ತುಮಕೂರು:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಜ್ಞಾನದೀಪ ಕಾರ್ಯಕ್ರಮದ ಅಡಿಯಲ್ಲಿ ತುಮಕೂರು ತಾಲೂಕಿನ ಗೂಳೂರು ಹೋಬಳಿಯ ಉಳ್ಳೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 10 ಜೊತೆ ಬೆಂಚು ಡೆಸ್ಕ್ ಮಂಜೂರಾಗಿದ್ದು ತುಮಕೂರು 1 ಜಿಲ್ಲೆಯ ಗೌರವಾನ್ವಿತ ಜಿಲ್ಲಾ ನಿರ್ದೇಶಕರಾದ ಸತಿಶ್ ಸುವರ್ಣ, ತಾಲೂಕಿನ ಮಾನ್ಯ ಯೋಜನಾಧಿಕಾರಿಗಳಾದ ಪ್ರಭಾಕರ್ರವರುಗಳು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ಶ್ರೀಮತಿ ಮಹದೇವಮ್ಮ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಶ್ರೀ ಹನುಮೇಗೌಡ್ರು, ಪಂಚಾಯಿತಿ ಸದಸ್ಯರಾದ ಶ್ರೀ ಕುಮಾರ್,ಹಾಲಿನ ಡೈರಿ ಅಧ್ಯಕ್ಷರಾದ ನಾಗಣ್ಣನವರು, ಮುಖಂಡರಾದ ಜಯಣ್ಣ, ಶ್ರೀ ರಮೇಶ್, ಎಸ್.ಡಿ ಎಂ.ಸಿ ಅಧ್ಯಕ್ಷರು, ಸದಸ್ಯರು, ಶಿಕ್ಷಕ ವೃಂದದವರು , ವಲಯ ಮೇಲ್ವಿಚಾರಕರಾದ ಮಹಾಂತೇಶ.ಬಿ, ಸೇವಾ ಪ್ರತಿನಿಧಿಯಾದ ಶಾರದ,ಶಾಲೆಯ ವಿದ್ಯಾರ್ಥಿಗಳು,ಶಿಕ್ಷಕರು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ.
