ಆಪರೇಷನ್ ಸಿಂಧೂರಲ್ಲಿ ಹತರಾದ ಉಗ್ರರ ವಿವರ ಬಹಿರಂಗ: ಲಷ್ಕರ್ ಹಾಗೂ ಜೈಶ್ ಮುಖಂಡರು ಕೊನೆಗೊಳಿಸಿದ ಭಾರತೀಯ ಸೇನೆ

ನವದೆಹಲಿ, ಮೇ 10: ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆ ಮೇ 7ರ ತಡರಾತ್ರಿ “ಆಪರೇಷನ್ ಸಿಂದೂರ್” ಹೆಸರಿನಲ್ಲಿ ಪಾಕಿಸ್ತಾನ ಆಧಾರಿತ ಉಗ್ರರ ನೆಲೆಗಳ ಮೇಲೆ ಆಕ್ರಮಣಾತ್ಮಕ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಹಲವು ಪ್ರಮುಖ ಉಗ್ರ ಮುಖಂಡರು ಹತ್ಯೆಯಾದ ದೃಢವಲ್ಲದ ವರದಿಗಳು ಇದೀಗ ಪಾಕಿಸ್ತಾನದ ಮೂಲಗಳಿಂದ ದೃಢಪಡಿಸಲ್ಪಟ್ಟಿವೆ.