ತುಮಕೂರು:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ತುಮಕೂರು ಗ್ರಾಮಾಂತರ ಯೋಜನಾ ಕಚೇರಿ ವ್ಯಾಪ್ತಿಯ ದೇವಲಾಪುರ ಪಂಚಾಯತ್ ಬಿಟ್ಟನಕುರಿಕೆ ಕೆರೆ ಅಭಿವೃದ್ಧಿಗೆ ಗುದ್ದಲಿ ಪೂಜೆ ಮಾಡುವ ಮುಖಾಂತರ ಚಾಲನೆಯನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ನಿವೃತ್ತ ತಹಶೀಲ್ದಾರರಾದ ಸಣ್ಣಮುದ್ದಯ್ಯ ಮಾತನಾಡಿ ಡಾ||ಡಿ.ವೀರೇಂದ್ರ ಹೆಗ್ಗಡೆಯವರು ತುಮಕೂರು ಜಿಲ್ಲೆಗೆ ನೀಡಿದ ಕೊಡುಗೆ ಅಪಾರ ಎಂದರು ಕೆರೆಯ ಕಾಮಗಾರಿ ಉತ್ತಮ ರೀತಿಯಲ್ಲಿ ಆಗಲಿ ಎಂದು ಶುಭ ಹಾರೈಸಿದರು.
ಇದನ್ನು ಓದು: ತುಮಕೂರು : ಸೊಳ್ಳೆ ನಿವಾರಣೆಯಿಂದ ಸಾರ್ವಜನಿಕ ಆರೋಗ್ಯ: ಸಚಿವ ವಿ.ಸೋಮಣ್ಣ
ಜಿಲ್ಲಾ ನಿರ್ದೇಶಕರಾದ ಸತೀಶ್ಸುವರ್ಣ ಮಾತನಾಡಿ ರಾಜ್ಯದಲ್ಲಿ 900 ಕ್ಕೂ ಮಿಕ್ಕಿ ಕೆರೆಯನ್ನು ಅಭಿವೃದ್ಧಿ ಮಾಡಲಾಗಿದೆ. ಪಶು ಪಕ್ಷಿಗಳಿಗೆ ನಿರಂತರ ನೀರು ಪೂರೈಕೆ ಮಾಡುವುದು ಈ ಊರಿಗೆ ಉತ್ತಮ ನೀರಿನ ಪೂರೈಕೆ ಮಾಡುವ ಉದ್ದೇಶ ಎಂದು ತಿಳಿಸಿದರು. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ತಾಲೂಕಿನ ಯೋಜನಾಧಿಕಾರಿ ಸಂದೇಶ್.ಪಿ.ಬಿ, ದೇವಲಾಪುರ ಪಂಚಾಯತ್ ಅಧ್ಯಕ್ಷರಾದ ಸಿದ್ದರಾಜು ಕೆರೆ ಸಮಿತಿ ಅಧ್ಯಕ್ಷರಾದ ನಾರಾಯಣಪ್ಪ, ಪಂಚಾಯತ್ ಸದಸ್ಯರಾದ ವಿಜಯ್ ಕುಮಾರರವರು ಶೇಖರಯ್ಯ ಶಬೀನಾ ಇಬ್ರಾಹಿಂ. ಕೃಷಿ ಮೇಲ್ವಿಚಾರಕರಾದ ರಾಘವೇಂದ್ರ, ಮೇಲ್ವಿಚಾರಕರಾದ ಹೇಮಂತ್, ಸೇವಾಪ್ರತಿನಿಧಿ ಮಂಜಮ್ಮ, ಊರಿನ ಮುಖಂಡರು,ನಾಗರಿಕರು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ
