ತುಮಕೂರು: ನಗರದ ತಿಗಳ ಸಮಾಜದ ಹಿರಿಯರು, ಜಿಲ್ಲಾ ಜೆಡಿಎಸ್ ಮುಖಂಡರು, ಅಗ್ನಿಬನ್ನಿರಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಟಿ.ಎಲ್.ಕುಂಭಯ್ಯ ಅವರ 80ನೇ ಹುಟ್ಟುಹಬ್ಬವನ್ನು ಸಮಾಜದ ಮುಖಂಡರು, ಹಿತೈಷಿಗಳು ಗುರುವಾರ ನಗರದಲ್ಲಿ ಸಂಭ್ರಮದಿಂದ ಆಚರಿಸಿದರು.
ಹನುಮಂತಪುರದ ಎಸ್ಎಲ್ಎನ್ ಗೋಲ್ಡನ್ ಲೀಫ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ಸಂಸದ ಜಿ.ಎಸ್.ಬಸವರಾಜು ಅವರೊಂದಿಗೆ ಕೇಕ್ ಕತ್ತರಿಸಿ ಕುಂಭಯ್ಯನವರು ತಮ್ಮ ಜನ್ಮದಿನ ಆಚರಿಸಿಕೊಂಡರು. ಈ ವೇಳೆ ವಿವಿಧ ಮುಖಂಡರು ಟಿ.ಎಲ್.ಕುಂಭಯ್ಯ ಹಾಗೂ ಅವರ ಪತ್ನಿ ಅನುಸೂಯಮ್ಮನವರನ್ನು ಸನ್ಮಾನಿಸಿ ಗೌರವಿಸಿ ಹುಟ್ಟುಹಬ್ಬದ ಶುಭಾಶಯ ಕೋರಿದರು.
ಇದನ್ನು ಓದು: ತುಮಕೂರು: ಜಿ ರಾಮ್ ಜಿ ಅಪಪ್ರಚಾರ: ಕಾಂಗ್ರೆಸ್ ಸರ್ಕಾರದ ವಿರುದ್ಧ ಡಾ.ಅಶ್ವತ್ಥನಾರಾಯಣ್ ಕಿಡಿ
ತಿಗಳ ಸಮಾಜದ ಯಜಮಾನರುಗಳಾದ ಹನುಮಂತರಾಜು, ಶಿವಕುಮಾರ್, ಗಂಗಹನುಮಯ್ಯ, ನಗರಪಾಲಿಕೆ ಮಾಜಿ ಉಪಮೇಯರ್ ಟಿ.ಕೆ.ನರಸಿಂಹಮೂರ್ತಿ,ಎ.ಶ್ರೀನಿವಾಸ್, ಟಿ.ಹೆಚ್.ಜಯರಾಮ್, ಟಿ.ಹೆಚ್.ವಾಸುದೇವ್, ರಾಮಕೃಷ್ಣಪ್ಪ, ಮುಖಂಡರಾರ ಎನ್.ಎಸ್.ಶಿವಣ್ಣ, ರವೀಶ್ ಜಹಂಗೀರ್, ಹಿರಿಯ ವಕೀಲರಾದ ಮಹದೇವಯ್ಯ, ದಾಂಡೇಲಿ ಗಂಗಣ್ಣ, ಜನಾರ್ದನ್, ಕುಂಭಿನರಸಯ್ಯ ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿ ಶುಭ ಹಾರೈಸಿದರು.
– ಕೆ.ಬಿ.ಚಂದ್ರಚೂಡ
