ಹಾಸನ: ಮಲೆನಾಡು ತಾಂತ್ರಿಕ ಮಹಾವಿದ್ಯಾಲಯ ಮತ್ತು ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿಯ ಆಶ್ರಯದಲ್ಲಿ ದಿವ್ಯಚೈತನ್ಯ ಶ್ರೀ ದತ್ತಾತ್ರೇಯ ಸನ್ನಿಧಿಯಲ್ಲಿ ದತ್ತಜಯಂತಿ ಮಹೋತ್ಸವವನ್ನು ಡಿಸೆಂಬರ್ 04, 2025 (ಗುರುವಾರ) ರಂದು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ವಿಶ್ವಾವಸು ಸಂವತ್ಸರದ ಮಾರ್ಗಶೀರ್ಷ ಪೌರ್ಣಿಮೆಯ ಪವಿತ್ರ ಸಂದರ್ಭದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ಮತ್ತು ಭಕ್ತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಈ ಬಾರಿ ಮೊದಲ ಬಾರಿಗೆ ‘ಚೈತನ್ಯಬಳಗ’ದ ವತಿಯಿಂದ
ಅರುಣಪ್ರಶ್ನ ಪಾರಾಯಣವನ್ನು ಬೆಳಗ್ಗೆ 7.30ರಿಂದ ಪ್ರಾರಂಭಿಸಲಾಗುತ್ತದೆ.

ಮುಖ್ಯ ಕಾರ್ಯಕ್ರಮಗಳು
- ಬೆಳಗ್ಗೆ 9.00: ಶ್ರೀ ದತ್ತಾತ್ರೇಯ ಮೂಲಮಂತ್ರ ಹೋಮ
- ಗುರುಬಂಧುಗಳಿಂದ ಪಾದುಕಾಪೂಜೆ
- ಸಾಮೂಹಿಕ ವಿಷ್ಣುಸಹಸ್ರನಾಮ ಪಾರಾಯಣ
- ಏಕನಾಮಪಾರಾಯಣ ಪೂರ್ವಕ ‘ದತ್ತಾತ್ರೇಯ ಅಷ್ಟೋತ್ತರ ಶತ ನಾಮಾವಳಿ’ ಅರ್ಪಣೆ
- ಪ್ರಾಕಾರೋತ್ಸವ
ಗುರುಚರಿತ್ರೆ ಸಪ್ತಾಹ ಪಾರಾಯಣ
ದತ್ತಜಯಂತಿಯ ಅಂಗವಾಗಿ 27.11.2025 ರಿಂದ 03.12.2025ರವರೆಗೆ ಏಳು ದಿನಗಳ
ಗುರುಚರಿತ್ರೆ ಸಪ್ತಾಹ ಪಾರಾಯಣವನ್ನು ಆಯೋಜಿಸಲಾಗಿದೆ.
- ದಿಂಬು 27ರಂದು ರಾತ್ರಿ 8.00 ಗಂಟೆಗೆ ಸಾಮೂಹಿಕ ಸಂಕಲ್ಪದೊಂದಿಗೆ ಆರಂಭ
- 03 ಡಿಸೆಂಬರ್ ಬುಧವಾರ ಸಮಾರೋಪ
- ಹೊಸದಾಗಿ ಪಾರಾಯಣ ಮಾಡ ಬಯಸುವ ಭಕ್ತರಿಗೆ ‘ಗುರುಚರಿತ್ರೆ’ ಪುಸ್ತಕವನ್ನು ಸ್ಥಳದಲ್ಲೇ ಒದಗಿಸಲಾಗುವುದು
- ಪುಸ್ತಕವಿರುವವರೂ ಸಹ ಸಪ್ತಾಹದಲ್ಲಿ ಪಾಲ್ಗೊಳ್ಳಬಹುದು
ನೊಂದಣಿ ಮತ್ತು ಅನ್ನಸಂತರ್ಪಣೆ
ಯಾವುದೇ ಭಕ್ತರೂ ದಿವ್ಯಚೈತನ್ಯ ಕೇಂದ್ರದಲ್ಲಿ ನವೆಂಬರ್ 24ರೊಳಗೆ ನೊಂದಾಯಿಸಿಕೊಳ್ಳಬಹುದು.
ದತ್ತಜಯಂತಿಯ ದಿನದ ಅನ್ನಸಂತರ್ಪಣೆ ಸೇವೆಯಲ್ಲಿ ತನು-ಮನ-ಧನಗಳ ಯಥಾಶಕ್ತಿ ಸಹಾಯದೊಂದಿಗೆ
ಭಾಗವಹಿಸಲು ಅವಕಾಶವಿದೆ.
ಸಂಗೀತ ಕಾರ್ಯಕ್ರಮ
ಸಂಜೆ 6.30ಕ್ಕೆ
ವಿದ್ವಾನ್ ರುದ್ರೇಶ್ ಮತ್ತು ತಂಡದವರಿಂದ ಸ್ಯಾಕ್ಸೋಫೋನ್ ವಾದನ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಆಸಕ್ತ ಎಲ್ಲಾ ಸದ್ಭಕ್ತರಿಗೆ ಆತ್ಮೀಯ ಸ್ವಾಗತ ಎಂದು ಆಯೋಜಕರು ತಿಳಿಸಿದ್ದಾರೆ.

