ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾದಿಕಾರವು ನಗರ ಪಾಲಿಕೆಗಳ ವಾಲ್ಡ್ ಪುನರ್ ವಿಂಗಡಣೆ ಸಮರ್ಪಕವಾಗಿ ಪೂರ್ಣಗೊಳಿಸಿದೆ. ಇದರಿಂದ ನಗರ ಆಡಳಿತ ಸುಧಾರಣೆ ಮತ್ತು ಸ್ಥಳೀಯ ಅಭಿವೃದ್ಧಿಗೆ ನೆರವಾಗಲಿದೆ.
ನೂತನ ವಾರ್ಡುಗಳ ವಿವರ:
- ಬೆಂಗಳೂರು ಉತ್ತರ ನಗರ ಪಾಲಿಕೆ: 72 ವಾರ್ಡುಗಳು
- ಬೆಂಗಳೂರು ಪಶ್ಚಿಮ ನಗರ ಪಾಲಿಕೆ: 111 ವಾರ್ಡುಗಳು
- ಬೆಂಗಳೂರು ಪೂರ್ವ ನಗರ ಪಾಲಿಕೆ: 50 ವಾರ್ಡುಗಳು
- ಬೆಂಗಳೂರು ದಕ್ಷಿಣ ನಗರ ಪಾಲಿಕೆ: 72 ವಾರ್ಡುಗಳು
- ಬೆಂಗಳೂರು ಕೇಂದ್ರ ನಗರ ಪಾಲಿಕೆ: 63 ವಾರ್ಡುಗಳು
ಪ್ರಾದಿಕಾರವು ಈ ವಾರ್ಡುಗಳ ಪುನರ್ವಿಂಗಡಣೆಯ ಮೂಲಕ ನಗರ ಆಡಳಿತ ವ್ಯವಸ್ಥೆಯನ್ನು ಹೆಚ್ಚು ಸಮರ್ಥವಾಗಿಸಲು ಮತ್ತು ಸ್ಥಳೀಯ ಸಮಸ್ಯೆಗಳಿಗೆ ತ್ವರಿತ ಪರಿಹಾರ ನೀಡಲು ಉದ್ದೇಶಿಸಿದೆ. ಹೊಸ ವಾರ್ಡು ವಿನ್ಯಾಸವು ಜನಸಂದರ್ಶನ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯ ಕಾರ್ಯಗಳಲ್ಲಿ ಸುಗಮ ಅನುಷ್ಠಾನಕ್ಕೆ ಸಹಾಯಮಾಡಲಿದೆ.
ಇದನ್ನು ಓದಿ: ಭಾರತದ ಖಗೋಳ ವೀಕ್ಷಣಾ ನೌಕೆ 10 ವರ್ಷಗಳ ಸಾಧನೆ ಪೂರೈಸಿತು: ನಕ್ಷತ್ರ, ಗ್ಯಾಲಕ್ಸಿ, ಕಪ್ಪು ರಂಧ್ರ ಪತ್ತೆ
ಮುಂದಿನ ಹಂತ: ಈ ವಾರ್ಡುಗಳನ್ನು ಅನಾವರಣ ಮಾಡಿದ ಬಳಿಕ, ಸ್ಥಳೀಯ ಚುನಾವಣಾ ಪ್ರಕ್ರಿಯೆಗಳು ಮತ್ತು ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಹಂತಕ್ಕೆ ತರುವುದು ನಿರೀಕ್ಷಿಸಲಾಗಿದೆ.

[…] […]