ತುಮಕೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಪರಮಪೂಜ್ಯ ಡಾ||ಡಿ. ವೀರೇಂದ್ರ ಹೆಗ್ಗೆಡೆಯವರು ಹಾಗೂ ಮಾತೃಶ್ರೀ ಹೇಮಾವತಿ ವಿ.ಹೆಗ್ಗೆಡೆಯವರು ಧರ್ಮಸ್ಥಳ ಕೇತ್ರದಿಂದ ನೀಡಿದ ದಿನಬಳಕೆ ವಸ್ತುಗಳನ್ನು ವಾತ್ಸಲ್ಯ ಕಿಟ್ ನ್ನು ತುಮಕೂರು ಗ್ರಾಮಾಂತರ ಯೋಜನಾ ವ್ಯಾಪ್ತಿಯ 12 ಫಲಾನುಭವಿಗಳಿಗೆ ಇಂದು ವಿತರಣೆ ಮಾಡಲಾಯಿತು.
ತುಮಕೂರು ಜಿಲ್ಲೆಯ ನಿರ್ದೇಶಕರಾದ ಸತೀಶ್ ಸುವರ್ಣರವರು, ತಾಲೂಕಿನ ಯೋಜನಾಧಿಕಾರಿಗಳಾದ ಸಂದೇಶ್.ಪಿ.ಬಿ, ಊರಿನ ಗಣ್ಯರು, ಜನಪ್ರತಿನಿಧಿಗಳು ಜ್ಞಾನವಿಕಾಸ ಸಮನ್ವಯಾಧಿಕಾರಿಗಳು, ವಲಯದ ಮೇಲ್ವಿಚಾರಕರು, ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ಜಿಲ್ಲಾ ಕಛೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ
