ಚಂಡೀಗಢ- ಫೈಟರ್ ಏರ್ಕ್ರಾಫ್ಟ್ಗಳಿಗೆ ಅಗತ್ಯವಾದ ಎಸ್ಕೇಪ್ ಸಿಸ್ಟಮ್ ಅಭಿವೃದ್ಧಿಯಲ್ಲೊಂದು ಮಹತ್ವದ ಯಶಸ್ಸು ಸಾಧಿಸಿ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಸೋಮವಾರ 800 ಕಿಮೀ/ಗಂಟೆಯ ನಿಖರ ಮತ್ತು ನಿಯಂತ್ರಿತ ವೇಗದಲ್ಲಿ ಹೈ-ಸ್ಪೀಡ್ ರಾಕೆಟ್-ಸ್ಲೆಡ್ ಪರೀಕ್ಷೆಯನ್ನು ಯಶಸ್ವಿಯಾಗಿ ನೆರವೇರಿಸಿದೆ.
ಈ ಪರೀಕ್ಷೆಯನ್ನು ಚಂಡೀಗಢದಲ್ಲಿರುವ ಟರ್ಮಿನಲ್ ಬ್ಯಾಲಿಸ್ಟಿಕ್ಸ್ ರಿಸರ್ಚ್ ಲ್ಯಾಬೊರೇಟರಿ (TBRL) ಯ ರೈಲ್ ಟ್ರ್ಯಾಕ್ ರಾಕೆಟ್ ಸ್ಲೆಡ್ (RTRS) ಸೌಲಭ್ಯದಲ್ಲಿ ಕೈಗೊಳ್ಳಲಾಗಿದ್ದು, ಕ್ಯಾನೊಪಿ ಸೆವೆರೆನ್ಸ್, ಎಜೆಕ್ಷನ್ ಸೀಕ್ವೆನ್ಸಿಂಗ್ ಹಾಗೂ ಸಂಪೂರ್ಣ ಏರ್ಕ್ರ್ಯೂ-ರಿಕವರಿ ಪ್ರಕ್ರಿಯೆಗಳ ಸಾಮರ್ಥ್ಯವನ್ನು ಮೌಲ್ಯೀಕರಿಸುವ ಪ್ರಮುಖ ಹಂತವಾಗಿದೆ.
Watch this: ಕೇಂದ್ರ ಬ್ಯಾಂಕ್ನ ನೂತನ ಕಾರ್ಯನಿರ್ವಾಹಕ ನಿರ್ದೇಶಕಿ ಉಷಾ ಜಾನಕಿರಾಮನ್ ಆಯ್ಕೆ
