ದೇವನಹಳ್ಳಿ, ಮೇ 12 – ವಿದೇಶದಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿ ಭಾರತಕ್ಕೆ ಹಿಂದಿರುಗಿದ್ದ 28 ವರ್ಷದ ಯುವಕನೊಬ್ಬ ತಂದೆಗೆ ಸೇರಿದ ಸಿಂಗಲ್ ಬ್ಯಾರಲ್ ಗನ್ ಬಳಸಿ ಆತ್ಮಹ*ತ್ಯೆ ಮಾಡಿಕೊಂಡಿರುವ ದುರ್ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ಬೈಯೇಶ್ ಎಂಬುವರಾಗಿದ್ದಾರೆ. ಇಂದು ಮುಂಜಾನೆ ತಮ್ಮ ಫಾರ್ಮ್ ಹೌಸ್ನಲ್ಲಿ ಅವರು ತಲೆಗೆ ಗನ್ ತಾಕಿಸಿ ಫೈರಿಂಗ್ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಮೃತ ಬೈಯೇಶ್ ಇತ್ತೀಚೆಗಷ್ಟೇ ವಿದೇಶದಿಂದ ಮರಳಿದ್ದರು. ಘಟನೆ ಸಂಭವಿಸಿದ ವೇಳೆ ಕುಟುಂಬದ ಉಳಿದ ಸದಸ್ಯರು ತಿರುಪತಿಗೆ ತೆರಳಿದ್ದರು. ಮನೆಗೆ ಒಬ್ಬಂಟಿಯಾಗಿದ್ದ ಬೈಯೇಶ್, ಈ ಭೀಕರ ಕೃತ್ಯ ಎಸಗಿದ್ದಾರೆ.
ಇಂದು ಮುಂಜಾನೆ ಕುಟುಂಬಸ್ಥರು ಹಿಂದಿರುಗಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ತಿರುಮಲಶೆಟ್ಟಿಹಳ್ಳಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ.
