ನವದೆಹಲಿ: 2024–25ನೇ ಸಾಲಿನಲ್ಲಿ ದೇಶೀಯ ಪ್ರವಾಸಿಗರ ಭೇಟಿ ಪ್ರಮಾಣದಲ್ಲಿ ಕರ್ನಾಟಕವು ದೇಶದ ಟಾಪ್–3 ರಾಜ್ಯಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಕೇಂದ್ರ ಪ್ರವಾಸೋದ್ಯಮ ಇಲಾಖೆ ಬಿಡುಗಡೆ ಮಾಡಿದ 2025ರ ಭಾರತ ಪ್ರವಾಸೋದ್ಯಮ ದತ್ತಾಂಶ ಸಂಗ್ರಹ ವರದಿಯಲ್ಲಿ ಈ ಮಾಹಿತಿ ಬಹಿರಂಗಗೊಂಡಿದೆ.
ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಿದ ರಾಜ್ಯಗಳ ಪೈಕಿ ಉತ್ತರ ಪ್ರದೇಶ ಮೊದಲ ಸ್ಥಾನ, ತಮಿಳುನಾಡು ದ್ವಿತೀಯ ಸ್ಥಾನ ಹಾಗೂ ಕರ್ನಾಟಕ ತೃತೀಯ ಸ್ಥಾನದಲ್ಲಿದೆ. ಕರ್ನಾಟಕದ ಐತಿಹಾಸಿಕ ತಾಣಗಳು, ಹಿಲ್ ಸ್ಟೇಷನ್ಗಳು, ದೇವಸ್ಥಾನಗಳು, ವನ್ಯಜೀವಿ ಅಭಯಾರಣ್ಯಗಳು ಹಾಗೂ ಸಮೃದ್ಧ ಸಂಸ್ಕೃತಿಯೇ ಪ್ರವಾಸಿಗರನ್ನು ಸೆಳೆದ ಪ್ರಮುಖ ಕಾರಣವೆಂದು ತಜ್ಞರು ಹೇಳಿದ್ದಾರೆ.
ಇದನ್ನು ಓದು: `ಬೀದಿನಾಯಿ’ಗಳ ಉಪಟಳ ತಡೆಯಲು ಈ ಕ್ರಮ ಕೈಗೊಳ್ಳಿ : ಸರ್ಕಾರದಿಂದ ಮಹತ್ವದ ಆದೇಶ
ಟಾಪ್ 5 ರಾಜ್ಯಗಳು (2024–25): ಪ್ರವಾಸಿಗರ ಸಂಖ್ಯೆ
- ಉತ್ತರ ಪ್ರದೇಶ – 64.68 ಕೋಟಿ
- ತಮಿಳುನಾಡು – 30.68 ಕೋಟಿ
- ಕರ್ನಾಟಕ – 30.46 ಕೋಟಿ
- ಆಂಧ್ರ ಪ್ರದೇಶ – 29.03 ಕೋಟಿ
- ರಾಜಸ್ಥಾನ – 23.01 ಕೋಟಿ
ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕರ್ನಾಟಕದ ನಿರಂತರ ಏರಿಕೆಯನ್ನು ವರದಿ ಹೀಗೇ ಮತ್ತೊಮ್ಮೆ ದೃಢಪಡಿಸಿದೆ. ರಾಜ್ಯ ಸರ್ಕಾರ ಕೈಗೊಂಡಿರುವ ಮೂಲಸೌಕರ್ಯ ಅಭಿವೃದ್ಧಿ, ಹೇರಿಟೇಜ್ ತಾಣಗಳ ಸಂರಕ್ಷಣೆ ಹಾಗೂ ಪ್ರವಾಸಿಗರಿಗೆ ಅನುಕೂಲಕರವಾದ ಯೋಜನೆಗಳು ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆಗೆ ಕಾರಣವೆಂದು ಅಭಿಪ್ರಾಯ ವ್ಯಕ್ತವಾಗಿದೆ.