
ಹಾಸನ : ಹಾಸನ ಜಿಲ್ಲಾ ಆಸ್ಪತ್ರೆಯ ಸರ್ಕಾರಿ ರಕ್ತನಿಧಿ ಕೇಂದ್ರಕ್ಕೆ ಗುತ್ತಿಗೆ ಆಧಾರದ ಮೇಲೆ ಪ್ರಯೋಗ ಶಾಲಾ ತಂತ್ರಜ್ಞರ ಒಂದು ಹುದ್ದೆಗೆ ನೇರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾರ್ಹತೆ, ಅಂಗೀಕೃತ ವಿಶ್ವವಿದ್ಯಾನಿಲಯದ ಮಾನ್ಯತೆ ಪಡೆದ ಸಂಸ್ಥೆಯಿಂದ DMLT ಅಥವಾ ಸಮಾನವಾದ ವಿದ್ಯಾರ್ಹತೆ ಸಮನಾದ ವಿದ್ಯಾರ್ಹತೆ ಎಂದರೆ DMLT, Bsc.MLT, ಎಂದು ಅಥೈಸಿಕೊಳ್ಳುವುದು) ಮತ್ತು ವಿಜ್ಞಾನ ವಿಷಯದಲ್ಲಿ ಪದವಿ ಪೂರ್ವ ವಿದ್ಯಾರ್ಹತೆ (ಪಿ.ಯು.ಸಿ ತೇರ್ಗಡೆ ಹೊಂದಿರಬೇಕು), ಹಾಗೂ 2 ವರ್ಷ ರಕ್ತ ಕೇಂದ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿರಬೇಕು.
ವೇತನಶ್ರೇಣಿ, ಸಂಚಿತ ಮೊತ್ತ ಮಾಸಿಕ 25೦೦೦ ರೂಗಳು, ಸ್ಥಳೀಯರಿಗೆ ಆದ್ಯತೆ ಮೆರೆಗೆ ನೇಮಕ ಮಾಡಲಾಗುವುದು, ಕನ್ನಡ ಭಾಷಾ ಜ್ಞಾನ ಹೊಂದಿರತಕ್ಕದ್ದು, ಕಂಪ್ಯೂಟರ್ ಜ್ಞಾನ (ಇಂಟರ್ನೆಟ್ ಬ್ರೌಸಿಂಗ್, ಇ-ಮೇಲ್, ಎಂ.ಎಸ್.ಆಪೀಸ್ಗಳ ) ಪರಿಣಿತಿ ಹೊಂದಿರಬೇಕು.
ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು, ಸಾಮಾನ್ಯ ಆರೋಗ್ಯ ಸೇವೆಗಳ ನಿರ್ದೇಶನಾಲಯ, ನವದೆಹಲಿ/ರಾಜ್ಯ ಸರ್ಕಾರ/ ನ್ಯಾಕೋ ಕೆ.ಎಸ್.ಎ.ಪಿ.ಎಸ್ ನ ಷರತ್ತು ಮತ್ತು ನಿಬಂಧನೆಗೊಳಪಟ್ಟು ಆಯ್ಕೆ ಮಾಡಲಾಗುವುದು.
ಸಂದರ್ಶನ ನಡೆಯುವ ಸ್ಥಳ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕ, ೨ನೇ ಮಹಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಕಟ್ಟಡ, ಹಾಸನಾಂಬ ಒಳ ಕ್ರೀಡಾಂಗಣದ ಹತ್ತಿರ, ಸಾಲಗಾಮೆ ರಸ್ತೆ, ಹಾಸನ. ಫೆ.21 ಬೆಳಗ್ಗೆ 10 ಗಂಟೆಗೆ ಸಂದರ್ಶನ ಮಾಡಲಾಗುತ್ತದೆ.
ಮೂಲದಾಖಲಾತಿಗಳೊಂದಿಗೆ ಹಾಜರಾಗತಕ್ಕದ್ದು, ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08172 250662, 9449846976 ನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕದ ಜಿಲ್ಲಾ ಏಡ್ಸ್/ಕ್ಷಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.