ಬೆಂಗಳೂರು : ಸಾಹಿತಿ ಮತ್ತು ಕನ್ನಡ ಸಾಹಿತ್ಯ, ಸಂಸ್ಕೃತಿ ಪರಿಚಾರಕ ಡಾ.ಸಿಸಿರಾ ಸ್ನೇಹ ಬಳಗ ಕಳೆದ ಐದಾರು ವರ್ಷಗಳಿಂದ ಕೊಡ ಮಾಡುತ್ತಿರುವ ರಾಜ್ಯ ಮಟ್ಟದ ಡಾ.ಸಿಸಿರಾ ಯುವ ಸಾಹಿತ್ಯ ಪ್ರಶಸ್ತಿಗೆ ತುಮಕೂರಿನ ಯುವ ಸಾಹಿತಿ, ಕನ್ನಡ ಪ್ರಾಧ್ಯಾಪಕ ಪ್ರೊ.ದುಗ್ಗೇನಹಳ್ಳಿ ಸಿದ್ದೇಶ್ ಮತ್ತು ಡಾ.ಸಿಸಿರಾ ಸಾಂಸ್ಕೃತಿಕ ಪರಿಚಾರಿಕೆ ಪ್ರಶಸ್ತಿಗೆ ಬಾಗಲಕೋಟೆಯ ಯುವ ಕವಿ, ಮೇಘ ಮೈತ್ರಿ ಸಾಹಿತ್ಯ ವೇದಿಕೆ ಅಧ್ಯಕ್ಷ ರಮೇಶ್ ಎಂ. ಕಮತಗಿ ಆಯ್ಕೆ ಮಾಡಲಾಗಿದೆ ಎಂದು ಸಿಸಿರಾ ಸ್ನೇಹ ಬಳಗದ ಸಂಚಾಲಕ ಡಾ.ಆರ್.ವಾದಿರಾಜ್, ಡಾ.ಕೃಷ್ಣ ಹಾನ್ ಬಾಳ್ ಹಾಗೂ ಕೆ.ಎಂ.ರೇವಣ್ಣ ತಿಳಿಸಿದ್ದಾರೆ.
ಏಪ್ರಿಲ್ 10 ನೇ ತಾರೀಖು ಗುರುವಾರ ಬೆಳಗ್ಗೆ 10 00 ಗಂಟೆಗೆ ಬೆಂಗಳೂರಿನ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಏರ್ಪಡಿಸಿರುವ ಸಾಂಸ್ಕೃತಿಕ ಚಿಂತಕ ಡಾ.ಎಸ್.ರಾಮಲಿಂಗೇಶ್ವರ (ಸಿಸಿರಾ) ಅವರ 28 ವರ್ಷಗಳ ಸಾಹಿತ್ಯ, ಸಂಸ್ಕೃತಿ, ಹೋರಾಟ ಹಾಗೂ ಅವರ ಬದುಕು ಬರಹ ಕುರಿತಾದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಡಾ.ಬೈರಮಂಗಲ ರಾಮೇಗೌಡರು ಪ್ರಶಸ್ತಿ ಪ್ರಧಾನ ಮಾಡುವರು.
ಪ್ರಶಸ್ತಿಯು ನಗದು, ಶಾಲು ಫಲ ಪುಷ್ಪ, ಹಾರ, ಪಲಕ ನೀಡಿ ಗೌರವಿಸಲಾಗುತ್ತದೆ. ಇದೇ ಸಂದರ್ಭದಲ್ಲಿ ಡಾ.ದಾಕ್ಷಾಯಿಣಿ ಎಂ,(ಪಿಹೆಚ್ .ಡಿ.ಪುರಸ್ಕೃತರು), ಡಾ.ಮುರಳಿಮೋಹನ್.ವಿ, (ಪಿಹೆಚ್.ಡಿ.ಪುರಸ್ಕೃತರು) ಪ್ರಭಾಕರ ಜಿ.ಗಂಗೊಳ್ಳಿ (ಹಿರಿಯ ಕನ್ನಡ ಕಾರ್ಯಕರ್ತರು), ಶಶಿಧರ ಹಾಲಾಡಿ ( ಕಾದಂಬರಿಕಾರರು), ಬಿ.ಆರ್.ಸಿದ್ಧರಾಜು ( ಕನ್ನಡ ಪ್ರೇಮಿಗಳು), ಡಾ.ಬೈರಮಂಗಲ ರಾಮೇಗೌಡರು (ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು) ಗೌರವಿಸಿ ಅಭಿನಂದಿಸಲಾಗುವುದೆಂದು ತಿಳಿಸಿದ್ದಾರೆ.
