ಕೆ.ಆರ್.ಪೇಟೆ,ಅ.08: ಪುಟ್ಟ ಬಂಡಿ ಓಟ,ಮಕ್ಕಳ ಓಟ,ಹಿರಿಯ ನಾಗರಿಕರ ಓಟ ಹೀಗೆ ನಾನಾ ಸ್ಪರ್ಧೆ ನೋಡಿದ ನೀವು ಶ್ವಾನಗಳ ಓಟದ ಸ್ಪರ್ದೆ ನೋಡಿದ್ದೀರಿ, ಕೆ.ಆರ್.ಪೇಟೆ ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಜಾಗಿನಕೆರೆ ಗ್ರಾಮದ ಶ್ರೀ ವಿನಾಯಕ ಗೆಳೆಯರ ಬಳಗದ ಯುವಕರು ಇಂಥ ಅವಕಾಶವನ್ನು ಜನರಿಗೆ ನೋಡಲು ಕಲ್ಪಿಸಿಕೊಟ್ಟಿದ್ದರು ಭಾನುವಾರವಾದ ದಿನವಾದುದರಿಂದ ಜಾಗಿನಕೆರೆ ಗ್ರಾಮದ ಯುವಕರು ಎರಡನೇ ವರ್ಷದ ಶ್ವಾನಗಳ ಓಟದ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದ ಯುವಕರು ಶ್ವಾನದ ಓಟದ ಸ್ಪರ್ದೆಯಿಂದ ಗ್ರಾಮದ ಎಲ್ಲೆಡೆ ಹಬ್ಬದ ವಾತಾವರಣ ಮೂಡಿಸಿತಲ್ಲದೆ ಎರಡನೇ ಬಾರಿ ನಡೆದ ಸ್ಪರ್ಧೆಯಲ್ಲೆ ಜನರಿಂದ ಅಭೂತಪೂರ್ವ ಪ್ರೋತ್ಸಾಹ ದೊರೆಯಿತು. ಕಾರ್ಯಕ್ರಮವನ್ನು ಆಯೋಜಿಸಬೇಕು.
ಹೇಗೆ ಆಯೋಜಿಸಬೇಕು ಅವುಗಳ ಓಟಕ್ಕೆ ಸ್ಪೂರ್ತಿ ಹೇಗೆ ಕಾರ್ಯಕ್ರಮದಲ್ಲಿ ನೆರೆದಿರುವ ಜನರ ಮದ್ಯೆ ಶ್ವಾನಗಳನ್ನು ಓಡಿಸುವುದು ಕಷ್ಟದ ಕಾರ್ಯ. ಪೂರ್ವ ತಯಾರಿಯನ್ನು ಮಾಡಿದ್ದ ಯುವಕ ಮಂಡಳಿಯವರು ಈ ಹಿಂದೆ ಮೊಲಗಳ ಬೇಟೆಗೆ ರೈತರು, ಕೆಲ ಬೇಟೆಗಾರರು ಶ್ವಾನಗಳಿಗೆ ತರಬೇತಿ ನೀಡಿ ಆ ಮೂಲಕ ಮೊಲ ಬೇಟೆ ಆಡುತ್ತಿದ್ದರು.
ಸದ್ಯ ಸರ್ಕಾರ ಬೇಟೆಯನ್ನು ನಿಷೇಧಿಸಿದೆ. ಇದನ್ನೇ ಮೂಲವಾಗಿಟ್ಟುಕೊಂಡ ಯುವಕ ಮಂಡಳಿ ಶ್ವಾನಗಳ ಓಟಕ್ಕೆ ಮೊಲವನ್ನೇ ಆಧಾರವನ್ನಾಗಿಸಿಕೊಂಡಿತು. ಆದರೆ ಇಲ್ಲಿ ಜೀವಂತ ಮೊಲದ ಬದಲಾಗಿ ಮೊಲದ ಬೊಂಬೆ ಉಪಯೋಗಿಸುವ ಮೂಲಕ ಶ್ವಾನಗಳ ಓಟದ ಸ್ಪರ್ಧೆಗೆ ಸೈಕಲ್ ಪೆಡಲ್ ಆಕಾರದಲ್ಲಿ ಯಂತ್ರವೊಂದಕ್ಕೆ. ಉದ್ದನೆಯ ತಂತಿ ಜೋಡಿಸಿ ಒಂದು ಮೊಲದ ಬೊಂಬೆ ಕಟ್ಟಲಾಗಿತ್ತು ಮತ್ತೊಂದು ತುದಿಯಿಂದ ಜೋರಾಗಿ ತಂತಿ ಎಳೆಯವಂತೆ ವ್ಯವಸ್ಥೆ ಮಾಡಲಾಯಿತು. ಮೊಲದ ಬೊಂಬೆಯನ್ನು ಮೊಲವೆಂದು ತಿಳಿದ ಶ್ವಾನಗಳು ಬೇಟೆಯಾಡಲು ಮುಂದಾಗುವಂತೆ ವ್ಯವಸ್ಥೆ ಮಾಡಿ ಆ ಮೂಲಕ ಓಟದ ಸ್ಪರ್ಧೆ ಆಯೋಜನೆ ಮಾಡಿದ್ದರುವ ವಿವಿಧ ಮೂಲೆ ಮೂಲೆಗಳಿಂದ ಹಲವಾರು ತಳಿಯ ಸುಮಾರು 40 ಹೆಚ್ಚು ಶ್ವಾನಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

ಶ್ವಾನಗಳ ಓಟದ ಸ್ಪರ್ದೆಗೆ ಮನ್ಮುಲ್ ನಿರ್ದೇಶಕರಾದ ಡಾಲು ರವಿ ಹಾಗೂ ಎಂಬಿ ಹರೀಶ್ ಜಂಟಿಯಾಗಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಕ್ರೀಡೆಗಳಲ್ಲಿ ನಾವೂ ಹಲವಾರು ಸ್ಪರ್ಧೆಗಳನ್ನು ನೋಡುತ್ತಿದ್ದು ನಮ್ಮ ತಾಲ್ಲೋಕಿನಲ್ಲಿ ಜಾಗಿನಕೆರೆ ಗ್ರಾಮದ ಯುವಕರು ಶ್ವಾನಗಳ ಸ್ಪರ್ಧೆ ಆಯೋಜಿಸಿರುವುದು ಸಂತೋಷದ ವಿಷಯವಾಗಿದೆ ಎಂದು ತಿಳಿಸಿದರು ಮೊದಲನೆ ಬಹುಮಾನವನ್ನು ಡಾಲುರವಿಯವರು 15 ಸಾವಿರ ಹಾಗೂ ದ್ವೀತಿಯ ಬಹುಮಾನವನ್ನು ಎಂಬಿ ಹರೀಶ್ 7ಸಾವಿರ ರೂಪಾಯಿಗಳನ್ನು ವಿತರಿಸಿದರು.
ಇದನ್ನು ಓದು: ಮುಂಬರುವ ತಾ. ಪಂ.ಜಿ.ಪಂ.ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಅಧಿಕಾರಕ್ಕೆ ಬರುವ ವಿಶ್ವಾಸವಿದೆ – ಶಾಸಕ ಹೆಚ್.ಟಿ.ಮಂಜು.
ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಶ್ವಾನಗಳ ಮಾಲೀಕರಿಗೆ ನಗದು ಬಹುಮಾನ ಮತ್ತು ಪಾರಿತೋಷಕ ವಿತರಿಸಲಾಯಿತು. ವಿಭಿನ್ನವಾಗಿ ನಡೆದ ಈ ಸ್ಪರ್ಧೆ ಜನರಲ್ಲಿ ಸಂಭ್ರಮ ಮನೆ ಮಾಡುವಲ್ಲಿ ಯಶಸ್ವಿಯಾಯಿತು. ತಂಡೋಪತAಡವಾಗಿ ಸ್ಪರ್ಧೆ ನೋಡಲು ಜನ ಆಗಮಿಸಿದ್ದರು. ನೆರೆದಿದ್ದ ಶ್ವಾನ ಪ್ರಿಯರು ಶ್ವಾನಗಳ ಓಟಕ್ಕೆ ಚಪ್ಪಾಳೆ ತಟ್ಟಿ,ಕೇಕೆ ಹಾಕಿ ಶ್ವಾನಗಳಿಗೆ ಹುರಿದುಂಬಿಸಿದರು ಬಹುಮಾನ ವಿಜೇತರು: ಪ್ರಥಮ ಸ್ಥಾನ ಚನ್ನರಾಯಪಟ್ಟಣದ ಕೊಯ್ಲಾ, ಹಾಸನಾಂಭ ಎಸಿ ಕ್ಲಬ್, ದ್ವಿತೀಯ ಸ್ಥಾನ ಕೆ.ಆರ್ ಪೇಟೆ ಬ್ಲೂ ಸುಂದರಿ, ಲಯನ್ಸ್ ರೇಸಿಂಗ್ ಕ್ಲಬ್, ತೃತೀಯ ಸ್ಥಾನ ಚನ್ನರಾಯಪಟ್ಟಣ, ಬ್ಲಡ್ ಶಾರ್ಟ್, ಹಾಸನಾಂಭ ಇಸ್ ಸಿಂಕ್ ಕ್ಲಬ್, ನಾಲ್ಕನೇ ಸ್ಥಾನ ಚೆಕ್ ಮೇಟ್ ಸ್ನೇಹಜೀವಿ ರೇಟಿಂಗ್ ಕ್ಲಬ್ ಹೊನ್ನಾವರ, ಐದನೇ ಸ್ಥಾನ ಜೀ ಗ್ಲಾಸ್ ಲಯನ್ಸ್ ರೇಸಿಂಗ್ ಕ್ಲಬ್ ಕೆ.ಆರ್.ಪೇಟೆ ಇವರು ಪಡೆದುಕೊಂಡರು. ಕಾರ್ಯಕ್ರಮಕ್ಕೆ ಊಟದ ವ್ಯವಸ್ಥೆಯನ್ನು ವ್ಯವಸ್ಥೆ ಮಾಡಿದ್ದರು.
ಕಾರ್ಯಕ್ರಮದ ನೇತೃತ್ವವನ್ನು ಜಾಗಿನಕೆರೆ ಕೋಳಿ ಫಾರಂ ಅಶೋಕ್, ಮುಖಂಡರಾದ ಅಂಬರೀಶ್, ಡೇರಿ ಹಾಲಿ ನಿರ್ದೇಶಕ ಹಾಗೂ ಮಾಜಿ ಅಧ್ಯಕ್ಷ ಕೃಷ್ಣ, ನಾಗೇಶ್(ಗುಂಡ),ರಾಜೇಗೌಡ, ಆಯೋಜಕರು ದೀಪು, ಕಿಟ್ಟಣ್ಣ, ಆದರ್ಶ, ವಹಸಿಕೊಂಡು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.
ಶ್ವಾನಗಳಿಗೆ, ಹಾಗೂ ಶ್ವಾನಗಳ ಮಾಲೀಕರಿಗೆ ಊಟೋಪಚಾರದ ವ್ಯವಸ್ಥೆ ಮಾಡಲಾಗಿತ್ತು.
– ಶ್ರೀನಿವಾಸ್ ಆರ್.

[…] […]