ಕೆ.ಆರ್.ಪೇಟೆ : ತಾಲ್ಲೂಕಿನ ಕಾಂಗ್ರೆಸ್ ಮುಖಂಡ ಬೂಕನಕೆರೆ ವಿಜಯ್ ರಾಮೇಗೌಡ ಅವರ 53ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳು,ಹಿತೈಷಿಗಳು ಹಾಗೂ ಕಾಂಗ್ರೆಸ್ ಮುಖಂಡರು ಕೆ.ಆರ್.ಪೇಟೆ ಪಟ್ಟಣದಲ್ಲಿರುವ ಶ್ರೀ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಒಳ – ಹೊರ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡುವ ಮೂಲಕ ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿದರು.
ಬಳಿಕ ಮಾತನಾಡಿದ ಪುರಸಭಾ ಸದಸ್ಯ ಡಿ.ಪ್ರೇಮ್ ಕುಮಾರ್ ಕಾಂಗ್ರೆಸ್ ಮುಖಂಡರಾದ ಬೂಕನಕೆರೆ ವಿಜಯ್ ರಾಮೇಗೌಡ ಕೆ.ಆರ್.ಪೇಟೆ ವಿಧಾನಸಭಾ ಚುನಾವಣೆಯ ಸತತ ಸೋಲಿನಿಂದ ಕಾಂಗ್ರೆಸ್ ಕಾರ್ಯಕರ್ತರು ಕಂಗಾಲಾಗಿದ ಸಂದರ್ಭದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಹಾಗೂ ಬಡ ಜನರಿಗೂ ಕಷ್ಟ ಸುಖಕ್ಕೆ ಸ್ಪಂದಿಸಿ ನೆರವಾಗುತ್ತಿದ್ದಾರೆ.ಇಂತಹ ಸೇವಾ ಗುಣವಾಗಿರುವ ನಾಯಕನ ಹುಟ್ಟು ಹಬ್ಬದ ಪ್ರಯುಕ್ತ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಒಳ- ಹೊರ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಆತಪೂರ್ಣವಾಗಿ ಹುಟ್ಟು ಹಬ್ಬ ಆಚರಿಸಿದ್ದೇವೆ ಮುಂದಿನ ದಿನಗಳಲ್ಲಿ ಅವರಿಗೆ ದೇವರು ಆಯಸ್ಸು ಆರೋಗ್ಯ ಕೊಟ್ಟು ಉತ್ತಮ ಸ್ಥಾನ ನೀಡಲಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಾ: ಶಶಿಧರ್,ತಾ.ಪಂ ಮಾಜಿ ಸದಸ್ಯ ಮಧವ್ ಪ್ರಸಾದ್,ಮುಖಂಡರಾದ ವಿಠಲಪುರ ಸುಬ್ಬೆಗೌಡ,ಅಘಲಯ ರಮೇಶ್, ಹೊಸಹೊಳಲು ಪ್ರಕಾಶ್,ಬಿರುವಳ್ಳಿ ರವೀಂದ್ರ, ಕಾಂಗ್ರೆಸ್ ಮಹಿಳಾ ತಾಲ್ಲೂಕು ಅಧ್ಯಕ್ಷೆ ಆದಿಹಳ್ಳಿ ಮೀನಾಕ್ಷಿಮ್ಮ, ಗ್ಯಾರಂಟಿ ಯೋಜನಾ ತಾಲ್ಲೂಕು ಸಮಿತಿ ಸದಸ್ಯೆ ಶಿವಮ್ಮ,ಕಾರ್ಯದರ್ಶಿ ಲೋಲಾಕ್ಷಿ,ಸಾಸಲು ಈರಪ್ಪ,ಯುವ ಮುಖಂಡರಾದ ಹರಿಹರಪುರ ಕಾಂತರಾಜು, ಕಾಶಿಮುರುಕನಹಳ್ಳಿ ಪ್ರೀತಮ್,ಹರಿಹರಪುರ ಮನು,ಬೂಕನಕೆರೆ ಅಜಯ್ ಗೌಡ,ಅನಿಲ್,ಸುನಿಲ್,ಬಸವರಾಜು,ಅಲೆನಹಳ್ಳಿ ಸಚಿನ್,ಸೇರಿದಂತೆ ನೂರಾರು ಸಂಖ್ಯೆಯಲ್ಲಿ ವಿಜಯರಾಮೆಗೌಡ ಅಭಿಮಾನಿಗಳು ಹಿತೈಷಿಗಳು ಕಾರ್ಯಕರ್ತರು ಪಾಲ್ಗೊಂಡಿದ್ದರು.
– ಮನು ಮಾಕವಳ್ಳಿ ಕೆ ಆರ್ ಪೇಟೆ
