
ಬೆಂಗಳೂರು- ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಿಂದ ಬಿಡುಗಡೆಯಾದ ಬಳಿಕ ಮೊದಲ ಬಾರಿ ನಟ ದರ್ಶನ್ ತೂಗುದೀಪ ಅವರು ಕ್ಯಾಮೆರಾ ಮುಂದೆ ಬಂದಿದ್ದಾರೆ. ಮೂಲಕ ಅಭಿಮಾನಿಗಳಿಗೆ ಬಿಗ್ ಅಪ್ಡೇಟ್ ನೀಡಿದ್ದಾರೆ.
ಕ್ಯಾಮೆರಾ ಮುಂದೆ ಬಂದು ಮಾತನಾಡಿರುವ ವಿಡಿಯೋವನ್ನು ನಟ ದರ್ಶನ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಜೋಗಿ ಪ್ರೇಮ್ ಜೊತೆ ಸಿನಿಮಾ ಮಾಡುವ ಕುರಿತು ಅಭಿಮಾನಿಗಳಿಗೆ ಬಿಗ್ ಅಪ್ಡೇಟ್ವೊಂದನ್ನು ಕೊಟ್ಟಿದ್ದಾರೆ.
ನಟ ದರ್ಶನ್ ಹುಟ್ಟು ಹಬ್ಬ ಕೂಡ ಸಮೀಪಿಸುತ್ತಿದೆ. ಈ ಹಿನ್ನೆಲೆ ಅವರು ಕ್ಯಾಮೆರಾ ಮುಂದೆ ಬಂದು ಮಾತನಾಡಿದ್ದು, ಮತ್ತೆ ಸಿನಿಮಾಗಳ ಕಡೆ ಮುಖ ಮಾಡುವ ಮುನ್ಸೂಚನೆ ಕೊಟ್ಟಿದ್ದಾರೆ. ಇನ್ನು ಅಭಿಮಾನಿಗಳು ತಮ್ಮ ನೆಚ್ಚಿನ ನಟ ದರ್ಶನ್ ಹುಟ್ಟುಹಬ್ಬ ಸಂಭ್ರಮಾಚರಣೆಗೆ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ, ಅದ್ಧೂರಿಯಾಗಿ ದರ್ಶನ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾರಾ ಎಂಬುದರ ಬಗ್ಗೆ ಮಾಹಿತಿ ಇಲ್ಲ.
ಈ ವಿಡಿಯೋದಲ್ಲಿ ಮಾತನಾಡಿರುವ ನಟ ದರ್ಶನ್ “ಎಲ್ಲಾ ನನ್ನ ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ. ನಿಮಗೇ ಎಷ್ಟು ಧನ್ಯವಾದ ಹೇಳಿದರೂ ಕೂಡ ತುಂಬಾ ಕಡಿಮೆ. ನೀವು ತೋರಿಸಿದಷ್ಟು ಪ್ರೀತಿ ಅಭಿಮಾನದ ಮುಂದೇ ಇದೇನು ಅಲ್ಲ. ಇದನ್ನು ಯಾವ ರೀತಿಯಾಗಿ ರಿಟರ್ನ್ ಮಾಡಲಿ ಗೊತ್ತಾಗುತ್ತಿಲ್ಲ. ಈಗ ನಾನು ಕ್ಯಾಮೆರಾ ಮುಂದೆ ಬರಲು ಕಾರಣನೇ ನನ್ನ ಬರ್ತ್ಡೇ ವಿಚಾರವಾಗಿ. ನನಗೂ ಆಸೆ ಇತ್ತು, ನೀವು ಕೂಡ ಆಸೆ ಪಟ್ಟಿದ್ದೀರಿ. ನಿಮ್ಮನ್ನ ನಾನು ಭೇಟಿ ಮಾಡಬೇಕು ಅಂತಾ ನನಗೂ ತುಂಬಾ ಆಸೆ ಇದೆ. ಈ ಬಾರಿ ಒಂದು ಸಮಸ್ಯೆ ಏನು ಅಂದರೆ, ದೊಡ್ಡ ಸಮಸ್ಯೆ ಅಂತಾ ಹೇಳುತ್ತಿಲ್ಲ. ಒಂದೇ ಒಂದು ಸಮಸ್ಯೆ ಅಂದರೆ ಅದು ಆರೋಗ್ಯ ಸಮಸ್ಯೆ. ಪ್ರತಿ ಬಾರಿಯೂ ನಿಮ್ಮ ಮುಂದೆಯೇ ಬರುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ.
ನನಗೆ ತುಂಬಾ ಹೊತ್ತು ನಿಂತುಕೊಳ್ಳಲು ಆಗುವುದಿಲ್ಲ. ಮತ್ತೆ ನನ್ನೆಲ್ಲ ನಿರ್ಮಾಪಕರಿಗೂ ಧನವ್ಯವಾದಗಳು. ಇಷ್ಟು ದಿನ ಕಾದಿದ್ದಾರೆ. ಅವರಿಗೆ ಅನ್ಯಾಯ ಮಾಡಬಾರದು. ಖಂಡಿತ ಮುಂದೆ ಸಿಗುತ್ತೇನೆ. ಸಲ್ಪ ದಿನ ಹೋಗಲಿ ಎಂದು ಈ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಅಲ್ಲದೆ, ಜೊತೆಯಾಗಿ ನಿಂತ ಸೆಲೆಬ್ರೆಟಿಗಳು ಅದರಲ್ಲೂ ವಿಶೇಷವಾಗಿ ಧನ್ವೀರ್, ರಚಿತಾ ರಾಮ್ ಹಾಗೂ ರಕ್ಷಿತಾ ಅವರಿಗೆ ಸ್ಪೆಷಲ್ ಧನ್ಯವಾದ ಎಂದು ಹೇಳಿದ್ದಾರೆ.
ಇನ್ನು ನಾನು ಪ್ರೇಮ್ ಖಂಡಿತ ಸಿನಿಮಾ ಮಾಡುತ್ತೇವೆ. ಸೂರಪ್ಪ ಬಾಬು ವಿಚಾರವೂ ಅದೇನು ಕೇಳಿದ್ದೀರಿ ಸತ್ಯ. ಯಾವ ಊಹಾಪೋಹಗಳಿಗೂ ನನ್ನ ಅಭಿಮಾನಿಗಳು ಕಿವಿಗೆ ಹಾಕಿಕೊಳ್ಳಬೇಡಿ ಎಂದು ಹೇಳಿದ್ದಾರೆ. ನನ್ನ ಪ್ರೀತಿಯ ಅಭಿಮಾನಿಗಳಿಗೆ ನನ್ನ ಪ್ರೀತಿಯ ಮನವಿ ಏನೆಂದರೆ, ಈ ವರ್ಷ ನನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಕ್ಷಮೆ ಇರಲಿ ಇಂತಿ ನಿಮ್ಮ ದಾಸ ದರ್ಶನ್ ಎಂದು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಈ ಪೋಸ್ಟರ್ಗೆ ಇದುವರೆಗೂ 2,55,075 ಮೆಚ್ಚುಗೆಗಳು ಬಂದಿವೆ.