ಕೊರಟಗೆರೆ : ತಾಲೂಕಿನ ಅಕ್ಕಿರಾಂಪುರದ ರಾಗಿ ಖರೀದಿ ಕೇಂದ್ರಕ್ಕೆ ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್ ವರು ದಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ ರೈತರಿಂದ ಮಾಹಿತಿ ಪಡೆದರು.
ರಾಗಿ ಖರೀದಿ ಕೇಂದ್ರದಲ್ಲಿ ರಾಗಿ ತೂಕದಲ್ಲಿ ವ್ಯತ್ಯಾಸ, ರೈತರಿಗೆ ಮೂಲ ಸೌಕರ್ಯ, ಸೇರಿದಂತೆ ಇನ್ನಿತರ ಸಮಸ್ಯೆ ಬಗ್ಗೆ ದೂರು ಬಂದ ಹಿನ್ನಲೇ ಅಕ್ಕಿರಾಂಪುರದಲ್ಲಿ ಇತ್ತೀಚಿಗೆ ತೆರೆದಿರುವ ರಾಗಿ ಖರೀದಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಶುಭಕಲ್ಯಾಣ್ ಖುದ್ದು ಬೇಟಿ ನೀಡಿ ರೈತರಿಂದ ಮಾಹಿತಿ ಪಡೆದರು.

ರಾಗಿ ಖರೀದಿ ಕೇಂದ್ರದಲ್ಲಿ ಇತ್ತೀಚಿಗೆ ಕೇಳಿ ಬಂದ ದೂರುಗಳ ಅನ್ವಯ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಯಾರಿಗೂ ಮಾಹಿತಿ ನೀಡದೆ ದಿಡೀರ್ ರಾಗಿ ಖರೀದಿ ಕೇಂದ್ರಕ್ಕೆ ನೇರವಾಗಿ ಭೇಟಿ ನೀಡಿ ರೈತರಿಂದ ಒಂದಷ್ಟು ಮಾಹಿತಿ ಕಲೆ ಹಾಕಿದರು,
ರೈತರಿಂದ ಖರೀದಿ ಮಾಡಿಕೊಳ್ಳುವ ರಾಗಿ ಮೂಟೆಗಳ ಖರೀದಿ ಸಂದರ್ಭದಲ್ಲಿ ತೂಕದಲ್ಲಿ ಏನಾದರೂ ವ್ಯತ್ಯಾಸವಿದೆಯೇ ಎಂದು ಸೂಕ್ಷ್ಮವಾಗಿ ಪರಿಶೀಲನೆ ನಡೆಸಿದರು, ರೈತರಿಂದ ಒಳ ಬರುವ ರಾಜ್ಯಗಳ ತೂಕ ವ್ಯತ್ಯಾಸ ಇದೆಯೇ ಅಧಿಕಾರಿ ವರ್ಗ ರೈತರ ಗಳಿಗೆ ಮೋಸವಾಗಿ ಎಸಗುತ್ತಿದ್ದಾರೆಯೇ ಎಂದು ರೈತರಿಂದಲೇ ಮಾಹಿತಿ ಕಲೆಹಾಕಿ ರೈತರು ತಾಲೂಕಿನಲ್ಲಿ ಖರೀದಿ ಕೇಂದ್ರ ತೆರೆದಿರುವುದರಿಂದ ಬಹಳಷ್ಟು ರೈತರಿಗೆ ಅನುಕೂಲವಾಗಿದೆ, ಇಲ್ಲಿವರೆಗೂ ಖರೀದಿ ಕೇಂದ್ರದಲ್ಲಿ ಯಾವುದೇ ಲೋಪದೋಷಗಳು ಕಂಡು ಬಂದಿಲ್ಲ ಎಂದು ಒಂದಷ್ಟು ರೈತರುಗಳು ಜಿಲ್ಲಾಧಿಕಾರಿ ಶುಭಕಲ್ಯಾಣ್ ವರಿಗೆ ರಾಗಿ ಖರೀದಿ ಕೇಂದ್ರ ಪ್ರಾರಂಭದಿಂದ ಬಹಳಷ್ಟು ರೈತರಿಗೆ ಅನುಕೂಲವಾಗಿದೆ ಎಂದು ರೈತರುಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಇದೆ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್ ಮಾತನಾಡಿ ಕೊರಟಗೆರೆ ತಾಲೂಕಿನ ರೈತರಿಗೆ ಅನುಕೂಲವಾಗಲಿ ಎಂದು ಕಳೆದ ವರ್ಷದಿಂದ ತಾಲೂಕಿನ ಅಕ್ಕಿರಾಂಪುರ ಎಪಿಎಂಸಿ ಅವರಣದಲ್ಲಿ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಅವರ ಆದೇಶದಂತೆ ರಾಗಿ ಖರೀದಿ ಕೇಂದ್ರವನ್ನ ತೆರೆಯಲಾಯಿತು. ದೂರದ ತಾಲೂಕಿನಗೆ ಹೋಗಿ ರೈತರು ತೊಂದರೆ ಅನುಭವಿಸುತ್ತಿದ್ದರು ಆದರೆ ಇದೆ ತಾಲೂಕಿನಲ್ಲಿ ರೈತರು ತಾವು ಬೆಳೆದಂತಹ ರಾಗಿಯನ್ನ ಇಲ್ಲಿಯೇ ಮಾರಾಟ ಮಾಡಿದರೆ ಖರ್ಚು ಹಾಗೂ ಸಮಯ ಉಳಿಯುತ್ತದೆ ಎಂದು ತಿಳಿಸಿದರು.

ಈಗಾಗಲೇ ರಾಜ್ಯ ಸರ್ಕಾರ ರೈತರಿಗೆ ೪೮೮೬ ರೂ ಗಳನ್ನ ನಿಗದಿ ಮಾಡಿದ್ದು, ಅದರಂತೆ ರೈತರಿಂದ ರಾಗಿ ಖರೀದಿ ಮಾಡಲಾಗುತ್ತಿದೆ. ರಾಗಿ ಖರೀದಿ ಕೇಂದ್ರದಲ್ಲಿ ರಾಗಿ ತೂಕದಲ್ಲಿ ವ್ಯತ್ಯಾಸ ಮಾಡುತ್ತಿದ್ದಾರೆ ಎಂದು ರೈತರಿಂದ ದೂರು ಬಂದ ಕಾರಣ ಸ್ಥಳಕ್ಕೆ ಭೇಟಿ ನೀಡಲಾಗಿದೆ. ರೈತರಿಗೆ ಯಾವುದೇ ರೀತಿ ಮೋಸ ಆಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಅದಷ್ಟು ಬೇಗ ನೋಂದಣಿ ಮಾಡದಂತಹ ರೈತರು ತಮ್ಮ ರಾಗಿಯನ್ನ ತಂದು ಮಾರಾಟ ಮಾಡಿಕೊಳ್ಳಿ ಎಂದರು.
ಇದೆ ವೇಳೆ ತಹಸೀಲ್ದಾರ್ ಮಂಜುನಾಥ್ ಮಾತನಾಡಿ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ ಪರಮೇಶ್ವರ್ ಅವರ ಆಶಯದಂತೆ ರಾಗಿ ಖರೀದಿ ಕೇಂದ್ರವನ್ನ ಪ್ರಾರಂಭಿಸಲಾಗಿದ್ದು, ಸ್ಥಳಿಯ ರೈತರಿಗೆ ಅನುಕೂಲಕರವಾಗಲಿ ಎಂಬುವ ದೃಷ್ಟಿಯಿಂದ ಸ್ಥಳೀಯವಾಗಿ ಖರೀದಿ ಕೇಂದ್ರಗಳನ್ನ ಪ್ರಾರಂಭಿಸಲಾಗಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು , ಅಧಿಕಾರಿ ವರ್ಗ ರೈತರಿಂದ ಆಹಾರ ಧಾನ್ಯಗಳ ಖರೀದಿ ಪ್ರಕ್ರಿಯೆ ಪಾರದರ್ಶಕವಾಗಿರಬೇಕು. ತೂಕದಲ್ಲಿ ವ್ಯತ್ಯಾಸವಾಗದಂತೆ ನೋಡಿಕೊಳ್ಳಬೇಕು, ದಲ್ಲಾಳಿಗಳ ಹಾವಳಿ ತಪ್ಪಿಸಬೇಕು , ಅನಗತ್ಯ ವಿಳಂಬ ಇನ್ನಿತರ ಸಮಸ್ಯೆ ಉಂಟಾಗದಂತೆ ನಿಗವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಕಸಬಾ ಆರ್ಐ ಬಸವರಾಜು, ಅಧಿಕಾರಿಗಳಾದ ಸಲ್ಮಾನ್, ಪವನ್, ನಾಗರಾಜು ಸೇರಿದಂತೆ ಇತರರು ಹಾಜರಿದ್ದರು.
– ಶ್ರೀನಿವಾಸ್ ಕೊರಟಗೆರೆ.
