ಬೆಂಗಳೂರು: ಜೀ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಇದೀಗ ಅಂತಿಮ ಘಟ್ಟ ತಲುಪಿದ್ದು, ಇದರ ಬಹು ನಿರೀಕ್ಷಿತ ಗ್ರ್ಯಾಂಡ್ ಫಿನಾಲೆ ಏಪ್ರಿಲ್ 11ರ ಶನಿವಾರ ಸಂಜೆ 7ರಿಂದ 9 ಗಂಟೆಯವರೆಗೆ ಹಾಗೂ ಏಪ್ರಿಲ್ 12ರ ಭಾನುವಾರ ಸಂಜೆ 7ರಿಂದ 9.30ರವರೆಗೆ ಪ್ರಸಾರವಾಗಲಿದೆ.
ಸೆಲೆಬ್ರಿಟಿ ಸ್ಪರ್ಧಿಗಳು ಹಾಗೂ ಪ್ರತಿಭಾವಂತ ಡ್ಯಾನ್ಸರ್ಗಳು ಜೋಡಿಯಾಗಿ ಭಾಗವಹಿಸಿರುವ ಈ ಶೋ, ವಿವಿಧ ನೃತ್ಯ ಪ್ರಕಾರಗಳು ಮತ್ತು ಥೀಮ್ಗಳ ಮೂಲಕ ಕಳೆದ ಕೆಲವು ವಾರಗಳಿಂದ ಜೀ ಕನ್ನಡದ ವೀಕೆಂಡ್ ಕಾರ್ಯಕ್ರಮಗಳಲ್ಲಿ ಪ್ರಮುಖ ಆಕರ್ಷಣೆಯಾಗಿತ್ತು.
ಈ ಶೋಗೆ ಡಾ. ಶಿವರಾಜ್ ಕುಮಾರ್, ರಚಿತಾ ರಾಮ್, ಅರ್ಜುನ್ ಜನ್ಯ ಮತ್ತು ವಿಜಯ್ ರಾಘವೇಂದ್ರ ತೀರ್ಪುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದು, ಜನಪ್ರಿಯ ನಿರೂಪಕಿ ಅನುಶ್ರೀ ಕಾರ್ಯಕ್ರಮವನ್ನು ಆಕರ್ಷಕವಾಗಿ ನಡೆಸಿಕೊಡುತ್ತಿದ್ದಾರೆ.
ಈ ಸೀಸನ್ನಲ್ಲಿ ತೀರ್ಪುಗಾರರು ಸ್ಪರ್ಧಿಗಳ ಹಾವಭಾವ, ಸಂಯೋಜನೆ (ಕೋ-ಆರ್ಡಿನೇಷನ್), ಅಭಿವ್ಯಕ್ತಿ ಮತ್ತು ಒಟ್ಟಾರೆ ಪ್ರಸ್ತುತಿಗಳನ್ನು ಆಧರಿಸಿ ತೀರ್ಪು ನೀಡಿದ್ದು, ಅದು ಸ್ಪರ್ಧಿಗಳ ಪ್ರದರ್ಶನದಲ್ಲಿ ಇನ್ನಷ್ಟು ಸುಧಾರಣೆಗೆ ಕಾರಣವಾಗಿದೆ. ವಿಶೇಷವಾಗಿ, ಈ ಶೋನಲ್ಲಿ ನೃತ್ಯದ ಮೂಲಕ ಕಥೆ ಹೇಳುವ ಶೈಲಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಶಾಸ್ತ್ರೀಯ, ಜಾನಪದ ಮತ್ತು ಸಿನಿಮಾ ಶೈಲಿಯ ನೃತ್ಯಗಳನ್ನು ಕಥೆ ಅಥವಾ ವಿಷಯಾಧಾರಿತವಾಗಿ ಪ್ರದರ್ಶಿಸಿರುವುದು ವೀಕ್ಷಕರ ಮನಸೆಳೆದಿದೆ.
ಈ ಸೀಸನ್ನ ಫೈನಲಿಸ್ಟ್ ಜೋಡಿಗಳಾಗಿ
ಪೂಜಾ ಮತ್ತು ಅನೂಪ್,
ಸಿದ್ದೇಗೌಡ್ರು ಮತ್ತು ದೀಶಲ್,
ಮೋಹಿತ್ ಮತ್ತು ಅನನ್ಯ,
ಹರ್ಷ ಮತ್ತು ನಂದು,
ಹಾಗೂ ಶಿಕ್ಷಿತ್ ತಾಪಾ ಮತ್ತು ಸಂಜನಾ
ಅಂತಿಮ ಸುತ್ತಿಗೆ ಪ್ರವೇಶಿಸಿದ್ದಾರೆ.
ವೈವಿಧ್ಯಮಯ ನೃತ್ಯ ಶೈಲಿಗಳನ್ನು ಅದ್ಭುತವಾಗಿ ಪ್ರದರ್ಶಿಸಿದ ಈ ಎಲ್ಲಾ ಜೋಡಿಗಳ ನಡುವೆ ಇದೀಗ ಗ್ರ್ಯಾಂಡ್ ಫಿನಾಲೆಯಲ್ಲಿ ತೀವ್ರ ಪೈಪೋಟಿ ನಡೆಯಲಿದ್ದು, ಫಿನಾಲೆ ಸಂಚಿಕೆಯಲ್ಲಿ ಎಲ್ಲ ಜೋಡಿಗಳ ಅಂತಿಮ ಪ್ರದರ್ಶನದ ಬಳಿಕ ಈ ಸೀಸನ್ನ ವಿಜೇತರನ್ನು ಘೋಷಿಸಲಾಗುತ್ತದೆ.
ಈ ಸೀಸನ್ ಇದೀಗ ರೋಚಕ ಅಂತಿಮ ಹಂತ ತಲುಪಿರುವುದರಿಂದ, ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಈ ಸೀಸನ್ನ ವಿನ್ನರ್ ಯಾರಾಗಲಿದ್ದಾರೆ? ಎಂಬ ಕುತೂಹಲ ವೀಕ್ಷಕರಲ್ಲಿ ಹೆಚ್ಚಾಗಿದೆ. ಪ್ರತಿಯೊಂದು ಜೋಡಿಯೂ ಫಿನಾಲೆಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಹಿನ್ನೆಲೆಯಲ್ಲಿ, ಯಾರು ಗೆಲ್ಲುತ್ತಾರೆ ಎಂಬುದನ್ನು ಊಹಿಸುವುದೇ ಕಷ್ಟವಾಗಿದೆ.
ಹೀಗಾಗಿ, ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಗ್ರ್ಯಾಂಡ್ ಫಿನಾಲೆಯನ್ನು ತಪ್ಪದೇ ವೀಕ್ಷಿಸಿ — ಏಪ್ರಿಲ್ 11 ಶನಿವಾರ ಸಂಜೆ 7ರಿಂದ 9ರವರೆಗೆ ಮತ್ತು ಏಪ್ರಿಲ್ 12 ಭಾನುವಾರ ಸಂಜೆ 7ರಿಂದ 9.30ರವರೆಗೆ, ಜೀ ಕನ್ನಡದಲ್ಲಿ.
