ಕೆ.ಆರ್.ಪೇಟೆ: ತಾಲೂಕಿನ ಬೂಕನಕೆರೆ ಹೋಬಳಿಯ ಹೊಸಕೋಟೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ದೇವರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹಿಂದಿನ ಅಧ್ಯಕ್ಷ ಸುಜೇಂದ್ರ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷರ ಸ್ಥಾನ ಬಯಸಿ ದೇವರಾಜು ಹೊರತು ಪಡಿಸಿ ಉಳಿದ ಯಾವ ನಿರ್ದೇಶಕರಿಂದ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ದೇವರಾಜು ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಶೋಭಾ ಘೋಷಣೆ ಮಾಡಿದರು.
ನೂತನ ಅಧ್ಯಕ್ಷರನ್ನ ಅಭಿನಂದಿಸಿ ಮಾತನಾಡಿದ ಮನ್ಮುಲ್ ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ ಎಂ.ಬಿ ಹರೀಶ್ ನನ್ನ ಹುಟ್ಟೂರು ಮಡುವಿನಕೋಡಿ ಗ್ರಾಮವಾದರೂ ನನ್ನ ರಾಜಕೀಯ ಜನ್ಮಸ್ಥಳ ಹೊಸಕೋಟೆ ಹಾಲು ಉತ್ಪಾದಕ ಸಹಕಾರ ಸಂಘ. ಈ ಸಂಘ ನನಗೆ ಎರಡು ಬಾರಿ ಮಂಡ್ಯ ಜಿಲ್ಲೆ ಹಾಲು ಒಕ್ಕೂಟದ ಅಧ್ಯಕ್ಷರಾಗಿ ಮೂರುಬಾರಿ ನಿರ್ದೇಶಕರಾಗಲು ಸಹಕಾರಿಯಾಗಿರುವ ಸಹಕಾರ ಸಂಘ. ಸಂಘ ಉದ್ಭವದಿಂದಲೂ ಹಿಂದಿನವರೆಗೂ ಚುನಾವಣೆಗಳು ಕಂಡಿಲ್ಲ ಗ್ರಾಮಸ್ಥರು ಸಹಕಾರಿ ಮನೋಭಾವನೆಯಿಂದ ಸಹಕರಿಸಿ ಪ್ರತಿಯೊಬ್ಬರಿಗೂ ಗೌರವ ನೀಡುತ್ತಾ ಬಂದಿದೆ ಅದರಂತೆ ನೂತನ ಅಧ್ಯಕ್ಷರಾಗಿ ದೇವರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ನನ್ನ ರಾಜಕೀಯ ಜೀವನಕ್ಕೆ ಮರುಜನ್ಮ ನೀಡುತ್ತಾ ಬಂದಿರುವ ಸಂಘಕ್ಕೆ.ನನ್ನ ಆಡಳಿತ ಅವಧಿಯಲ್ಲಿ ನೂತನ ಕಟ್ಟಡದ ಜೊತೆಗೆ ಶೀಘ್ರದಲ್ಲೇ ಬಿಎಂಸಿ ಘಟಕ ಪ್ರಾರಂಭಿಸಲು ಶ್ರಮಿಸುತ್ತೇನೆ. ನೂತನ ಅಧ್ಯಕ್ಷರು ಕೂಡ ಸಂಘದ ಸರ್ವ ನಿರ್ದೇಶಕರನ್ನು ಹಾಗೂ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘದ ಶ್ರೇಯೋಭಿವೃದ್ಧಿ ಶ್ರಮವಹಿಸಬೇಕು ಎಂದು ಸಲಹೆ ನೀಡಿದರು.

ನೂತನ ಅಧ್ಯಕ್ಷ ದೇವರಾಜು ಮಾತನಾಡಿ, ಹಾಲು ಉತ್ಪಾದಕರ ಸಹಕಾರ ಸಂಘದ ಸಮಗ್ರ ಅಭಿವದ್ಧಿಗೆ ಎಲ್ಲ ನಿರ್ದೇಶಕರ ವಿಶ್ವಾಸ ಪಡೆದು ನಿರಂತರವಾಗಿ ಶ್ರಮಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅವಿರೋಧ ಆಯ್ಕೆ ಪ್ರಕಟ ಆಗುತ್ತಿದಂತೆ ಗ್ರಾಮಸ್ಥರು ಸರ್ವ ಸದಸ್ಯರು, ಬೆಂಬಲಿಗರು, ಹಿರಿಯರು,ಹಾರ ತುರಾಯಿಗಳನ್ನು ಹಾಕಿ ಸಿಹಿ ಹಂಚಿ ಪಟಾಕಿ ಸಸಿಡಿಸುವ ಮೂಲಕ ಅವಿರೋಧವಾಗಿ ಆಯ್ಕೆಯಾದ ನೂತನ ಅಧ್ಯಕ್ಷರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಡೇರಿ ಉಪಾಧ್ಯಕ್ಷೆ ಶೀಲಾ,ನಿರ್ದೇಶಕರಾದ ಕೋಮಲ, ಶಂಕರೇಗೌಡ, ಸುಜೇಂದ್ರ ಕುಮಾರ್, ರಮೇಶ್,ಪವಿತ್ರ ಪ್ರತಾಪ್,ಮಂಜುನಾಥ್, ಪ್ರಕಾಶ್, ಗ್ರಾಮದ ಮುಖಂಡರಾದ ಸುಭಾಸ್, ಸೋಮಶೇಖರ್, ಉಮೇಶ್ ಚಂದ್ರ, ರಾಮಶೇವ್, ನಾಗರಾಜ್, ದಿನೇಶ್, ತಮ್ಮಣ್ಣಶೆಟ್ಟಿ, ಲೋಕೇಶ್,ಹೆಚ್ ಟಿ ನಟೇಶ್,ಸೇರಿದಂತೆ ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿಕೆ.ಆರ್.ಪೇಟೆ
