ಸಿಟಿ–ಎಂಆರ್‌ಐ ಸೇವೆ ಮತ್ತೆ ಆರಂಭ: ಕರ್ನಾಟಕ ಸರ್ಕಾರದಿಂದ ಜಿಲ್ಲಾ ಆಸ್ಪತ್ರೆಗಳಿಗೆ ಸಿಹಿಸುದ್ದಿ

ರಾಜ್ಯದ ಜಿಲ್ಲಾ ಆಸ್ಪತ್ರೆಗಳಲ್ಲಿ ಸ್ಥಗಿತಗೊಂಡಿದ್ದ ಸಿಟಿ ಹಾಗೂ ಎಂಆರ್‌ಐ ಸ್ಕ್ಯಾನ್ ಸೇವೆಗಳು ಪುನರಾರಂಭವಾಗಿದ್ದು, 2–3 ದಿನಗಳಲ್ಲಿ ಸಂಪೂರ್ಣ ಕಾರ್ಯನಿರ್ವಹಣೆ ಸಾಧ್ಯವೆಂದು ರಾಷ್ಟ್ರೀಯ ಆರೋಗ್ಯ ಅಭಿಯಾನ ತಿಳಿಸಿದೆ. ಬಿಪಿಎಲ್ ರೋಗಿಗಳಿಗೆ ಉಚಿತ ಹಾಗೂ ಎಪಿಎಲ್ ರೋಗಿಗಳಿಗೆ ಸಬ್ಸಿಡಿ ಸೇವೆ ಮುಂದುವರಿಯಲಿದೆ.