ಆರೋಗ್ಯಕರ ಜೀವನಕ್ಕೆ ಆರೋಗ್ಯಕರ ಆಹಾರ ಸೇವನೆಯ ಜೊತೆಗೆ ಗಾಢವಾದ ನಿದ್ರೆಯೂ ಅತ್ಯಗತ್ಯ. ಆದರೆ, ಇಂದಿನ ಒತ್ತಡದ ಜೀವನಶೈಲಿಯಲ್ಲಿ ನಿದ್ರಾಹೀನತೆ ಒಂದು ಪ್ರಮುಖ ಸಮಸ್ಯೆಯಾಗಿ ಮಾರ್ಪಟ್ಟಿದೆ. ತಜ್ಞರ ಪ್ರಕಾರ, ರಾತ್ರಿ ಮಲಗುವ ಮೊದಲು ಸೇವಿಸುವ ಕೆಲವು ಆಹಾರಗಳು ನಿದ್ರೆಯ ಗುಣಮಟ್ಟದ ಮೇಲೆ ಪರಿಣಾಮ ಬೀರುವುದರ ಜೊತೆಗೆ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು.
ಆದ್ದರಿಂದ, ಒಳ್ಳೆಯ ನಿದ್ರೆಗಾಗಿ ಕೆಲವು ಆಹಾರಗಳಿಂದ ದೂರವಿರುವಂತೆ ವೈದ್ಯರು ಸಲಹೆ ನೀಡಿದ್ದಾರೆ.
ಮಾಂಸಾಹಾರ ಸೇವನೆಯಿಂದ ದೂರವಿರಿ:
ಮಾಂಸಾಹಾರದಲ್ಲಿ ಕೊಬ್ಬು ಮತ್ತು ಪ್ರೋಟೀನ್ಗಳು ಹೇರಳವಾಗಿರುತ್ತವೆ. ಇವು ಜೀರ್ಣವಾಗಲು ಹೆಚ್ಚಿನ ಸಮಯ ತೆಗೆದುಕೊಳ್ಳುವ ಕಾರಣ, ರಾತ್ರಿಯ ಸಮಯದಲ್ಲಿ ಮಾಂಸಾಹಾರ ಸೇವಿಸುವುದು ಜೀರ್ಣಕ್ರಿಯೆಗೆ ಒತ್ತಡ ಉಂಟುಮಾಡಿ ನಿದ್ರೆಗೆ ಭಂಗ ತರುತ್ತದೆ. ಆದ್ದರಿಂದ, ರಾತ್ರಿಯ ಊಟದಲ್ಲಿ ಮಾಂಸಾಹಾರವನ್ನು ತಪ್ಪಿಸುವುದು ಉತ್ತಮ ಎಂದು ತಜ್ಞರು ಎಚ್ಚರಿಸುತ್ತಾರೆ.
ಮಸಾಲೆಯುಕ್ತ ಆಹಾರವನ್ನು ತಪ್ಪಿಸಿ:
ಮಸಾಲೆಯುಕ್ತ ಆಹಾರಗಳು ರಾತ್ರಿಯ ವೇಳೆ ಜೀರ್ಣಕ್ರಿಯೆಯನ್ನು ಕಷ್ಟಕರಗೊಳಿಸುತ್ತವೆ. ಇವು ಹೊಟ್ಟೆಯಲ್ಲಿ ಆಮ್ಲೀಯತೆಯ ಸಮಸ್ಯೆಗೆ ಕಾರಣವಾಗಿ, ರಾತ್ರಿಯಿಡೀ ಅಸ್ವಸ್ಥತೆ ಉಂಟುಮಾಡಬಹುದು. ಆದ್ದರಿಂದ, ರಾತ್ರಿಯ ಊಟದಲ್ಲಿ ಖಾರದ ಆಹಾರವನ್ನು ಸೇವಿಸದಿರುವುದು ಒಳ್ಳೆಯದು ಎಂದು ವೈದ್ಯರು ಸಲಹೆ ನೀಡುತ್ತಾರೆ.
ಕಾಫಿ ಮತ್ತು ಚಹಾದಿಂದ ಎಚ್ಚರ:
ಕಾಫಿ ಮತ್ತು ಚಹಾದಲ್ಲಿ ಕೆಫೀನ್ ಅಂಶವಿರುವುದರಿಂದ ಇವು ನಿದ್ರೆಗೆ ತೊಂದರೆಯಾಗಬಹುದು. ಸಂಜೆಯ ನಂತರ ಕಾಫಿ ಅಥವಾ ಚಹಾ ಕುಡಿಯುವುದು ಮೆದುಳನ್ನು ಚುರುಕಾಗಿರಿಸಿ, ನಿದ್ರೆಗೆ ಭಂಗ ತರುತ್ತದೆ. ಆದ್ದರಿಂದ, ರಾತ್ರಿಯ ವೇಳೆ ಈ ಪಾನೀಯಗಳನ್ನು ಸೇವಿಸದಿರುವುದು ಆರೋಗ್ಯಕ್ಕೆ ಒಳಿತು.
ಜಂಕ್ ಫುಡ್ಗೆ ಗುಡ್ಬೈ:
ಜಂಕ್ ಫುಡ್ನಲ್ಲಿ ಸ್ಯಾಚುರೇಟೆಡ್ ಕೊಬ್ಬಿನಂಶ ಹೆಚ್ಚಿರುವುದರಿಂದ ಇವು ಜೀರ್ಣವಾಗಲು ಸಮಯ ತೆಗೆದುಕೊಳ್ಳುತ್ತವೆ. ಇದರಿಂದ ರಾತ್ರಿಯ ನಿದ್ರೆಯ ಗುಣಮಟ್ಟ ಕಡಿಮೆಯಾಗುವುದಲ್ಲದೆ, ಇತರ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು. ಆದ್ದರಿಂದ, ರಾತ್ರಿಯ ಊಟದಲ್ಲಿ ಜಂಕ್ ಫುಡ್ಗೆ ದೂರವಿರುವಂತೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ವೈದ್ಯರ ಸಲಹೆ:
ಡಾ. ಸೌರಭ್ ಸೇಥಿ ಅವರಂತಹ ತಜ್ಞರು, ಒಳ್ಳೆಯ ನಿದ್ರೆಗಾಗಿ ರಾತ್ರಿಯ ಆಹಾರ ಪದ್ಧತಿಯನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳಬೇಕೆಂದು ಸಲಹೆ ನೀಡುತ್ತಾರೆ. ಲಘು ಆಹಾರ, ಸಮತೋಲನಯುಕ್ತ ಊಟ ಮತ್ತು ಸರಿಯಾದ ಸಮಯದಲ್ಲಿ ಆಹಾರ ಸೇವನೆಯಿಂದ ಆರೋಗ್ಯಕರ ನಿದ್ರೆಯನ್ನು ಖಾತರಿಪಡಿಸಿಕೊಳ್ಳಬಹುದು. ಒಟ್ಟಾರೆಯಾಗಿ, ಆರೋಗ್ಯಕರ ಜೀವನಕ್ಕೆ ಒಳ್ಳೆಯ ನಿದ್ರೆ ಅತ್ಯಮೂಲ್ಯ. ಆದ್ದರಿಂದ, ರಾತ್ರಿಯ ಆಹಾರ ಆಯ್ಕೆಯಲ್ಲಿ ಎಚ್ಚರಿಕೆ ವಹಿಸಿ, ಆರೋಗ್ಯವನ್ನು ಕಾಪಾಡಿಕೊಳ್ಳಿ.
ಈ ಮಾಹಿತಿಯನ್ನು ಸಾಮಾನ್ಯ ಜ್ಞಾನಕ್ಕಾಗಿ ಮಾತ್ರ ನೀಡಲಾಗಿದೆ. ಜೀ ಕನ್ನಡ ನ್ಯೂಸ್ ಇದನ್ನು ಧೃಡಿಕರಿಸುವುದಿಲ್ಲ.
