
ಗುಜರಾತ್ ಪೊಲೀಸರ ವಿಭಿನ್ನ ಕಾರ್ಯಾಚರಣೆ – ಡ್ರೋನ್ ಬಳಸಿ ಕಳ್ಳರನ್ನು ಪತ್ತೆಚ್ಚಿದ ಖಾಕಿ ಟೀಮು
ಗುಜರಾತ್ : ಇಲ್ಲಿನ ದಾಹೋದ್ ಜಿಲ್ಲೆಯ ಝಲೋದ್ ತಾಲೂಕಿನ ದೇವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಪೊಲೀಸರು ಅಚ್ಚರಿಯ ರೀತಿಯಲ್ಲಿ ಭೇದಿಸಿ ಗಮನ ಸೆಳೆದಿದ್ದಾಳೆ. ಅತ್ಯಾಧುನಿಕ ಡ್ರೋನ್ ತಂತ್ರಜ್ಞಾನವನ್ನು ಬಳಸಿಕೊಂಡು ಕಳ್ಳರನ್ನು ತ್ವರಿತವಾಗಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಜನವರಿ 28 ರಂದು ಕಳ್ಳರು ವರೋಡ್ ಗ್ರಾಮದ ಮಹಾದೇವನ ದೇವಾಲಯಕ್ಕೆ ನುಗ್ಗಿ ₹61,500 ಮೌಲ್ಯದ ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ. ಕಾಣಿಕೆ ಪೆಟ್ಟಿಗೆಯ ನಗದು, ಶಿವಲಿಂಗದ ಬೆಳ್ಳಿ ಲೇಪನ ಮತ್ತು ದೇವಾಲಯದ ಇತರೆ ಆಭರಣಗಳು ಸೇರಿದ್ದವು. ಆದ್ರೆ ಬೆಳಗಿನ ಜಾವ ಗ್ರಾಮಸ್ಥರು ದೇವಾಲಯದ ಬಾಗಿಲು ಮುರಿದಿರುವುದನ್ನು ಗಮನಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ.
ಹೀಗಾಗಿ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ತಿಳಿಸಲಾಗಿ, ಪೋಲಿಸರು ವಿಭಿನ್ನ ಕಾರ್ಯಾಚರಣೆಗೆ ಮುಂದಾದರು. ಹೌದು ಡ್ರೋನ್ ಮೂಲಕ ವಿಭಿನ್ನ ಕಾರ್ಯಾಚರಣೆ ಮಾಡಿದ ಪೊಲೀಸರು ಕಳ್ಳರನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಹೌದು ಪೊಲೀಸರು ಡ್ರೋನ್ ಮೂಲಕ ಖದೀಮರಿಗಾಗಿ ವ್ಯಾಪಕ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಈ ವೇಳೆ ಕೆಲ ವ್ಯಕ್ತಿಗಳ ಅನುಮಾನಾಸ್ಪದ ಚಲನವಲನಗಳನ್ನು ಪತ್ತೆಹಚ್ಚಿದ್ದು ತಕ್ಷಣವೇ ಆರೋಪಿಗಳನ್ನು ಬಂಧಿಸಿದ್ದಾರೆ.
ಪೊಲೀಸ್ ತಂಡದ ಈ ಕಾರ್ಯಕ್ಕೆ ಗುಜರಾತ್ ಗೃಹ ಸಚಿವ ಹರ್ಷ ಸಂಘವಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅಪರಾಧ ಪತ್ತೆಗಾಗಿ ತಂತ್ರಜ್ಞಾನವನ್ನು ಬಳಸಿಕೊಳ್ಳುವಲ್ಲಿ ಪೊಲೀಸರ ಪ್ರಯತ್ನ ಮಾದರಿಯಾಗಿದೆ ಎಂದಿದ್ದಾರೆ.