
ಇನ್ನೂ ಚಾಲನಾ ಪರವಾನಗಿ (License) ಪಡೆದಿಲ್ಲದ್ದಿದ್ದು ನೀವೊಂದು ಹೊಸ ಪರವಾನಗಿ ಪಡೆಯಲು ಬಯಸಿದರೆ ಮನೆಯಲ್ಲೇ ಕುಳಿತು ಆರಾಮಾಗಿ ಇದಕ್ಕಾಗಿ ಅರ್ಜಿ ಸಲ್ಲಿಸಿ ಪಡೆಯಬಹುದು. ಡ್ರೈವಿಂಗ್ ಲೈಸೆನ್ಸ್ ಪಡೆಯುವ ಮೊದಲು ನೀವು ಲರ್ನರ್ ಲೈಸೆನ್ಸ್ ಪಡೆಯುವುದು ಕಡ್ಡಾಯವಾಗಿದೆ.
ಹಾಗಾದ್ರೆ ಹೊಸ ಕಲಿಯುವವರ ಪರವಾನಗಿಯ ನಂತರ ಶಾಶ್ವತ ಪರವಾನಗಿಯನ್ನು (Driving Licence) ರಚಿಸಲಾಗುತ್ತದೆ. ಕಲಿಯುವವರ ಪರವಾನಗಿ ಪಡೆಯುವ ಪ್ರಕ್ರಿಯೆ ನಿಮಗೆ ತಿಳಿದಿಲ್ಲದಿದ್ದರೆ ಇಂದು ನಾವು ನಿಮಗೆ ಕಲಿಯುವವರ ಚಾಲನಾ ಪರವಾನಗಿಯನ್ನು (Learner’s License) ಪಡೆಯುವ ಆನ್ಲೈನ್ ಪ್ರಕ್ರಿಯೆಯ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.
ಹೊಸ ಕಲಿಕೆ ಚಾಲನಾ ಪರವಾನಗಿಗೆ (Learner’s License) ಅಗತ್ಯವಿರುವ ದಾಖಲೆಗಳು:
ಮೊದಲಿಗೆ ನೀವು ಹೊಸ Learner’s License ಪಡೆಯಲು ಬಯಸುವ ಮೊದಲು ನಿಮ್ಮ ಬಳಿ ಕೆಲವೊಂದು ಕಡ್ಡಾಯ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಹೊಂದಿರಬೇಕು ಇದರಲ್ಲಿ ನೀವು ನಿಮ್ಮ ಆಧಾರ್ ಕಾರ್ಡ್ ಅಥವಾ ವೋಟರ್ ಕಾರ್ಡ್ ಪಾಸ್ಪೋರ್ಟ್ ಅಳತೆಯ ಫೋಟೋ, ನಿಮ್ಮ ಸಹಿ, ಮತ್ತು ಶುಲ್ಕದೊಂದಿಗೆ ತಯಾರಾಗಿರಬೇಕು. ಒಮ್ಮೆ ನೀವು ಇದನ್ನು ಆರಂಭಿಸಿದ ನಂತರ ಕಲಿಕೆಯ ಚಾಲನಾ ಪರವಾನಗಿಗಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಸಾಮಾನ್ಯವಾಗಿ 15 ದಿನಗಳಲ್ಲಿ ಪೂರ್ಣಗೊಳ್ಳುತ್ತದೆ. ಇಲ್ಲವಾದರೆ ಈ ನಿಮ್ಮ ಅರ್ಜಿಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.
ಲರ್ನಿಂಗ್ ಲೈಸೆನ್ಸ್ (Learner’s License) ಪಡೆಯಲು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ (MoRTH) ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ sarathi.parivahan.gov.in
ಇಲ್ಲಿ ಆನ್ಲೈನ್ ಸೇವೆಗಳ ಟ್ಯಾಬ್ ಮೇಲೆ ಕ್ಲಿಕ್ ಮಾಡಿ ಕಲಿಕೆ ಪರವಾನಗಿ” ಲಿಂಕ್ ಅನ್ನು ಕ್ಲಿಕ್ ಮಾಡಿ.
ನಿಮ್ಮ ರಾಜ್ಯವನ್ನು ಆಯ್ಕೆಮಾಡಿ ಅರ್ಜಿದಾರ ಎಂಬ ಆಯ್ಕೆಯನ್ನು ಆರಿಸಿ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
ಜನರೇಟ್ OTP ಮೇಲೆ ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ಸಂಖ್ಯೆಗೆ ಬಂದ OTP ಅನ್ನು ನಮೂದಿಸಿ ಸಲ್ಲಿಸಿ.
ಈಗ ನೀವು ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು. ಈ ಅರ್ಜಿ ನಮೂನೆಯಲ್ಲಿ ನಿಮ್ಮ ಎಲ್ಲಾ ವೈಯಕ್ತಿಕ ಮಾಹಿತಿ, ಶಿಕ್ಷಣ ಅರ್ಹತೆ, ವಿಳಾಸ ಮತ್ತು ಇತರ ಅಗತ್ಯ
ವಿವರಗಳನ್ನು ನಮೂದಿಸಿ.
ನಿಮ್ಮ ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಮತ್ತು ಸಹಿಯನ್ನು ಅಪ್ಲೋಡ್ ಮಾಡಿ ಫೀಸ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
ನಿಮ್ಮ ರಾಜ್ಯ ಸರ್ಕಾರವು ನಿಗದಿಪಡಿಸಿದ ಶುಲ್ಕವನ್ನು ಪಾವತಿಸಿ Submit ಮೇಲೆ ಕ್ಲಿಕ್ ಮಾಡಿ.
ನಿಮ್ಮ ಅರ್ಜಿಯನ್ನು ಸಲ್ಲಿಸಲಾಗುವುದು.
ನಿಮ್ಮ ಅಪ್ಲಿಕೇಶನ್ನ ಸ್ಥಿತಿಯನ್ನು ನೀವು ಆನ್ಲೈನ್ನಲ್ಲಿ ಟ್ರ್ಯಾಕ್ ಮಾಡಬಹುದು.