ನನ್ನ ಸ್ನೇಹಿತನಿಗೆ ಕಾದಂಬರಿ ಓದುವ ಹುಚ್ಚು. ಅದರಲ್ಲೂ ವೈದ್ಯಕೀಯ ಆಧಾರಿತ ಥ್ರಿಲ್ಲರ್ ಓದುವುದೆಂದರೆ ಬಲು ಪ್ರೀತಿ. ಇವನು ವೈದ್ಯನಾಗಬೇಕೆಂಬ ಕನಸು ಹೊತ್ತಿದ್ದ. ವೈದ್ಯನಾಗಲು ಸಾಧ್ಯವಾಗಲಿಲ್ಲ. ಅವನಿಗೆ ವೈದ್ಯಕೀಯ ಪದಗಳು ಅರ್ಥವಾಗಲಿಲ್ಲ ಎಂದಾಗ ನನ್ನನ್ನು ಕೇಳಿ ತಿಳಿದುಕೊಳ್ಳುತ್ತಿದ್ದ. ಒಮ್ಮೆ ಕಾದಂಬರಿಯಲ್ಲಿ ಕಂಡ ಎರಡು ಪದಗಳು ಇವನಿಗೆ ತಿಳಿಯಲಾಗಲಿಲ್ಲ. ಆ ಎರಡು ಪದಗಳು ‘ಡಿಜಾವು‘ ಹಾಗು ‘ಜಮೈಸಾವು’. ಇವರೆಡು ನ್ಯೂರಾಲಜಿಯಲ್ಲಿ (neurology) ಬರುವಂತಹ ಪದಗಳು. ಅಪಸ್ಮಾರದಲ್ಲಿ (fits) ಕಾಣಿಸಿಕೊಳ್ಳುವ ನರ ರೋಗಗಳ ರೂಪಾಂತರಗಳು.
ತಿಳಿದೇ ಇರುವ ಸ್ಥಳದಲ್ಲಿ ತಿಳಿದ್ದಿದ್ದೇನೆ ಎನ್ನುವ ಭಾವನೆ ಮತ್ತು ತಿಳಿದಿದ್ದ ಜಾಗದಲ್ಲಿ ತನಗೆ ಅರಿವಿಲ್ಲ ಎನ್ನೊ ಭಾವನೆ.
ಈ ಅಸಹಜ ಭಾವನೆಗಳು ಕೆಲವು ಕ್ಷಣ ಮಾತ್ರ ಕಂಡುಬರುವಂತಾದ್ದು. ಅನುಭೋಗಿಸುವರಿಗೆ ತನ್ನಲ್ಲಿ ಏನೋ ಆಗುತ್ತಿದೆನ್ನುವ ಆತಂಕ, ಭಯ, ಜಿಜ್ಞಾಸೆ ಮತ್ತು ಮಂಕು. ಈ ಅಪಸ್ಮಾರದಲ್ಲಿ ಜ್ಞಾನ ಹೋಗುವುದಿಲ್ಲ. ಈ ಕಾಯಿಲೆಯನ್ನು ‘ಪಾರ್ಷಿಯಲ್ ಎಪಿಲೆಪ್ಟಿಕ್ ಕಾಂಪ್ಲೆಕ್ಸ್’ ಎಂದು ಸಹ ಕರೆಯುವರು.
ವಿವರಣೆ ನೀಡಿದ ನನಗೆ ಕೆಲವು ದಿನ ನಿದ್ದೆ ಬರಲಿಲ್ಲ. ಇಂತಾದ್ದೆ ಸಾಮಾಜಿಕ ಸಮಸ್ಯೆ ನಮ್ಮ ನಡುವೆಯೇ ಆಗುತ್ತಿರುವುದನ್ನು ನೆನೆದು ನಿದ್ದೆ ಬರಲಿಲ್ಲ. ಈ ವಿಷಯವನ್ನು ತಿಳಿಯುವ ಮುನ್ನ ಹೆಣ್ಣುಮಗುವಿನ ಸಾಮಾಜಿಕ ವ್ಯವಸ್ಥೆಯನ್ನು ತಿಳಿಸುವ ಪ್ರಯತ್ನ ಮಾಡುವೆ. ನನ್ನ ಮನೋವೈದ್ಯ ವೃತ್ತಿಯಲ್ಲಿ ಅತಿ ಹೆಚ್ಚು ಕಾಯಿಲೆಗಳನ್ನು ನೋಡಿದ್ದು “ಖಿನ್ನತೆ”. ಇವರಲ್ಲಿ ಬಹುವಾಗಿ ಸಾಮಾಜಿಕ ಸಮಸ್ಯೆಯಿಂದ ಆದ ಖಿನ್ನತೆ. ಕೆಲವು ಮಾತ್ರ ನಿಜವಾದ ಮಾನಸಿಕ ಖಿನ್ನತೆ.
ನಮ್ಮ ಸಮಾಜದಲ್ಲಿ ಹೆಣ್ಣುಮಗುವಿಗೆ ವಿಶಿಷ್ಟ ಸ್ಥಾನವನ್ನು ನೀಡಿದ್ದೇವೆ. ನಮ್ಮ ಹಿಂದು ಸಂಸ್ಕೃತಿಯಲ್ಲಿ ಹೆಣ್ಣನ್ನು ಶಕ್ತಿ ಧಾಯಿನಿ, ಬಹೂ ರೂಪಿಣಿ ಹಾಗು ದೇವಿ ಸ್ವರೂಪಿಣಿ ಎಂದೆಲ್ಲಾ ಕರೆಯುತ್ತೇವೆ. ಆದರೆ ನಮ್ಮ ದೇಶದಲ್ಲದೆ ಪ್ರಪಂಚಾದ್ಯಂತ ಮಹಿಳೆಯನ್ನು ಭೋಗದ ವಸ್ತು ಎಂದೇ ನೋಡಲಾಗಿದೆ. ಹೆಣ್ಣಿನ ಸಬಲೀಕರಣ ಹಾಗು ಶಶಕ್ತಿಕರಣ ಮಾಡಿದರೂ ಆಕೆಯ ಮೇಲೆ ದೌರ್ಜನ್ಯ ನಿಂತಿಲ್ಲ. ಧರ್ಮಾಂಧತೆ, ಸ್ತ್ರೀ ವೈರತ್ವ ಮತ್ತು ಪಿತೃಪ್ರಭುತ್ವ ಇದಕ್ಕೆ ಕಾರಣಗಳು ಇರಬಹುದು ಎಂದು ಎನ್ನಲಾಗಿದೆ. ನಮ್ಮಲ್ಲಿ ನೋಡುವ ದೃಷ್ಟಿಕೋನ ಸಮಾನಾಂತರವಾಗಿ ಇಲ್ಲ. ಇಂದು ಹೆಣ್ಣು ಭ್ರೂಣ ಹತ್ಯೆ ಮಿತಿಮೀರಿದೆ ಮತ್ತು ಯಾವುದೇ ಕಾನೂನಿನ ಕ್ರಮ ಜರುಗಿಸಿದರು ನಿಯಂತ್ರಣ ಮಾಡುವುದರಲ್ಲಿ ವಿಫಲವಾಗಿದೆ.
ಮುಂದುವರಿದಂತೆ ಇಂತಾ ಸಮಾಜ ಪಿಡುಗಿನ ಕಾರಣಗಳು ನೂರಾರು. ಎಲ್ಲವನ್ನು ವಿವರಿಸಲು ಅಸಾಧ್ಯ. ಈ ಅಂಕಣದ ಶಿರೋನಾಮ ಅಡಿಯಲ್ಲಿ ನೋಡವುದಾದರೆ ನಮ್ಮ ಮತ್ತು ನಿಮ್ಮ ಹೆಣ್ಣು ಮಕ್ಕಳ ಸಾಮಾಜಿಕ ಮತ್ತು ಕೌಟುಂಬಿಕ ತೊಡಕುಗಳನ್ನು ವಿವರಿಸುವ ಪ್ರಯತ್ನ ನನ್ನದು.
‘ಡಿಜಾವು’ ಎಂದರೆ ಪರಿಚಿತ ಸ್ಥಳದಲ್ಲಿ ಅಪರಿಚಿತರಂತೆ ನಡವಳಿಕೆ. ಓಮ್ಮೆ ಕಾಲ್ಪನಿಕ ಆಯಾಮದಲ್ಲಿ ನೋಡವುದಾದರೆ ಮನೆ ಎಂಬುದು ಚಿರ ಪರಿಚಿತ. ಮದುವೆ ಸಮಯದಲ್ಲಿ ಇರುವ ಯಾವುದೇ ಹೆಣ್ಣು ಮಗುವಿಗೆ ತನ್ನ ಮನೆ ಮತ್ತು ತಾನು ಕಾಲಿಡುವ ಮನೆ ಬೇರೆ ಅಲ್ಲ. ಆದರೆ ಆಕೆಯ ಮನಸ್ಥಿತಿ? ಅಮ್ಮನ ಮನೆಯಲ್ಲಿದ್ದ ಮನಸ್ಸು ಇನ್ನೊಬ್ಬರ ಮನೆಯಲ್ಲಿ ಇರುವುದಿಲ್ಲ. ಕಾರಣ ಕೌಟುಂಬಿಕ ಮತ್ತು ಮಾನಸಿಕ ಸಂಬಂಧಗಳು. ಅವುಗಳನ್ನು ಬಿಡಿಸುತ್ತಾ ಹೋದರೆ ಕೆಲವಾರು ಸಮಸ್ಯೆಗಳು ಉದ್ಭವಿಸಬಹುದು. ಹೂಸ ಮನೆಯ ಹೊಂದಾಣಿಕೆ, ದೊಡ್ಡವರ ನಿರೀಕ್ಷೆ, ಚಿಕ್ಕವರ ಜೊತೆಗಿನ ಸಂಬಂಧ, ಆ ಮನೆಯ ಪದ್ದತಿಗಳು, ಪೂಜಾ ವಿಧಾನಗಳು, ಸಾಂಸ್ಕೃತಿಕ ಅಭ್ಯಾಸಗಳು, ತಿಂಡಿ ತಿನಿಸುಗಳ ವೆತ್ಯಾಸ, ಹೀಗೆ ಎಲ್ಲದರಲ್ಲೂ ಸರಿಹೊಂದಿ ಸೈ ಎನಿಸಿಕೊಳ್ಳಬೇಕು.
ಒಮ್ಮೆ ಯೋಚಿಸೋಣ, ನಮ್ಮಲ್ಲಿ ಎಲ್ಲವನ್ನು ಹೇಳಿಕೊಡುವ ನೂರಾರು ವಿಶ್ವವಿದ್ಯಾಲಯಗಳು ಇವೆ. ಜೀವನವನ್ನು ಹೇಳಿಕೊಡುವ ಒಂದು ವಿಶ್ವವಿದ್ಯಾಲಯ ಇದೆಯಾ? ಇಲ್ಲ ಅಲ್ಲವೆ. ಈ ಕಾರಣದಿಂದ ಹೆಣ್ಣುಮಕ್ಕಳಿಗೆ ಗುರುಗಳು ತಂದೆ ತಾಯಿ. ಇಂದಿನ ಪರಿಸ್ಥಿತಿಯು ಹಾಗಿಲ್ಲ. ಒಂದು ಅಥವ ಎರಡು ಮಕ್ಕಳು. ಮುದ್ದಾಗಿ ಬೆಳೆಸುವ ರೀತಿ. ‘ನಾವು ಕಷ್ಟ ಪಟ್ಟೆದ್ದೇವೆ, ಮತ್ತೆ ಮಕ್ಕಳಿಗೆ ಏಕೆ ಕಷ್ಟ’ ಎಂಬ ದೋರಣೆ. ಕಷ್ಟದಲ್ಲಿ ಬೆಳೆಸಿದರೆ ತಾನೆ ಕಷ್ಟ ಹಂಚಿಕೊಳ್ಳುವುದು. ಎಲ್ಲವೂ ಸುಲಭವಾಗಿ ಕೆಲಸಗಳು ಆಗಬೇಕು. ಶೋಕಿ, ತುಂಡು ಉಡುಗೆ ಮತ್ತು ಅಲಂಕಾರ ಹೆಚ್ಚಾಗಿವೆ. ಅಡಿಗೆ ಮನೆಗಳು ಶೋ ಪೀಸ್ ಅಗಿವೆ. ಹಣವೇ ಪ್ರಾಧಾನ್ಯ. ಇದು ಪಟ್ಟಣದಲ್ಲಿ ಕಂಡರೆ ಹಳ್ಳಿಗಳಲ್ಲಿ ತದ್ವಿರುದ್ದ. ಇಡೀ ಕುಟುಂಬವನ್ನೆ ಸಂಬಾಳಿಸಬೇಕು. ಅಡುಗೆ, ಮನೆ, ಕೊಟ್ಟಿಗೆ, ದನ, ಅತ್ತೆ ಮಾವ ಮತ್ತು ಮಕ್ಕಳನ್ನು ನೋಡಿಕೊಳ್ಳ ಬೇಕು. ನನ್ನ ಪ್ರಕಾರ ಪ್ರಪಂಚದಲ್ಲಿ ಅದ್ಭುತ ಮತ್ತು ವಿಸ್ಮಯ ಸೃಷ್ಟಿ ಅಂದ್ರೆ ಅದು ಸ್ತ್ರೀ ಮಾತ್ರ.
ಒಂದೆಡೆ ಹೀಗಾದರೆ ಇಂದಿನ ಸ್ಪರ್ಧಾತ್ಮಕತೆ, ಸಬಲೀಕರಣ, ಸಮಾನತೆ, ಶಿಕ್ಷಣ, ನೇಮಕಾತಿ, ತಾಂತ್ರಿಕತೆ, ದುರಹಂಕಾರ ವರ್ತೆನಗಳಿಂದ ಕುಟುಂಬ ಸಮಸ್ಯೆಗಳು ಜಟಿಲವಾಗಿವೆ. ಹೆಣ್ಣು ಗಂಡು ನೈಸರ್ಗಿಕವಾಗಿ ಸಮಾನಾಂತರ ಕಾಯ್ದುಕೊಳ್ಳುವುದಿಲ್ಲ. ಲಿಂಗಾನುಸಾರವಾಗಿ ಪಾತ್ರಗಳನ್ನು ಹಂಚಿಕೊಳ್ಳಬೇಕು ಮತ್ತು ಸಮಯಕ್ಕೆ ತಕ್ಕಂತೆ ಇಬ್ಬರೂ ತಮ್ಮ ತಮ್ಮ ಪಾತ್ರಗಳನ್ನು ಅಹಂಕಾರವಿಲ್ಲದೆ ನಿರ್ವಹಿಸಿದರೆ ಅನೇಕ ವಿಚ್ಛೇದನೆಗಳನ್ನು ತಡೆಗಟ್ಟಬಹುದು.
ಜೀವನದ ವಿಕಸತೆ ಇಂದಿನದಲ್ಲ. ಆದಿ ಕಾಲದಿಂದಲೂ ಹುಟ್ಟಿ, ಎದ್ದು ಬಿದ್ದು ನೆಡೆದು ಬಂದ ದಾರಿ. ವಿರೋಧಾಭಾಸವಾಗಿ ನೋಡಿದರೆ ಇಲ್ಲಿಯವರೆಗೂ ಪೂರ್ವಜರಿಗೆ ಜೀವನ ಇಷ್ಟವಾಗದಿದ್ದರೆ ನಾವು ಇರುತ್ತಿರಲಿಲ್ಲ. ಕೆಲವೇ ಕೆಲವರು ಕಾರಣಾಂತರಗಳಿಂದ ಇಷ್ಟವಿಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುವರು.
ಜೀವನವು ಎಲ್ಲರಿಗೂ ಒಂದು ಕತೆ ತರಹದ ಪುಸ್ತಕವಾಗಬೇಕು. ಸುಲಭವಾಗಿ ಓದುವಂತೆ ಇರಬೇಕು. ಇತರರಿಗೆ ಮಾದರಿ ಆಗಬೇಕು. ಕತ್ತಲಲ್ಲಿ ಬೆಳಕು ಹುಡುಕುವಂತೆ ಇರಬೇಕು. ಪ್ರಪಂಚ ಹೇಗೆ ಇರುತ್ತೆಂದರೆ ಎಲ್ಲಿ ಸುಂದರತೆ ಇರುತ್ತೋ ಅಲ್ಲಿ ಕುರೂಪಿತನವೂ ಇರುತ್ತೆ. ಸುಂದರತೆಯನ್ನು ಅಹ್ವಾದಿಸಬೇಕು ಮತ್ತು ಕುರೂಪಿತನವನ್ನು ಧ್ಯಾನಿಸಬೇಕು. ಇದೇ ಜೀವನ.
ಇದನ್ನು ಇಂಗ್ಲಿಷ್ನಲ್ಲಿ ‘ಮಿರರ್ ಥೆರಪಿ’ ಎನ್ನುವರು…
‘Take time, sit in front of the mirror, do introspection, see your image, cut that image in to pieces, throw away bad pieces and reintegrate the good ones. Again look at yourself in the mirror and know your image is refreshed, you feel free and you are easy going, your image starts glowing. Enjoy the happiness inside and feel the reintegrated structure outside. In this way throw away the repulsive energy and you have an easy going pleasant energy…
ಮುಂದುವರಿಯುವುದು…
-ಡಾ॥ ಎ.ಎಂ.ನಾಗೇಶ್
ಖ್ಯಾತ ಮನೋವೈದ್ಯ

