52 ವರ್ಷಗಳಿಂದ ವ್ಯಕ್ತಿಯ ಹೊಟ್ಟೆಯಲ್ಲಿತ್ತು ಟೂತ್​ ಬ್ರಷ್-ಬೆಚ್ಚಿಬಿದ್ದ ವೈದ್ಯರು

ವ್ಯಕ್ತಿಯ ಹೊಟ್ಟೆಯೊಳಗೆ ಟೂತ್ ಬ್ರಷ್ ಪತ್ತೆಯಾಗಿರುವ ಘಟನೆ ಚೀನಾದಲ್ಲಿ ನಡೆದಿದೆ. ಚೀನಾದ ಈ ವ್ಯಕ್ತಿಯ ಕರುಳೊಳಗೆ ಕಳೆದ 52 ವರ್ಷಗಳಿಂದ ಈ ಬ್ರಷ್ ಸಿಲುಕಿಕೊಂಡಿತ್ತು. ಪರೀಕ್ಷೆಯ ಬಳಿಕ ವೈದ್ಯರು ಅವರಿಗೆ ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ ಎಂದು ಹೇಳಿದ್ದಾರೆ. ಆ ವ್ಯಕ್ತಿಯ ಕರುಳೊಳಗಿಂತ 17 ಸೆಂ.ಮೀ ಉದ್ದದ ಬ್ರಷ್ ತೆಗೆದುಹಾಕಲು ವೈದ್ಯರಿಗೆ 80 ನಿಮಿಷಗಳು ಬೇಕಾಯಿತು.