ಬೆಂಗಳೂರು: ರಾಜ್ಯದಲ್ಲಿ ಆಸ್ತಿ ಖರೀದಿ–ಮಾರಾಟ ಪ್ರಕ್ರಿಯೆಗೆ ದೊಡ್ಡ ಬದಲಾವಣೆ ತರಲಾಗಿದ್ದು, ಇನ್ಮುಂದೆ ಆಸ್ತಿ ನೋಂದಣಿಗೆ ಡಿಜಿಟಲ್ ಸಹಿ ಕಡ್ಡಾಯವಾಗಿದೆ.
ವಿಧಾನಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು, “ಅಧಿಕಾರಿಗಳ ಹಸ್ತಕ್ಷೇಪ ಕಡಿಮೆಗೊಳಿಸಿ, ನೋಂದಣಿ ಪ್ರಕ್ರಿಯೆ ಸಂಪೂರ್ಣ ಡಿಜಿಟಲೀಕರಣಗೊಳ್ಳುವಂತೆ ಕ್ರಮ ಕೈಗೊಳ್ಳಲಾಗಿದೆ. ದಾಖಲೆಗಳು ಪೇಪರ್ಲೆಸ್ ಆಗಿ, ಡಿಜಿಟಲ್ ರೂಪದಲ್ಲಿಯೇ ಬರಬೇಕಾಗಿದೆ” ಎಂದು ಹೇಳಿದರು.
ನೋಂದಣಿ (ಕರ್ನಾಟಕ ತಿದ್ದುಪಡಿ) ವಿಧೇಯಕ 2025ಕ್ಕೆ ಸ್ಪೀಕರ್ ಯು.ಟಿ. ಖಾದರ್ ಧ್ವನಿಮತದ ಮೂಲಕ ಅಂಗೀಕಾರ ನೀಡಿದರು. ತಿದ್ದುಪಡಿ ಅನ್ವಯ, ಸೆಕ್ಷನ್ 32ರಲ್ಲಿ ಬದಲಾವಣೆ ತರಲಾಗಿದ್ದು, ಆರ್ಟಿಸಿ ದಾಖಲೆಯನ್ನು ಆಧಾರ್ ಸಂಖ್ಯೆಯೊಂದಿಗೆ ಸಂಯೋಜಿಸಲಾಗಿದೆ. ರೈತರು ಅಥವಾ ನಾಗರಿಕರು ಖುದ್ದಾಗಿ ಕಚೇರಿಗಳಿಗೆ ಹೋಗಬೇಕಾದ ಅಗತ್ಯವಿಲ್ಲದೆ ದಾಖಲೆಗಳು ಸ್ವಯಂಚಾಲಿತವಾಗಿ ರಿಜಿಸ್ಟರ್ ಆಗುವ ವ್ಯವಸ್ಥೆ ಕಲ್ಪಿಸಲಾಗಿದೆ.
ಇದಲ್ಲದೆ, ನಕಲಿ ಮತ್ತು ವಂಚನೆ ತಡೆಗಟ್ಟಲು ಕಾನೂನಿನಲ್ಲಿ ಬದಲಾವಣೆ ಮಾಡಲಾಗಿದ್ದು, 11ಇ ಸ್ಕೆಚ್ಗೂ ಕಾನೂನು ಬದ್ಧ ಮಾನ್ಯತೆ ನೀಡಲಾಗಿದೆ.
ಸಚಿವರು, “ಈ ತಿದ್ದುಪಡಿ ವಿಧೇಯಕದ ಮೂಲಕ ಅಧಿಕಾರಿಗಳ ಮಧ್ಯಪ್ರವೇಶ ಕಡಿಮೆಯಾಗುವಂತೆಯೇ ನೋಂದಣಿ ಪ್ರಕ್ರಿಯೆ ಹೆಚ್ಚು ಪಾರದರ್ಶಕವಾಗಲಿದೆ” ಎಂದು ಹೇಳಿದರು.

[…] […]