ಹಾಸನ: ರಾಷ್ಟ್ರೀಯ ಹೆದ್ದಾರಿ 75ರ ಹಾಸನ ನಗರದ ರಾಜೀವ್ ಇಂಜಿನಿಯರಿಂಗ್ ಕಾಲೇಜ್ ಹತ್ತಿರದ ಬೈಪಾಸ್ ರಸ್ತೆಯಲ್ಲಿ ಕೆ.ಎಂ 178 + 953 ಬರುವ ರೈಲ್ವೆ ಮೇಲ್ಸೇತುವೆ (ಆರ್ಓಬಿ)ಯ ದುರಸ್ಥಿ ಕಾಮಗಾರಿ ಜರುಗಲಿರುವುದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಯಾವುದೇ ತರಹದ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗೃತಾ ಕ್ರಮವಾಗಿ ಮೇ.04 ರಿಂದ 14 ರವರೆಗೆ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅನುಮತಿಸಿದೆ. ಮತ್ತು ಮೇ.15 ರಿಂದ ಜೂ.14 ರವರೆಗೆ ಎಲ್ಲಾ ರೀತಿಯ ವಾಹನ ಸಂಚಾರವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಸತ್ಯಭಾಮ.ಸಿ.ಆದೇಶಿಸಿದ್ದಾರೆ.
ಬುಸ್ತೆನಹಳ್ಳಿ ಸರ್ಕಲ್-ಡೈರಿ ವೃತ್ತ ಮಾರ್ಗವಾಗಿ -ಸಾಲಗಾಮೆ ರಸ್ತೆಯ ಸುಬೇದಾರ್ ಸರ್ಕಲ್, ಬೇಲೂರು ರಸ್ತೆ ವಿಜಯ ನಗರ ಬಡಾವಣೆಯ 80 ಅಡಿ ಮುಖ್ಯ ರಸ್ತೆ-ದೇವರಾಯಪಟ್ಟಣ ಸರ್ಕಲ್ ಮಾರ್ಗದ ಮೂಲಕ ಎಲ್ಲಾ ರೀತಿಯ ವಾಹನಗಳು ಹಾದು ಹೋಗುವಂತೆ ಆದೇಶಿಸಿದ್ದಾರೆ.
