ನಮಗೆ ಇಂದಿಗೂ ಗೊತ್ತಾಗದ ಅಂಶವೆಂದರೆ “ಅರಿವು ಅಥವ ಕಾನ್ಷಿಯಸ್ನೆಸ್”. ಅನೇಕ ವಿದ್ವಾಂಸರು, ತತ್ವಜ್ಙಾನಿಗಳು ಮತ್ತು ವಿಜ್ಞಾನಿಗಳು ಈ ಮನೋ ಲೋಕದ ಅಂಗವಾದ “ಅರಿವು” ಎಂಬುದನ್ನು ವಾಕ್ಯಾನಿಸಿದ್ದಾರೆ ಆದರೆ ಈ ನಿರೂಪಣೆಗಳು ಕಾಲ್ಪನಿಕ ಮತ್ತು ಸಿದ್ದಾಂತಗಳಿಗೆ ಸೀಮಿತವಾಗಿವೆ. ಒಂದು ಅಂದಾಜಿಗೆ ಈ ವಿಚಾರವನ್ನು ವಿವರಿಸಿದಾಗ “ಅರಿವಿಗೆ ಬರುವಂತಹ ವೈಯಕ್ತಿಕ ಯೋಚನೆ ಮತ್ತು ಭಾವನೆಗಳನ್ನು ಹೊರಗಿನ ಪ್ರಪಂಚದ ಸಾಕ್ಷಾತ್ಕಾರಗಳ ಜೊತೆ ಜೊತೆಗೂಡಿ ಬದುಕು ನಡೆಸುವುದು”.
ಹಿಂದೂ ಧರ್ಮಾನುಸಾರ ಮಾನವನ ಜೀವ ಇರುವತನಕ ಪ್ರಜ್ಞೆಯನ್ನು ಮೂರು ಹಂತಗಳಲ್ಲಿ ವಿಂಗಡಿಸಲಾಗಿದೆ. ಮೊದಲನೆಯದು ಹೊರಗಿನ ಮತ್ತು ಒಳಗಿನ ಅರಿವಿಗೆ ಕೊಂಡಿ ಇಲ್ಲದಂತಾ ತಾತ್ಕಾಲಿಕ ಚಿರ ನಿದ್ರೆ (ಡೀಪ್ ಸ್ಲೀಪ್). ಇನ್ನೊಂದು ಒಳ ಮತ್ತು ಹೊರ ಭಾಗದಲ್ಲಿ ಯಾವುದೇ ಭಾಗತ್ವ ಇಲ್ಲದಿದ್ದರೂ ಕಲ್ಪನಾ ಲೋಕದಲ್ಲಿ ಅಥವ ಕನಸಿನ (ಡ್ರೀಮ್) ಲೋಕದಲ್ಲಿ ಭಾಗಿಯಾದವನಂತೆ ಕಾಣುವುದು. ಮತ್ತೂಂದು ವೈಯಕ್ತಿಕ ಮತ್ತು ಪ್ರಾಪಂಚಿಕ ಪ್ರಜ್ಞೆ (ಅವೇರ್ನೆಸ್) ಇದ್ದು ಎರೆಡು ಅವಸ್ಥೆಗಳಿಗೂ ಭಾಗಿಯಾಗಿ ಜೀವನವನ್ನು ಸಾಗಿಸುವುದು. ಮೆದುಳಿನ ನರವ್ಯೂಹದ ರಚನೆ ವಾಸ್ತವಕ್ಕೆ ಸಿಗಲಾರದಂತ ನಿಗೂಡ ವ್ಯವಸ್ಥೆ. ಚಿರ ನಿದ್ದೆಯಿಂದ ಒಮ್ಮಿಂದೊಮ್ಮೆಗೆ ಎಚ್ಚರಾವಸ್ತೆಗೆ ಬರುವುದನ್ನು ಯಾವುದೇ ಅಕ್ಷರಗಳಿಂದ ತಿಳಿಸಲು ಸಾದ್ಯವಿಲ್ಲ. ಈ ಮೂರು ಹಂತಗಳಿಗೆ ಯಾವ ಎಳೆ (ತ್ರೆಡ್) ಸಂಪರ್ಕದಲ್ಲಿ ಇದೆ? ಈ ಸಂಪರ್ಕದ ಕೊಂಡಿಯನ್ನು “ಆತ್ಮ” ಎಂದು ಕರೆಯಬಹುದೇ?
ನಾನು ನಿಮ್ಯಾನ್ಸ ಆಸ್ಪತ್ರೆಯಲ್ಲಿ ಓದುತ್ತಿದ್ದಾಗ ನರ ಜೀವಶಾಸ್ತ್ರ ವಿಭಾಗದಲ್ಲಿ ಪಿ ಹೆಚ್ ಡಿ ಮಾಡುತ್ತಿದ್ದ ಸ್ನೇಹಿತರೊಬ್ಬರು ತಮ್ಮ ಸಂಶೋಧನೆಯ ವಿಷಯಕ್ಕೆ ಅವರ ಪ್ರಯೋಗಾಲಯಕ್ಕೆ ಬರ ಮಾಡಿಕೊಂಡರು. ಇವರ ವಿಷಯ ಮೆದುಳಿನ ತರಂಗಗಳನ್ನು ವಿಷೇಶ ಯಂತ್ರ ಸಹಾಯದಿಂದ ಬೇರ್ಪಡಿಸಿ ಒಂದು ತರಂಗ (ಆಲ್ಫಾ) ದಿಂದ ಸಂಗೀತ ಅಥವ ದೀಪ ಉರಿಯುವ ಹಾಗೆ ಮಾಡುವುದು. ಉದಾಹರಣೆಗೆ ಮನುಷ್ಯ ಯಾವಾಗ ಸಂಯಮದಿಂದ ವರ್ತಿಸುತ್ತಾನೋ ಆಗ “ಆಲ್ಷಾ” ತರಂಗಗಳು ಅಧಿಕವಾಗಿ ಉತ್ಪತ್ತಿಯಾಗುತ್ತದೆ. ಈ ತರಂಗಗಳಿಂದ ಯಂತ್ರದ ಮೂಲಕ ಸಾದೃಶ್ಯತೆಗೆ (ಸಂಗೀತ ಅಥವ ಬೆಳಕು) ಪರಿವರ್ತಿಸಿದಾಗ ಪ್ರಯೋಗಕ್ಕೆ ಒಳಗಾದ ವ್ಯಕ್ತಿ ಸಂಗೀತವನ್ನು ಕೇಳಿ ಮತ್ತಷ್ಟು ಶಾಂತತೆ ಮತ್ತು ಧ್ಯಾನ ಭರಿತನಾಗುತ್ತಾನೆ. ಇದರಿಂದ ಗಾಬರಿ, ಕಿನ್ನತೆ, ಮುಂಗೋಪ, ಸಿಟ್ಟು, ಅಸಹನೆ ಇತ್ಯಾದಿ ಮಾನಸಿಕ ಸಂಬಂಧಿ ಸಮಸ್ಯೆಗಳಿಗೆ ಈ ಸಂಶೋಧನೆಯಿಂದ ಪರಿಹಾರ ಕಂಡುಕೊಳ್ಳುವ ಪ್ರಯತ್ನ. ಇದನ್ನು “ಜೈವಿಕ ಪ್ರತಿಕ್ರಿಯೆ ಧ್ಯಾನ” ಅಥವ “ಬಯೋಫೀಡ್ಬ್ಯಾಕ್ ಮೆಡಿಟೇಷನ್” ಎಂದು ಕರೆಯುತ್ತಾರೆ. ಒಂದು ತರಹ ನೇರವಲ್ಲದ ಧ್ಯಾನ. ಈ ನನ್ನ ಮಿತ್ರ ನನ್ನನ್ನು ಸಾಕಷ್ಟು ಶಾಂತವಾಗಿಸುವ ಪ್ರಯತ್ನ ಪಟ್ಟರೂ ನಾನು ರಿಲಾಕ್ಸ್ ಆಗಲೇ ಇಲ್ಲ. ನಾನು ಸಂಗೀತ ಅಥವ ಬೆಳಕು ಎರಡು ನೋಡಲಿಲ್ಲ. ಆತನಿಗೆ ಅವನ ಪ್ರಯೋಗಕ್ಕೆ ನನ್ನ ಅಯ್ಕೆ ಸರಿ ಹೋಗಲಿಲ್ಲವೇನೊ ತಿಳಿಯದು.

ಕ್ರಿಯಾ ಯೋಗದಲ್ಲಿ ಹೇಳಲಾದ “ಸ್ವಯಂ ಅಧ್ಯಯನ” ಅಂದರೆ ಸ್ವಯಂ ಜ್ಞಾನಾರ್ಜನೆಯಿಂದ ಇಂದು ನಾನು ಆದಷ್ಟು ಧ್ಯಾನಾಸಕ್ತಿಗೆ ದಾಸನಾದೆ. ಮಿಸೈಲ್ ಮ್ಯಾನ್ ಋಷಿ “ಅಬ್ದುಲ್ ಕಲಾಂ” ಅಂದು ಹೇಳಿದ್ದರು “ಧ್ಯಾನಕ್ಕೆ ಜ್ಞಾನವೇ ಮೂಲ”. ಸಾಮನ್ಯವಾಗಿ ಬಿಡುವಿನ ವೇಳೆಯಲ್ಲಿ ನನ್ನ ಚೌಕಟ್ಟಿನ ಆಚೆಯ ವಿಷಯಗಳು (ಔಟ್ ಆಫ್ ಬಾಕ್ಸ ತಿಂಕಿಂಗ್) ಬರುತ್ತಿರುತ್ತವೆ. ಅಂತ ವಿಷಯಗಳಲ್ಲಿ ನಾನು ತಿಳಿಸುವ ಈಗಿನ ವಿಷಯವೂ ಒಂದು.
ಮೆದುಳಿನ ತರಂಗಗಳು ನಾಲ್ಕು ವಿಧ. ಅವುಗಳು “ಆಲ್ಫಾ, ಬೀಟಾ, ತೀಟಾ ಮತ್ತು ಡೆಲ್ಟಾ”. ಇಂದಿನ ಲೇಖನ ಈ ವಿಷಯವಲ್ಲ. ಸಂಕ್ಷಿಪ್ತವಾಗಿ ಇವುಗಳನ್ನು ಪರಿಚಯಿಸುವ ಯತ್ನ ನನ್ನದು. ಕಣ್ಣು ಮುಚ್ಚಿ ಧ್ಯಾನಸಿದರೆ “ಆಲ್ಫಾ” ತರಂಗ ಅಧಿಕವಾಗುತ್ತೆ. ಕಣ್ಢು ತೆರೆದು ವ್ಯವಹಾರ ಮಾಡುವರಿಗೆ “ಬೀಟಾ” ತರಂಗ. ವ್ಯಕ್ತಿ ಒತ್ತಡಕ್ಕೆ ಒಳಗಾದವನಿಗೆ ಈ ತರಂಗ ಅಧಿಕವಾಗಿ ಕಾಣುವುದು. ಕೆಲವು ಮೆದುಳಿನ ಕ್ರಿಯಾ ಸಂಬಂಧ ಸಮಸ್ಯೆಗಳಿಗೆ “ತೀಟಾ” ತರಂಗ ಕಂಡುಬರುವದು. ಉದಾಹರಣೆಗೆ, ಅಪಸ್ಮಾರ ಕಾಯಿಲೆಗಳಲ್ಲಿ ತೀಟಾ ತರಂಗಗಳು ಕಾಣುವುದು. ನಿರಂತರವಾಗಿ ಡೆಲ್ಟಾ ವೇವ್ ಇ ಇ ಜಿ ಯಲ್ಲಿ ದಾಖಲಿಸಿದರೆ ಅದನ್ನು “ಬ್ರೈನ್ ಡೆತ್” ಎಂದು ಕರೆಯುತ್ತಾರೆ. ಉದಾಹರಣೆಗೆ, ರಸ್ತೆ ಅಪಘಾತ ಸಂಭವಿಸಿ ತಲೆಗೆ ಪೆಟ್ಟಾಗಿ ಮೆದುಳು ಅನುಪಯುಕ್ತವಾಗುವುದು. ಈ ಸಮಯದಲ್ಲಿ ಬ್ರೈನ್ ಡೆತ್ ಆದವರಿಂದ ಒಳ ಅಂಗಾಗಳನ್ನು ತೆಗೆದು ಬೇರೆ ಅಂಗವೈಪಲ್ಯ ರೋಗಿಗಳಿಗೆ ಕಸಿ ಮಾಡಿಸುತ್ತಾರೆ.
ಈ ವಿಷಯಗಳು ನನ್ನ ಮುಂದೆ ಹಾದು ಹೋಗುತ್ತಿರುವಾಗ ನಾನು ಸಹ ಏನಾದರು ಅರಿವಿನ ಬಗ್ಗೆ ವಿವರಣೆ ಕೊಡಬಹುದಾ ಎನ್ನುವ ವಿಚಾರ ಬಂತು. ಅರಿವನ್ನು ಕೆಲ ವಿಜ್ಞಾನಿಗಳು “ಸೂಪರ್ ಬಬಲ್” ಎಂದು ಕರೆದಿದ್ದಾರೆ. ವಿಶ್ವ ಎಂಬ ಬಬಲ್ (ಗುಳ್ಳೆ) ಒಳಗೆ ನಾವು ಇದ್ದೇವೆ. ಎಂಟನೇ ಶತಮಾನದಲ್ಲಿ ಆದಿ ಶಂಕರಾಚಾರ್ಯರ ಅದ್ವೈತ ಸಿದ್ಧಾಂತದ ಪ್ರಬಂಧ ಪರಿಚ್ಛೇದಗಳಲ್ಲಿ ಬಹು ಪ್ರಸಿದ್ಧ ವಿಚಾರಧಾರೆ “ಅಹಂ ಬ್ರಹ್ಮಾಸ್ಮಿ”. ಈ ವಿಷಯವನ್ನು ಸಂಕ್ಷಿಪ್ತವಾಗಿ ತಿಳಿಸುವ ಪ್ರಯತ್ನ ನನ್ನದು.
ಇದನ್ನು ಓದು: “ಮಹಿಳೆ – ಚಾರ್ಲ್ಸ ಡಾರ್ವಿನ್ – ಓಶೋ – ಮುಕ್ತಾನಂದ”
ಆದಿ ಶಂಕರಾಚಾರ್ಯರು ಅರಿವೆಂಬುದನ್ನು “ಕಾಲ ಕಾಲದಲ್ಲಿ ಸ್ಥಿತಿ, ಸನ್ನಿವೇಶ ಮತ್ತು ವಸ್ತುಗಳು ನಮ್ಮ ನಮ್ಮ ಪ್ರಜ್ಞೆಯಲ್ಲಿ ಪ್ರತಿಫಲಿಸ ಬೇಕಾದರೆ ನಮ್ಮ ಪಂಚೇಂದ್ರಿಯಗಳು ಕ್ರಮಬದ್ಧವಾಗಿ ಇರಬೇಕು. ಆದರೆ ಪ್ರಕೃತಿಯ ವಾಸ್ತವಕತೆಗೆ ಯಾವುದೇ ಪಂಚೇಂದ್ರಿಯಗಳ ಅಗತ್ಯ ಇಲ್ಲ”. ಈ ನಿರೂಪಣಾರ್ಥವನ್ನು ಬಿಡಿಸಿದಾಗ ನಮ್ಮ ಅರಿವಿನ ಚಿತ್ರಣ ಅಪ್ಪಟವೇ? ಒಂದು ವಿಧದಲ್ಲಿ ನಮ್ಮ ಬದುಕು ಮತ್ತು ಜೀವನ ಸಾಪೇಕ್ಷವೇ ಹೊರತು ಅಪ್ಪಟವಲ್ಲ. ಆದುದರಿಂದ ಇಂತಹ ಭ್ರಮೆಯ ಲೋಕದಲ್ಲಿ, ವಿಶ್ವದ ಅಡಿಯಲ್ಲಿ ನಮ್ಮ ಒಳಗಿನ ಮತ್ತು ಹೊರ ಪ್ರಪಂಚದ ಜೊತೆ ನಿರಂತರವಾಗಿ ಯಾರಿಗೂ, ಯಾವುದಕ್ಕೂ ಆಡೆ ತಡೆ ಇಲ್ಲದೆ ಕೆಲಸ, ನಿರ್ವಹಣೆ ಮತ್ತು ವ್ಯವಹಾರ ಆಗುತ್ತಿರುವುದನ್ನು “ಅರಿವು” ಎಂದು ಕರೆಯಬಹುದೇ ಅಥವ ಇಲ್ಲವೇ ಎಂಬುದನ್ನು ಓದುಗರಿಗೆ ಬಿಡುತ್ತೇನೆ.

ಮೂಲತಹ “ತಂತ್ರ” ಪ್ರತಿಪಾದಿಸುವುದು ಇದೇ ವಿಚಾರವನ್ನು. ಮಾನವನ ಕಾಯಕ, ಶರೀರದ ಯಂತ್ರದಿಂದ, ಯಂತ್ರದ ಕೆಲಸವನ್ನು ನಿಯಂತ್ರಿಸುವುದು ಮನಸ್ಸಿನ ಮಂತ್ರದಿಂದ. “ತಂತ್ರ” ಅಂಶ, ಯಂತ್ರ ಮತ್ತು ಮಂತ್ರಗಳ ಸಹಾಯದಿಂದ ಎನ್ನಬಹುದು.
ನಾನು ನನ್ನದೇ ಆದ ಅರಿವಿನ ಸೂತ್ರೀಕರಣವನ್ನು ಮಾಡುವ ಪ್ರಯತ್ನ ಮಾಡುವೆ. “ನಿರಂತರವಾಗಿ ಮೂವತ್ತು ಅಥವ ನಲವತ್ತು ಸೂಕ್ಷ್ಮ ವಿದ್ಯುತ್ತ ಹರಿವು ಮೆದುಳಿನ ನರಗಳಲ್ಲಿ ಇದ್ದು ಹಲವಾರು ಆಯಾಮಗಳಿಂದ ಮೆದುಳಿಗೆ ಹೋದ ಬಿಂಬ, ಪ್ರತಿಬಿಂಬಿಸುವ ಮೂಲಕ ಒಳಗೆ ಮತ್ತು ಹೊರಗಿನ ಪ್ರಪಂಚಗಳ ಮಧ್ಯೆ ಗ್ರಹಿಸಲಾಗದ ದಾರದಿಂದ ನೂರಾರು ಕೆಲಸ ಕಾರ್ಯಗಳು ಸ್ವಯಂ ಆಗಿ ಚಾಲನೆ ಆಗುವುದನ್ನು “ಪ್ರಜ್ಞೆ” ಎಂದೆನ್ನಬಹುದು”. ಇದು ನನ್ನ ವೈಯಕ್ತಿಕ ವಿಶ್ಲೇಷಣೆ.
ಶರೀರ ಮತ್ತು ಮನಸ್ಸು ಎರಡು ತಿಳಿಯಲಾಗದ ವೇಗದಲ್ಲಿ ಕೆಲಸ ಮಾಡುವುದರಿಂದ ಯಾರಿಗೂ ಇವರೆಡು ಬೇರೆ ಎನ್ನುವುದು ಗೊತ್ತೇ ಆಗುವುದಿಲ್ಲ. ಆದರೆ ವಾಸ್ತವದಲ್ಲಿ ಮೆದುಳು ಮೊದಲು ಸಂಮವಹನಗಳನ್ನು ಗ್ರಹಿಸಿದ ನಂತರ ಸಂಕೇತಗಳನ್ನು ಅಂಗಾಂಗಳಿಗೆ ರವಾನಿಸಿ ಶರೀರದಿಂದ ಕೆಲಸಗಳನ್ನು ಮಾಡಿಸುತ್ತದೆ.
ತಂತ್ರ ಶಾಸ್ತ್ರ ಬೈರವ ವಿಜ್ಞಾನದಲ್ಲಿ ಹೇಳಿರುವ ಶಿವ ಮತ್ತು ಪಾರ್ವತಿ ನಡುವೆ ಆದ ಮಿಲನ ಮಹೋತ್ಸವ “ವಿಶ್ವ ಪ್ರೇಮ” ದ ಸಂಕೇತವಾಗಿ ಪರಿಗಣಿಸಲಾಗಿದೆ. ಇದೇ ತರಹ ಆದಿ ಶಂಕರಾಚಾರ್ಯರ ಅದ್ವೈತ ಸಿದ್ಧಾಂತ “ವಿಶ್ವ ಜ್ಞಾನ” ಎಂದು ಉಲ್ಲೇಖಿಸಿಲಾಗಿದೆ…
ಮುಂದುವರಿಯುವುದು …
-ಡಾ॥ ಎ.ಎಂ.ನಾಗೇಶ್
ಖ್ಯಾತ ಮನೋವೈದ್ಯ


[…] […]