ಕೆ.ಆರ್.ಪೇಟೆ,ಜೂ.11: ತಾಲ್ಲೂಕಿನ ಮಾಕವಳ್ಳಿ ಬಳಿ ಇರುವ ಹೇಮಗಿರಿ ಸಕ್ಕರೆ ಕಾರ್ಖಾನೆಯ(ಕೋರಮಂಡಲ್ ಷುರ್ಸ್) ಪ್ರಸಕ್ತ ಸಾಲಿನ 2025-26ನೇ ಸಾಲಿನ ಕಬ್ಬು ಅರೆಯುವ ಕಾರ್ಯವನ್ನು ಪ್ರಾರಂಭಿಸಲು ಶೃಂಗೇರಿಯ ಶಾರದ ಪೀಠದ ಶ್ರೀ ವಿದ್ಯಾಶಂಕರ್ ಶರ್ಮರವರ ನೇತೃತ್ವದ ಪುರೋಹಿತರ ತಂಡದೊಂದಿಗೆ ಶ್ರೀ ಮಹಾಗಣಪತಿ ಹೋಮದೊಂದಿಗೆ ಬಾಯ್ಲರ್ಗೆ ಅಗ್ನಿ ಸ್ಪರ್ಷ ಮಾಡುವ ಮೂಲಕ ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು.
ಪ್ರಸಕ್ತ ಹಂಗಾಮಿನ ಕಬ್ಬು ಅರೆಯುವ ಕಾರ್ಯಕ್ರಮದ ಪೂಜಾ ವಿಧಾನಗಳನ್ನು ದಿನಾಂಕ: 26-06-2025ರ ಗುರುವಾರದಂದು ಕೈಗೊಳ್ಳಲಾಗುವುದು ಎಂದು ಕಾರ್ಖಾನೆಯ ಉಪಾಧ್ಯಕ್ಷ ವಿ.ಜೆ.ರವಿ ತಿಳಿಸಿದ್ದಾರೆ.
ಈ ವೇಳೆ ಮಾತನಾಡಿದ ರವಿ ಅವರು ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ನುರಿಸುವ ಕಾರ್ಯವನ್ನು ಆರಂಭಿಸಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು. ಇದಕ್ಕೆ ಪೂರಕವಾಗಿ ಈಗಾಗಲೇ ಪ್ರಸಕ್ತ 2025-26ನೇ ಕಬ್ಬು ಅರೆಯುವ ಸಾಲಿಗೆ ರೈತರಿಗೆ ಕಬ್ಬು ಕಟಾವು ಆಳುಗಳ ಕೊರತೆಯಾಗದಂತೆ ಕಾರ್ಖಾನೆಯು ಮುಂಗಡ ಹಣ ನೀಡಿ ಹೊರ ವ್ಯಾಪ್ತಿಯ ಹಾಗೂ ಸ್ಥಳೀಯ ಕಬ್ಬುಕಟಾವು ಗುಂಪುಗಳ ಜೊತೆಒಪ್ಪಂದ ಮಾಡಿಕೊಂಡಿರುತ್ತೇವೆ ಎಂದು ತಿಳಿಸಿದರು.

ಮುಂದಿನ ಹಂಗಾಮುಗಳಲ್ಲಿ ಹೆಚ್ಚಿನ ಪ್ರಮಾಣದಕಬ್ಬನ್ನುಅರೆಯಲು ಬೇಕಾಗಬಹುದಾದಕಬ್ಬಿನ ಪ್ರಮಾಣವನ್ನು ಸ್ಥಳೀಯವಾಗಿ ಅಭಿವೃದ್ದಿಪಡಿಸುವ ಸಲುವಾಗಿ ಕಬ್ಬಿನ ಇಳುವರಿಯನ್ನು ಹೆಚ್ಚಿಸಲುಕಾರ್ಖಾನೆಯು ಅನೇಕ ಕಬ್ಬುಅಭಿವೃದ್ದಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ, ರೈvಬಾಂದವÀರುತಮ್ಮ ಸಮೀಪದಕಬ್ಬಿನ ವಿಭಾಗದ ವಿಭಾಗಾಧಿಕಾರಿಗಳನ್ನು / ಕ್ಷೇತ್ರ ಸಿಬ್ಬಂದಿಗಳನ್ನು ಸಂಪರ್ಕಿಸಿ ಈ ಯೋಜನೆಗಳಉಪಯೋಗವನ್ನುಪಡೆದುಕೊಂಡುಆಧುನಿಕಬೇಸಾಯಪದ್ದತಿಗಳನ್ನು ಅಳವಡಿಸಿಕೊಂಡು ಹೆಚ್ಚು ಹೆಚ್ಚು ಪ್ರದೇಶದಲ್ಲಿಕಬ್ಬು ಬೆಳೆಯಬೇಕೆಂದುಕೋರಿದರು. ಅಲ್ಲದೆಅಕ್ಕಪಕ್ಕದ ಕಾರ್ಖಾನೆಗಳು ಪ್ರಾರಂಭವಾಗುವುದರಿಂದ, ನಮ್ಮಕಾರ್ಖಾನೆಗೆ ಹೊರ ವ್ಯಾಪ್ತಿಯಕಬ್ಬು ಸರಭರಾಜುಇಲ್ಲವಾಗುವುದರಿಂದ, ನಮ್ಮಕಾರ್ಖಾನೆಯ ವ್ಯಾಪ್ತಿಯರೈತರು ಹೆಚ್ಚಿನ ಪ್ರಮಾಣದಲ್ಲಿಕಬ್ಬು ಬೆಳೆಯಬೇಕೆಂದು ಕೋರಿದರು.
ಕಳೆದ ಸಾಲಿನಲ್ಲಿಕಬ್ಬು ಸರಭರಾಜು ಮಾಡಿದಎಲ್ಲಾರೈತಬಾಂದವರಿಗೆ ಸರ್ಕಾರ ನಿಗಧಿಪಡಿಸಲಾಗಿದ್ದನ್ಯಾಯಯುತ ಹಾಗೂ ಲಾಭದಾಯಕ ಬೆಲೆಯಾದ ಪ್ರತಿಟನ್ನಿಗೆರೂ.3154/- ಗಳನ್ನು ಪೂರ್ತಿಯಾಗಿ ಸಕಾಲದಲ್ಲಿ ಪಾವತಿಸಲಾಗಿದೆಎಂದು ತಿಳಿಸಿ 2025-26ನೇ ಸಾಲಿಗೆ ಕೇಂದ್ರ ಸರ್ಕಾರವು ನಿಗಧಿಪಡಿಸುವನ್ಯಾಯಯುತ ಹಾಗೂ ಲಾಭದಾಯಕ ಬೆಲೆಯನ್ನು ಪಾವತಿಸಲು ನಮ್ಮಕಾರ್ಖಾನೆಯು ಬದ್ಧವಾಗಿದೆಎಂದು ತಿಳಿಸಿದರು.
ಕಾರ್ಖಾನೆಗೆ ದಿನವಹಿ ಕಬ್ಬುಅರೆಯುವ ಸಾಮರ್ಥ್ಯ 4,000 ಟನ್ನಿಗಳಿದ್ದು ವಾರ್ಷಿಕ ಸುಮಾರು 8.00 ರಿಂದ 8.50 ಲಕ್ಷ ಟನ್ನಗಳಷ್ಟು ನುರಿಸುವ ಸಾಮರ್ಥ್ಯವಿರುತ್ತದೆ.ಆದರೆ ಪ್ರಸ್ತುತ ನಮ್ಮಕಾರ್ಖಾನೆಯ ಮೀಸಲು ಕ್ಷೇತ್ರ ವ್ಯಾಪ್ತಿಗಳಲ್ಲಿ 2025-26ನೇ ಸಾಲಿಗೆ 11,000 ಎಕರೆಕಬ್ಬಿನ ಬೆಳೆ ಇದ್ದು, ಅಂದಾಜು5 ಲಕ್ಷ ಟನ್ಗಳಷ್ಟು ಮಾತ್ರಕಬ್ಬಿನ ಲಭ್ಯತೆಇರುತ್ತದೆ.ಆದುದರಿಂದ ಸದರಿ ಸಾಲಿಗೆ ಈಗಾಗಲೇ ರೈತರುಒಪ್ಪಿಗೆ ಮಾಡಿಸಿರುವ ಮತ್ತುಒಪ್ಪಿಗೆರಹಿತಕಬ್ಬನ್ನು ಈ ಹಿಂದಿನ ಸಾಲುಗಳಲ್ಲಿ ಸಹಕರಿಸಿದಂತೆ ಪ್ರಸಕ್ತ ಸಾಲಿನಲ್ಲೂ ಸಂಪೂರ್ಣವಾಗಿ ಸರಬರಾಜು ಮಾಡಿರೈತರ ಹಾಗೂ ಕಾರ್ಖಾನೆಯ ಶ್ರೇಯೋಭಿವೃದ್ಧಿಗೆ ಸಹಕರಿಸಲುಕೋರಿದರು.ಅಲ್ಲದೆ ಹಾಲಿ ಇರುವಕಬ್ಬಿನ ಬೆಳೆಯ ಇಳುವರಿಯನ್ನು ಹೆಚ್ಚಿಸಲುಕಾರ್ಖಾನೆಯವರುಕೈಗೊಂಡಿರುವಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ರೈತಬಾಂದವರುತಮ್ಮಕಬ್ಬಿನ ಬೆಳೆಯ ಇಳುವರಿಯನ್ನು ಹೆಚ್ಚಿಸಿಕೊಳ್ಳುವ ಮೂಲಕ ಮತ್ತುಕಬ್ಬುಅಭಿವೃದ್ಧಿ ಯೋಜನೆಗಳ ಸದುಪಯೋಗಪಡಿಸಿಕೊಂಡುಇನ್ನೂ ಹೆಚ್ಚಿನ ಪ್ರದೇಶದಲ್ಲಿಕಬ್ಬನ್ನು ಬೆಳೆದು ಕಾರ್ಖಾನೆಯ ಸಾಮರ್ಥ್ಯಕ್ಕೆಕೊರತೆಯಾಗಿರುವಇನ್ನೂ ಸುಮಾರು 3.50 ಲಕ್ಷ ಟನ್ನುಗಳಷ್ಟು ಕಬ್ಬುಅಭಿವೃದ್ಧಿ ಮಾಡಿರೈತರ ಹಾಗೂ ಕಾರ್ಖಾನೆಯ ಏಳಿಗೆಗೆ ಕೈಜೋಡಿಸಬೇಕೆಂದು ಈ ಮೂಲಕ ಎಲ್ಲಾರೈತ ಬಾಂಧವರಿಗೆ ಮನವಿ ಮಾಡಿದರು.
*ಈಗಾಗಲೇ ಕೋರಮಂಡಲ್ ಷುಗರ್ಸ್ ಕಂಪನಿಯರು ಸದರಿ ಕಾರ್ಖಾನೆಯನ್ನು ಶ್ರೀ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಗೆ ಮಾರಾಟ ಮಾಡಿದ್ದು, ಹೊಸ ಮಾಲೀಕರು ಕಾರ್ಖಾನೆಯ ಹೆಸರನ್ನು ಹೇಮಗಿರಿ ಸಕ್ಕರೆ ಕಾರ್ಖಾನೆ ಎಂದು ಮರುನಾಮಕರಣ ಮಾಡಿದ್ದು, ಇನ್ನು ಮುಂದಿನ ಎಲ್ಲಾ ವ್ಯವಹಾರಗಳು ಹೇಮಗಿರಿ ಸಕ್ಕರೆ ಕಾರ್ಖಾನೆ ಎಂಬ ಹೆಸರಿನಲ್ಲಿಯೇ ನಡೆಯಲಿವೆ ಎಂದು ನೂತನ ಆಡಳಿತ ಮಂಡಳಿಯ ಮೂಲಗಳು ಪತ್ರಕರ್ತರರೊಂದಿಗೆ ಮಾಹಿತಿ ಹಂಚಿಕೊಂಡಿವೆ
ವರದಿ: ಶ್ರೀನಿವಾಸ್. ಆರ್.
