
ಕೇರಳದ ಪವಿತ್ರ ಯಾತ್ರಾಸ್ಥಳವಾದ ಶಬರಿಮಲೆಯಲ್ಲಿ ಭಕ್ತರ ದರ್ಶನ ಮಾರ್ಗ ಬದಲಿಗೆ ನಿರ್ಧಾರ ಮಾಡಲಾಗಿದೆ.
ಭಕ್ತರ ಬಹುದಿನಗಳ ಬೇಡಿಕೆಯನ್ನು ಪರಿಗಣಿಸಿ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಶಬರಿಮಲೆಯಲ್ಲಿ ದರ್ಶನದ ಮಾರ್ಗವನ್ನು ಬದಲಿಸಲು ನಿರ್ಧಾರ ಕೈಗೊಂಡಿದೆ.
ಇದರಿಂದ ಭಕ್ತರಿಗೆ ಸನ್ನಿಧಾನಂ ಪವಿತ್ರ 18 ಮೆಟ್ಟಿಲುಗಳನ್ನು ಹತ್ತಿದ ಕೂಡದೇ ದರ್ಶನದ ಭಾಗ್ಯ ದೊರೆಯಲಿದೆ.
ಮಾರ್ಚ್ 15ರಿಂದ ಪ್ರಾರಂಭವಾಗುವ ಮಾಸಿಕ ಪೂಜೆಯ ಸಮಯದಲ್ಲಿ ಈ ಬದಲಾವಣೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗುವುದು. ವಿಷು ಪೂಜಾ ಸಮಯದಲ್ಲೂ ಇದು ಮಂದುವರಿಯುತ್ತದೆ ಎಂದು ಟಿಡಿಬಿ ಅಧ್ಯಕ್ಷ ಪಿ.ಎಸ್. ಪ್ರಶಾಂತ್ ಮಾಹಿತಿ ನೀಡಿದ್ದಾರೆ.
ಭಕ್ತರ ಮಾರ್ಗ ಬದಲಿಗೆ ನಿರ್ಧಾರ ಕೈಗೊಂಡಿರುವುದು ಭಕ್ತ ಸಮುದಾಯದಲ್ಲಿ ಹೊಸ ಉತ್ಸಾಹ ಮೂಡಿಸಿದೆ.