ದೇವನಹಳ್ಳಿ: ದೇವನಹಳ್ಳಿ ಸಂಚಾರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಕಾನ್ಸ್ಟೆಬಲ್ ವಿನಾಯಕ್ ಹಾಗೂ ಗೃಹರಕ್ಷಕ ಲಕ್ಷ್ಮೀಪತಿ ಅವರು ತಮ್ಮ ಪ್ರಾಮಾಣಿಕ ಹಾಗೂ ಜವಾಬ್ದಾರಿ ಭರಿತ ಸೇವೆಯಿಂದಾಗಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ದೊಡ್ಡಬಳ್ಳಾಪುರ ಸಿಗ್ನಲ್ ಬಳಿ ಸಿಕ್ಕಿದ್ದ ಅಮೂಲ್ಯ ಆಭರಣಗಳಿರುವ ಬ್ಯಾಗ ಏ.22 ರಂದು ಪತ್ತೆಯಾಗಿತ್ತು, ಅದನ್ನು ತಕ್ಷಣವೇ ದೇವನಹಳ್ಳಿ ಕಾನೂನು ಸುವ್ಯವಸ್ಥೆ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದು, ಬಳಿಕ ಪೊಲೀಸರು ತನಿಖೆ ನಡೆಸಿ ಆ ಆಭರಣಗಳ ನಿಜ ಮಾಲೀಕರನ್ನು ಪತ್ತೆಹಚ್ಚಿ ಏ.23 ರಂದು ಅವರನ್ನು ಕರೆಸಿ ಆಭರಣಗಳನ್ನು ತಲುಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಈ ಸಂದರ್ಭದಲ್ಲಿ ಸಾರ್ವಜನಿಕರು ಹಾಗೂ ಹಿರಿಯ ಅಧಿಕಾರಿಗಳು ಇಬ್ಬರ ಕಾರ್ಯಕ್ಷಮತೆ ಮತ್ತು ನಿಷ್ಠೆಯನ್ನು ಪ್ರಶಂಸಿಸಿದ್ದು ಇಂತಹ ಕಾರ್ಯಗಳು ಸಾರ್ವಜನಿಕರಲ್ಲಿ, ಪೊಲೀಸ್ ಇಲಾಖೆಯ ಬಗ್ಗೆ ವಿಶ್ವಾಸ ಹೆಚ್ಚಿಸುತ್ತಿವೆ ಎಂದರೆ ತಪ್ಪಗಲಾರದು.
