಿಯದಷ್ಟು ದಡ್ಡರಲ್ಲ ನಮ್ಮ ಜನತೆ.ರಾಜ್ಯದಲ್ಲಿ ಮುಸ್ಲಿಂಮರಿಗೆ ಮೀಸಲಾತಿ ಕೊಡಬೇಕೆಂದು ಸಿದ್ದರಾಮಯ್ಯರವರು ಹೇಳಿದ್ದು ಅವರು ಕೊಡಲಿ ನಮ್ಮ ಅಭ್ಯಂತರವೇನು ಇಲ್ಲಾ ಆದರೆ ಕಾನೂನಿನಲ್ಲಿ ಅದಕ್ಕೆ ಅವಕಾಶವಿಲ್ಲವೆಂದು ಸಂವಿಧಾನದಲ್ಲಿ ಸ್ಪಷ್ಟವಾಗಿ ತಿಳಿಸಿದೆ ಎಂದರು.

ಅಂಬೇಡ್ಕರ್ ರವರು ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಅವರನ್ನು ಸೋಲಿಸಿದ್ದು ಕಾಂಗ್ರೆಸ್ ಅನ್ನುವುದು ನಮ್ಮ ಬಳಿ ದಾಖಲೆ ಇದೆ.ಆದರೆ ಕಾಂಗ್ರೆಸ್ ಪಕ್ಷದವರು ಸೇರಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ನಮ್ಮ ಮೇಲೆ ಆರೋಪ ಮಾಡುತ್ತಿದ್ದು ಅವರು ದಾಖಲೆ ಹೊದಗಿಸಿದರೆ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ.ನಾವು ದಾಖಲೆ ಒದಗಿಸಿದರೆ ನೀವು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಿರೇ ಎಂದು ಸಿದ್ದರಾಮಯ್ಯರವರಿಗೆ ಬಹಿರಂಗ ಸವಾಲು ಹಾಕಿದರು.
ಟಿ.ನರಸೀಪುರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಖ್ಯಾತ ವೈದ್ಯ ಡಾ.ರೇವಣ್ಣ ಮಾತನಾಡಿ, ಅಂಬೇಡ್ಕರ್ ರವರ ಚಿಂತನೆ ಪರಿಕಲ್ಪನೆಗಳನ್ನು ಅನುಷ್ಟಾನಕ್ಕೆ ತರಲು ಕಾಂಗ್ರೆಸ್ ಸರ್ಕಾರ ಎಂದಿಗೂ ಮುಂದೆ ಬರಲಿಲ್ಲ.ಚುನಾವಣಾ ಸಂದರ್ಭದಲ್ಲಿ ಬಾಬಾಸಾಹೇಬರು ಸ್ಪರ್ಧಿಸಿದಾಗ ವ್ಯವಸ್ಥಿತವಾಗಿ ಅವರನ್ನು ಸೋಲಿಸುತ್ತಾರೆ.ಅಂದು ಅವರನ್ನು ಕಾಂಗ್ರೆಸ್ ಸೋಲಿಸದಿದ್ದರೆ ಅಂದೇ ನಮ್ಮ ಭಾರತ ಅಭಿವೃದ್ಧಿ ದೇಶಗಳಲ್ಲಿ ನಂ ಒನ್ ಸ್ಥಾನದಲ್ಲಿ ಅಂದೇ ಇರುತ್ತಿತ್ತೆಂದರು.

ಈ ಸಂದರ್ಭದಲ್ಲಿ ಶಾಸಕರಾದ ಶ್ರೀವತ್ಸ,ಮಾಜಿ ಶಾಸಕರಾದ ಎಲ್. ನಾಗೇಂದ್ರ,ಮಾಜಿ ಮೇಯರ್ ಶಿವಕುಮಾರ್, ಕೋಲಾರ ಮಾಜಿ ಸಂಸದರಾದ ಮುನಿಸ್ವಾಮಿ,ಎಲ್.ಆರ್.ಮಹದೇವಸ್ವಾಮಿ,ತೊಟ್ಚವಾಡಿ ಅನಿಲ್ ಕುಮಾರ್,ಸಾಮ್ರಾಟ್ ಸುಂದರೇಷನ್,ನಂಜನಗೂಡು ಎಸ್,ಮಹದೇವಯ್ಯ, ಕರೋಹಟ್ಟಿ ಮಹದೇವಯ್ಯ,ಸಿ.ಎಂ.ಮಹದೇವಯ್ಯ,ದಯಾನಂದ ಪಟೇಲ್,ಬನ್ನೂರು ರಾಮಚಂದ್ರ,ಲೋಕೇಶ್,ಲೋಕೇಶ್ ನಾಯಕ್,ಚೌಹಳ್ಳಿ ಸಿದ್ದರಾಜು,ಮೂಗೂರು ಪ್ರಕಾಶ್ ಗೌಂಡರ್,ಕರೋಹಟ್ಟಿ ಪ್ರಭುಸ್ವಾಮಿ,ಡಾ.ಮಲ್ಲಿಕಾರ್ಜುನ, ಶಿವಕುಮಾರ್,ಸದಾನಂದ, ಸೇರಿದಂತೆ ಬಿಜೆಪಿ ಪಕ್ಷದ ವಿವಿಧ ವಿಭಾಗಗಳ ಮುಖ್ಯಸ್ಥರು ಇತರೆ ಮುಖಂಡರು ಇದ್ದರು.
ವರದಿ- ಎಂ.ನಾಗೇಂದ್ರಕುಮಾರ್
