ಭಾರತೀಯ ಮುಂಗುಸಿ ಹಾವಿನ ವಿರುದ್ಧ ಹೋರಾಡುವಾಗ ವಿಶೇಷ ವಿಧಾನವನ್ನು ಅನುಸರಿಸುತ್ತದೆ.ದಾಳಿ ಮಾಡುವ ಸಂದರ್ಭದಲ್ಲಿ ಮುಂಗುಸಿ ಮಿಂಚಿನ ವೇಗದಲ್ಲಿ ಹಾವಿನ ಮೇಲೆ ಹಾರುತ್ತದೆ. ಅದು ತನ್ನನ್ನು ತಾನು ರಕ್ಷಿಸಿಕೊಳ್ಳುತ್ತದೆ. ಹೀಗೆ ಮಾಡುವುದರಿಂದ ಹಾವು ಪದೇ ಪದೇ ದಣಿಯುತ್ತದೆ.ಕೆಲವೊಮ್ಮೆ ಅದು ನೇರವಾಗಿ ಹಾವಿನ ತಲೆಯನ್ನು ಹಿಡಿದು ಕಚ್ಚಿ ಕೊಲ್ಲುತ್ತದೆ.ಮುಂಗುಸಿಗಳು ಸಾಮಾನ್ಯವಾಗಿ ನೆಲದಲ್ಲಿ ಗೂಡುಕಟ್ಟುವ ಪಕ್ಷಿಗಳು, ಹಲ್ಲಿಗಳು, ಮೊಲಗಳು ಮತ್ತು ಕೀಟಗಳನ್ನು ಬೇಟೆಯಾಡುತ್ತವೆ.ಅಷ್ಟೇ ಅಲ್ಲ ಯಾವುದೇ ಹಾವುಗಳ ವಿಷವು ಸಾಮಾನ್ಯವಾಗಿ ಮುಂಗುಸಿಗಳ ಮೇಲೆ ನಿಷ್ಪರಿಣಾಮಕಾರಿಯಾಗಿದೆ.
ನಾಗರಹಾವು ಮುಂಗುಸಿಯನ್ನು ಪದೇ ಪದೇ ಕಚ್ಚಿದರೆ ಮುಂಗಸಿ ಅಪಾಯಕ್ಕೆ ಸಿಲುಕುತ್ತದೆ. ಆದರೆ ಅದು ಬಹಳ ವಿರಳವಾಗಿ ಸಂಭವಿಸುತ್ತದೆ. ವಾಸ್ತವವಾಗಿ ಮುಗುಸಿಯ ವೇಗದ ಚಲನೆಗಳು ಅದನ್ನು ಹಾವು ಕಡಿತದಿಂದ ರಕ್ಷಿಸುತ್ತವೆ.
ಇನ್ನು ನಾಗರಹಾವಿನ ವಿರುದ್ಧ ಹೋರಾಡುವಾಗ ಮುಂಗುಸಿ ತನ್ನ ತುಪ್ಪಳವನ್ನು ಉಬ್ಬಿಕೊಂಡು ಎರಡು ಪಟ್ಟು ದೊಡ್ಡದಾಗಿ ಕಾಣುತ್ತದೆ.ಇದು ನಾಗರಹಾವಿಗೆ ಮುಂಗುಸಿಯ ಮೇಲೆ ದಾಳಿ ಮಾಡಲು ಕಷ್ಟವಾಗುತ್ತದೆ. ಮುಂಗುಸಿ ನಿರ್ಭೀತ ಬೇಟೆಗಾರ ಮತ್ತು ಅದು ದಾಳಿ ಮಾಡಿದಾಗ ಮುಗುಸಿ ನೇರವಾಗಿ ಹಾವಿನ ತಲೆಯ ಮೇಲೆ ದಾಳಿ ಮಾಡುತ್ತದೆ. ಅದು ಹಿಂದಿನಿಂದ ದಾಳಿ ಮಾಡುವುದಿಲ್ಲ. ಬದಲಾಗಿ ಅದು ಮುಂಭಾಗದಿಂದ ದಾಳಿ ಮಾಡಿ ಹಾವಿನ ತಲೆಯನ್ನು ಕಚ್ಚುತ್ತದೆ. ಮುಂಗುಸಿ ಹಾವನ್ನು ಹುಡುಕುತ್ತಾ ತನ್ನ ಬೇಟೆಯನ್ನು ಹಿಂಬಾಲಿಸುತ್ತದೆ.ಅದು ಹಾವನ್ನು ಹಿಂಬಾಲಿಸಿಕೊಂಡು ಹಾವಿನ ಹುತ್ತದೊಳಗೂ ಸಹ ಹೋಗುತ್ತದೆ. ಅದು ತನ್ನ ಬಲವಾದ ಮುಂಗಾಲುಗಳಿಂದ ಹಾವಿನ ಹುತ್ತವನ್ನು ನಾಶ ಮಾಡುತ್ತದೆ.
ವಿಶೇಷವೇನೆಂದರೆ ಮುಂಗುಸಿಯ ದೇಹದಲ್ಲಿ ಕೆಲವು ವಿಷನಿರೋದಕ ರಾಸಾಯನಿಕಗಳಿವೆ. ಈ ರಾಸಾಯನಿಕಗಳು ಮುಂಗುಸಿಯನ್ನು ಹಾವಿನ ವಿಷದಿಂದ ರಕ್ಷಿಸುತ್ತವೆ. ಮುಂಗುಸಿಯಲ್ಲಿರುವ ಅಸಿಟೈಲ್ ಕೋಲೀನ್ ಗ್ರಾಹಕಗಳು ಮುಗುಸಿಯ ದೇಹದಲ್ಲಿ ಹಾವಿನ ವಿಷ ಪ್ರವೇಶಿಸುವುದನ್ನು ತಡೆಯುತ್ತದೆ. ಇದರ ಜೊತೆಗೆ ಮುಂಗುಸಿಗಳು ಗ್ಲೈಕೊಪ್ರೋಟೀನ್ ಅನ್ನು ಉತ್ಪಾದಿಸುತ್ತವೆ.ಇದು ನಾಗರಹಾವಿನ ವಿಷದಲ್ಲಿರುವ ಪ್ರೋಟೀನ್ಗಳಿಗೆ ಬಂಧಿಸುತ್ತದೆ. ಇದು ವಿಷವು ಮುಂಗುಸಿಗೆ ಹಾನಿ ಮಾಡುವುದನ್ನು ತಡೆಯುತ್ತದೆ. ಇದರ ಚುರುಕಾದ ವೇಗವು ಹಾವಿನ ಕಡಿತದಿಂದ ರಕ್ಷಿಸುತ್ತದೆ. ಆದರೂ ಕೂಡ ಮುಂಗುಸಿಗಳು ನಾಗರಹಾವಿನ ವಿಷದಿಂದ ಸಂಪೂರ್ಣವಾಗಿ ಸುರಕ್ಷಿತವಾಗಿಲ್ಲ. ನಾಗರಹಾವು ಅದನ್ನು ಪದೇ ಪದೇ ಕಚ್ಚಿದರೆ, ಮುಂಗುಸಿ ಅನಾರೋಗ್ಯಕ್ಕೆ ಒಳಗಾಗಬಹುದು ಅಥವಾ ಸಾಯಬಹುದು.
ಭಾರತದಲ್ಲಿ ಮುಂಗುಸಿಗಳು:
ಭಾರತದಲ್ಲಿ ಒಟ್ಟಾರೆಯಾಗಿ ಆರು ಜಾತಿಯ ಮುಂಗುಸಿಗಳಿವೆ. ಅವುಗಳಲ್ಲಿ ನಾಲ್ಕು ಜಾತಿಗಳು ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ವಾಸಿಸುತ್ತವೆ. ಭಾರತೀಯ ಬೂದು ಮುಂಗುಸಿ, ಚಿಕ್ಕ ಭಾರತೀಯ ಮುಂಗುಸಿ, ಉತ್ತರ ಭಾರತದಲ್ಲಿ ಹೆಚ್ಚಾಗಿ ಕಂಡುಬರುತ್ತದೆ.ಅವು ಮನುಷ್ಯರಿರುವ ಜಾಗ, ಕಾಡುಗಳು ಮತ್ತು ಮರುಭೂಮಿಗಳಲ್ಲಿ ವಾಸಿಸಲು ಹೊಂದಿಕೊಳ್ಳುತ್ತವೆ.
ಇನ್ನು ಭಾರತೀಯ ಮುಂಗುಸಿ ಸಾಮಾನ್ಯವಾಗಿ ಬೂದು ಬಣ್ಣದಲ್ಲಿರುತ್ತದೆ.ಇದರ ತುಪ್ಪಳದ ಮೇಲೆ ಕಪ್ಪು ಮತ್ತು ಬಿಳಿ ಪಟ್ಟೆಗಳಿವೆ.ದಕ್ಷಿಣ ಭಾರತದ ಮುಂಗುಸಿಗಳು ಉತ್ತರ ಭಾರತಕ್ಕಿಂತ ಗಾಢವಾದ ಬಣ್ಣವನ್ನು ಹೊಂದಿರುತ್ತವೆ. ಮರುಭೂಮಿ ಮುಂಗುಸಿಗಳು ಕೆಂಪು ಬಣ್ಣವನ್ನು ಹೊಂದಿರುತ್ತವೆ. ಚಿಕ್ಕ ಭಾರತೀಯ ಮುಂಗುಸಿಗಳು ಬೂದು ಬಣ್ಣದಲ್ಲಿರುತ್ತವೆ. ಭಾರತದಲ್ಲಿ ಮುಂಗುಸಿಗಳನ್ನು ಸಂರಕ್ಷಿತ ಜಾತಿ ಎಂದು ಪರಿಗಣಿಸಲಾಗುತ್ತದೆ.ಇನ್ನು ಎರೆಹುಳುಗಳಂತೆ ಮುಂಗಸಿಗಳು ಕೂಡ ರೈತರಿಗೆ ಬಹಳ ಇಷ್ಟ.ರೈತರು ಅವುಗಳನ್ನು ಪ್ರೀತಿಸುತ್ತಾರೆ ಏಕೆಂದರೆ ಅವು ಹಾವುಗಳು ಮತ್ತು ಇಲಿಗಳನ್ನು ತಮ್ಮ ಹೊಲಗಳು ಮತ್ತು ಮನೆಗಳಿಂದ ದೂರವಿಡುತ್ತವೆ. ಇನ್ನು ವಿಶೇಷವಾಗಿ ಮಳೆಗಾಲದಲ್ಲಿ ಇವು ರೈತರಿಗೆ ಬಹಳ ಸಹಕಾರಿಯಾಗಿವೆ.
