ಬೆಂಗಳೂರು, ಜುಲೈ 18: ಅನುಕಂಪದ ಆಧಾರದ ಮೇಲೆ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದವರು ಅರ್ಜಿಯನ್ನು ಸಲ್ಲಿಸಿ ಮೂರು ತಿಂಗಳೊಳಗೆ ಉತ್ತರ ನೀಡದಿದ್ದರೆ, ಸಂಬಂಧಿಸಿದ ಸಕ್ಷಮ ಪ್ರಾಧಿಕಾರವು ಬೇಜವಾಬ್ದಾರಿತನಕ್ಕೆ ಹೊಣೆವಹಿಸಿ ಅವರಿಗೆ ಪರಿಹಾರದ ರೂಪದಲ್ಲಿ ವೇತನ ಪಾವತಿಸಬೇಕಾಗಿದೆ ಎಂಬ ಮಹತ್ವದ ತೀರ್ಪು ನೀಡಿದೆ ಕರ್ನಾಟಕ ಹೈಕೋರ್ಟ್.
ಈ ತೀರ್ಪು “ಹೃತಿಕ್ ಎಂ Vs ಸಾರ್ವಜನಿಕ ಶಿಕ್ಷಣ ಉಪ ನಿರ್ದೇಶಕರು, ಮೈಸೂರು” ಪ್ರಕರಣದ ಭಾಗವಾಗಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ನ್ಯಾಯಪೀಠದಿಂದ ಪ್ರಕಟವಾಗಿದೆ.
ಇದನ್ನು ಓದಿ: ಬೆಂಗಳೂರು: ರಾಜ್ಯದ ಅಂಗನವಾಡಿ ಮಕ್ಕಳಿಗೂ ‘ಅಪಾರ್ ಐಡಿ’: ದೇಶದಲ್ಲಿ ಮೊದಲ ಬಾರಿಗೆ ಜಾರಿಗೆ ಬರುವ ಮಹತ್ವದ ಹೆಜ್ಜೆ
ನ್ಯಾಯಾಲಯವು ಸರಕಾರದ ಇಲಾಖೆಗಳಲ್ಲಿ ಅನುಕಂಪದ ಉದ್ಯೋಗ ಅರ್ಜಿಗಳನ್ನು ವರ್ಷಗಳಿಂದ ಬಾಕಿ ಇಡುವ ಅನಾಗರಿಕ ಪ್ರವೃತ್ತಿಗೆ ಕಡಿವಾಣ ಹಾಕಿದೆ. ಕರ್ನಾಟಕ ನಾಗರಿಕ ಸೇವೆಗಳ (ಅನುಕಂಪದ ಆಧಾರದ ಉದ್ಯೋಗ) ನಿಯಮಗಳು, 1996 ರ ಹಿತಾರ್ಥವೇ ಈ ವಿಳಂಬದಿಂದ ಹಾಳಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದೆ.
ಪ್ರಕರಣದ ಹಿನ್ನೆಲೆ:
2018ರಲ್ಲಿ ಮೃತರಾದ ಮೈಸೂರಿನ ಶಾಲೆಯ ಮುಖ್ಯೋಪಾಧ್ಯಾಯ ಕೆ. ನಿಂಗರಾಜು ಅವರ ಪುತ್ರ ಹೃತಿಕ್ ಎಂ ಅವರು ಅರ್ಜಿ ಸಲ್ಲಿಸಿದ್ದರೂ, 2017ರ ತಿದ್ದುಪಡಿ ನಿಯಮಗಳನ್ನು ಉಲ್ಲೇಖಿಸಿ ಉದ್ಯೋಗ ನಿರಾಕರಿಸಲಾಗಿತ್ತು. ಹೀಗಾಗಿ ಮತ್ತೆ ಅರ್ಜಿ ಸಲ್ಲಿಸಿ, ನ್ಯಾಯಾಲಯದ ಮೆಟ್ಟಿಲೇರಿದ ಅವರು ಇದೀಗ ಹಕ್ಕು ವಿಜೃಂಭಣೆಯಿಂದ ಜಯಗಳಿಸಿದ್ದಾರೆ.
