ಚನ್ನರಾಯಪಟ್ಟಣ:ನೆನ್ನೆ ರಾತ್ರಿ ಜಾತಿ ನಿಂದನೆಯ ದೂರನ್ನು ನೀಡಿದರೆ ದೂರನ್ನು ತೆಗೆದುಕೊಳ್ಳದೆ ಉಡಾಫೆ ಉತ್ತರ ನೀಡಿರುವ ನಗರ ಠಾಣೆಯ ಪಿಎಸ್ಐ ಮಲ್ಲಪ್ಪ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ದಲಿತ ಸಂಘರ್ಷ ಸಮಿತಿ ಹಾಗೂ ಭೀಮ ಆರ್ಮಿ ಸಂಘಟನೆಯ ಪದಾಧಿಕಾರಿಗಳು, ಪ್ರತಿಭಟನ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬರುವ ತನಕ ನಮ್ಮ ಪ್ರತಿಭಟನೆಯನ್ನು ಕೈಬಿಡುವುದಿಲ್ಲ ಎಂದು ಘೋಷಣೆಗಳನ್ನು ಕೂಗಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಡಿ ವೈ ಎಸ್ ಪಿ ಕುಮಾರ್ ಅವರು ಹೋರಾಟಗಾರರ ಜೊತೆ ಮಾತುಕತೆ ನಡೆಸಿ ಪ್ರತಿಭಟನೆಗಾರರನ್ನು ಮನವೊಲಿಸಿ ಪ್ರತಿಭಟನೆಗಾರರ ಮನವಿ ಪತ್ರವನ್ನು ಸ್ವೀಕರಿಸಿದ ಡಿವೈಎಸ್ಪಿ ಕುಮಾರ್ ಮಾತನಾಡಿ ಡಿಸೆಂಬರ್ 6ನೇ ತಾರೀಕು ಶನಿವಾರ ಹಾಸನ ಜಿಲ್ಲೆಗೆ ಮುಖ್ಯಮಂತ್ರಿಗಳ ಪ್ರವಾಸ ಇರುವ ಕಾರಣ ಕೂಡಲೇ ಶಿಸ್ತು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ, 10ನೇ ತಾರೀಕಿನವರೆಗೆ ಕಾಲಾವಕಾಶ ನೀಡುವಂತೆ ಕೇಳಿದರು. ಡಿವೈಎಸ್ಪಿ ಅವರ ಮಾತಿಗೆ ಬೆಲೆ ನೀಡಿದ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಕೈ ಬಿಡುವುದಾಗಿ ಘೋಷಿಸಿದರು.
ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ಪ್ರಸನ್ನ ಮಾತನಾಡಿ ನೆನ್ನೆ ರಾತ್ರಿ ಆಟೋ ಚಾಲಕರು ನೀಡಿರುವ ಜಾತಿನಿಂದನೆ ಮಾಡಿರುವ ಡಾಕ್ಟರ್ ಪವನ್ ಕುಮಾರ್ ಹಾಗೂ ಶ್ರೀಮತಿ ಪವನ್ ಕುಮಾರ್ ಸೇರಿದಂತೆ ಇತರರ ವಿರುದ್ಧ ಕೂಡಲೇ ಎಫ್ ಐ ಆರ್ ದಾಖಲೆ ಮಾಡಬೇಕು, ಹಾಗೂ ದಲಿತ ಮುಖಂಡರೊಂದಿಗೆ ಹಾಗೂ ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸಿರುವ ಹಾಗೂ ಕರ್ತವ್ಯ ಲೋಪ ಎಸೆಗಿರುವ ನಗರ ಪೊಲೀಸ್ ಠಾಣೆಯ ಪಿಎಸ್ಐ ಮಲ್ಲಪ್ಪ ವಿರುದ್ಧ ಡಿಸೆಂಬರ್10ನೇ ತಾರೀಖಿನೊಳಗೆ ಸೂಕ್ತ ಕ್ರಮ ಕೈಗೊಳ್ಳದೆ ಹೋದರೆ, ಡಿಸೆಂಬರ್ 11ನೇ ತಾರೀಕು ಚನ್ನರಾಯಪಟ್ಟಣ ತಾಲೂಕಿನಿಂದ 1000 ಜನರನ್ನು ಸೇರಿಸಿ ನಗರ ಪೊಲೀಸ್ ಠಾಣೆ ಮುತ್ತಿಗೆ ಹಾಕಿ ಉಗ್ರ ಹೋರಾಟ ಮಾಡುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ದಲಿತ ಸಂಘಟನೆಗಳ ಮುಖಂಡರುಗಳಾದ ಕೆ ಎನ್ ನಾಗೇಶ್, ಎಂ ಆರ್ ರಂಗಸ್ವಾಮಿ, ಪ್ರಸನ್ನ, ಗಾಯಕ ಮಂಜು, ದೊರೆರಾಜು, ನಾಗಸಮುದ್ರ ಬಾಲು, ಕುರುವಂಕ ಮಂಜು, ದಮ್ಮನಿಂಗಲ ಶಂಕರ್, ಮತ್ತಿಘಟ್ಟರಂಗಸ್ವಾಮಿ, ಸಿ ಜಿ ಸೋಮಶೇಖರ್, ಬಾಗಿವಾಳು ವಿಜಯಕುಮಾರ್, ವಿರುಪಾಕ್ಷಪುರ ಪ್ರಕಾಶ್, ಮಾದಿಹಳ್ಳಿ ಮಂಜು, ಕೆ ವಿ ಸತೀಶ್, ದಡಿಘಟ್ಟ ಮಧು, ರಾಜೇಂದ್ರ ಕುಮಾರ್, ಗುರುಸ್ವಾಮಿ, ಬಾಬು ,ರವಿಕುಮಾರ್, ಪರಶುರಾಮ್, ಪರ್ವೀಜ್, ಕಿಶೋರ್, ಅನಿಲ್, ಶಿವರಾಜು, ರಂಗರಾಜು, ಕೆಆರ್ ಮಂಜು, ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
– ಮಂಜುನಾಥ್ ಐ.ಕೆ.
