ಬಡ್ಡಿ ಆಸೆಯಿಂದ ಬ್ಯಾಂಕ್‌ನಲ್ಲಿ ಠೇವಣಿ ಇಡುವುದು ‘ವಾಣಿಜ್ಯ ವ್ಯವಹಾರ’ವಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಬ್ಯಾಂಕ್ ಠೇವಣಿಗೆ ಬಡ್ಡಿ ಸಿಗುತ್ತದೆ ಎಂಬ ಕಾರಣಕ್ಕೆ ಮಾತ್ರ ಅದನ್ನು ‘ವಾಣಿಜ್ಯ ವ್ಯವಹಾರ’ ಎಂದು ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ‘Dominant Purpose Test’ ಅನ್ವಯಿಸಬೇಕು ಎಂದು ಹೇಳಿದ ನ್ಯಾಯಾಲಯ, 9 ಕೋಟಿ ರೂ. ಎಫ್‌ಡಿಆರ್ ವಿವಾದದಲ್ಲಿ NCDRC ಆದೇಶದ ಭಾಗಶಃ ತರ್ಕವನ್ನು ತಳ್ಳಿಹಾಕಿದರೂ ಅಪೀಲನ್ನು ವಜಾಗೊಳಿಸಿದೆ.