ಬಿಸಿಲು ಧಗೆ ಹೆಚ್ಚುತ್ತಿದೆ, ಈ ಬಿಸಿಲಲ್ಲಿ ಮುಖದ ಕಾಂತಿ ಕುಂದುವುದು ಸಾಮಾನ್ಯ. ಬಿಸಿಲಿನಿಂದ ಹಾಗೂ ಧೂಳಿನಿಂದ ಮುಖದ ಅಂದ ಕೆಡುತ್ತದೆ. ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಗಳು ಮೂಡುತ್ತವೆ ಹಾಗೂ ಟ್ಯಾನ್ ಆಗುತ್ತದೆ. ಹಾಗಾಗಿ ಇವುಗಳನ್ನು ತೆಗೆದು ಹಾಕಲು ಈ ಮನೆಮದ್ದನ್ನು ಬಳಸಿ.
ಬ್ಲ್ಯಾಕ್ ಹೆಡ್ಸ್ ಗಳನ್ನು ಹೋಗಲಾಡಿಸಲು 2 ಕ್ಯಾಪ್ಸುಲ್ ಇದ್ದಿಲು, ½ ಚಮಚ ಬೆಂಟೋನೈಟ್ ಜೇಡಿ ಮಣ್ಣು ಮತ್ತು 1 ಚಮಚ ನೀರನ್ನು ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ. ಇದನ್ನು ಮುಖಕ್ಕೆ ಹಚ್ಚಿ 10 ನಿಮಿಷಗಳ ಕಾಲ ಬಿಟ್ಟು ವಾಶ್ ಮಾಡಿ. ಇದನ್ನು 15 ದಿನಗಳಿಗೊಮ್ಮೆ ಮಾಡಿ.
*ವೈಟ್ ಹೆಡ್ಸ್ ಹೋಗಲಾಡಿಸಲು 2 ಚಮಚ ಕಿತ್ತಳೆ ಸಿಪ್ಪೆ ಪುಡಿ, 2 ಚಮಚ ಅಕ್ಕಿ ಪುಡಿ, 2 ಚಮಚ ಒಣ ಬಟಾಣಿ ಪುಡಿ ಇವೆಲ್ಲವನ್ನು ಸೇರಿಸಿ ರೋಸ್ ವಾಟರ್ ನೊಂದಿಗೆ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. ಒಂಗಿದ ಬಳಿಕ ತಣ್ಣೀರಿನಿಂದ ವಾಶ್ ಮಾಡಿ.
ಕಾಫಿ ಪುಡಿಗೆ ಆಲಿವ್ ಆಯಿಲ್ ಅನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ವಾಶ್ ಮಾಡಿ. ಇದು ನೈಸರ್ಗಿಕವಾಗಿ ಚರ್ಮವನ್ನು ಪೋಷಿಸುತ್ತದೆ. ಹಾಗೇ ಆಲಿವ್ ಆಯಿಲ್ ಚರ್ಮವನ್ನು ನೈಸರ್ಗಿಕವಾಗಿ ಮಾಯಿಶ್ಚರೈಸ್ ಮಾಡುತ್ತದೆ. ಮತ್ತು ಮೃದುಗೊಳಿಸುತ್ತದೆ.
*1 ಚಮಚ ಕಾಫಿ, ಅರಶಿನ ಮತ್ತು ಮೊಸರನ್ನು ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ವಾಶ್ ಮಾಡಿ. ಇದನ್ನು ವಾರದಲ್ಲಿ 2 ಬಾರಿ ಬಳಸಿ. ಇದು ಸೂರ್ಯನ ಕಿರಣಗಳಿಂದಾಗುವ ಟ್ಯಾನಿಂಗ್ ಅನ್ನು ನಿವಾರಿಸುತ್ತದೆ.
ಜಾಹೀರಾತು
ಗ- ಸುನಂದ ಕಣ್ಣಿನ ಆಸ್ಪತ್ರೆ, ಕೆ.ಆರ್.ಪುರಂ, ಹಾಸನ.
